
ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬದುಕು ಕಟ್ಟಿಕೊಂಡವರು ಹಲವರು. ಅಂತಹ ನಟಿಯರ ಸಾಲಿಗೆ ಶ್ವೇತಾ ಚಂಗಪ್ಪ (Shwetha Changappa) ಕೂಡ ಸೇರಿಕೊಳ್ಳುತ್ತಾರೆ. ಈ ಶ್ವೇತಾ ಚಂಗಪ್ಪ ನಟಿಯಾಗಿ , ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ನಟನೆ ಹಾಗೂ ಅನೇಕ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುತ್ತಾ ಬ್ಯುಸಿಯಾಗಿರುವ ನಟಿಯೂ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಎನ್ನುವುದು ಎಲ್ಲರಿಗೂ ತಿಳಿದಿದೆ. ತನ್ನ ಅಭಿಮಾನಿಗಳೊಂದಿಗೆ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ಮತ್ತೆ ವಿಶೇಷವಾದ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಶ್ವೇತಾ ಚಂಗಪ್ಪ ತಮ್ಮ ಪತಿ ಕಿರಣ್ ಅಪ್ಪಚ್ಚು (Kiran Appacchu) ಜೊತೆ ಸಮುದ್ರ ತೀರದಲ್ಲಿ ರೀಲ್ಸ್ ಮಾಡಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ವಿಕ್ರಮ್ ರವಿಚಂದ್ರನ್ (Vikram Ravichandran) ಅಭಿನಯದ ತ್ರಿವಿಕ್ರಮ (Trivikram) ಚಿತ್ರದ ನಿನ್ನೆ ತನಕ.. ಹಾಡಿಗೆ ಶ್ವೇತಾ ಚಂಗಪ್ಪ ಹಾಗೂ ಪತಿ ಕಿರಣ್ ರೀಲ್ಸ್ ಮಾಡಿದ್ದರು. ಈ ಹಿಂದೆ ಶ್ವೇತಾ ಹಾಗೂ ಕಿರಣ್ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.
ಎರಡು ದಿನಗಳ ಹಿಂದೆಯಷ್ಟೇ ಶ್ವೇತಾ ಚಂಗಪ್ಪ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ನನ್ನ ಜೀವನದ ಭಾಗವಾಗಿದ್ದಕ್ಕೆ ಧನ್ಯವಾದಗಳು ಎಂದು ಶ್ವೇತಾ, ತಮ್ಮ ಪತಿಗೆ ಥ್ಯಾಂಕ್ಸ್ ಹೇಳಿದ್ದರು. ಇದೀಗ ಸಮುದ್ರ ತೀರದಲ್ಲಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿರುವ ನಟಿ ತುಂಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋದ ಜೊತೆಗೆ, ಪ್ರಪಂಚದ ಅತ್ಯುತ್ತಮ ಮತ್ತು ಸುಂದರವಾದ ವಸ್ತುಗಳನ್ನು ನೋಡಲು ಅಥವಾ ಸ್ಪರ್ಶಿಸಲು ಸಾಧ್ಯವಿಲ್ಲ. ಅವುಗಳನ್ನು ಹೃದಯದಿಂದ ಅನುಭವಿಸಬೇಕು ಎಂದು ಬರೆದುಕೊಂಡಿದ್ದಾರೆ.
ಎಸ್. ನಾರಾಯಣ ನಿರ್ದೇಶನದ `ಸುಮತಿ’ (Sumathi) ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ನಂತರ ತಿರುಗಿ ನೋಡಿದ್ದೇ ಇಲ್ಲ. ಇನ್ನು,2006 ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ `ಕಾದಂಬರಿ’ (Kadambari) ಸೀರಿಯಲ್ ಹಿಟ್ ಆಯಿತು. ಈ ಟಿವಿ ಕನ್ನಡದಲ್ಲಿ ಪ್ರಸಾರವಾದ ಸುಕನ್ಯ (Sukanya) ಮತ್ತು ಅರುಂಧತಿ (Arundhati) ಧಾರಾವಾಹಿಯಲ್ಲಿಯೂ ನಟಿಸಿ ಸೈ ಎನಿಸಿಕೊಂಡರು. ಇನ್ನು,`ಯಾರಿಗುಂಟು ಯಾರಿಗಿಲ್ಲಾ (Yariguntu Yarigilla) ಕುಣಿಯೋಣ ಬಾರಾ (Kuniyona Baara), ಡ್ಯಾನ್ಸ್ ಜ್ಯೂನಿಯರ್ಸ್ ಡ್ಯಾನ್ಸ್ ( Dance Juniors Dance) ಮುಂತಾದ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಕೆಲಸ ಮಾಡಿದರು.
ಅದಲ್ಲದೇ, ತಂಗಿಗಾಗಿ (Tangigagi) ಚಿತ್ರದ ಮೂಲಕ ಬೆಳ್ಳಿತೆರೆಗೂ ಎಂಟ್ರಿ ಕೊಟ್ಟರು. ಹೀಗಿರುವಾಗ ವರ್ಷ (Varsha), ಕೃಷ್ಣನ್ ಮ್ಯಾರೇಜ್ ಸ್ಟೋರಿ ( Krishan Marriage Story) , ಗನ್ (Gan) ಮುಂತಾದ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅಷ್ಟೇ ಅಲ್ಲದೇ, ಕನ್ನಡ ಬಿಗ್ ಬಾಸ್ ಸೀಸನ್ 2 (Big Boss Sisan 2) ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಸದ್ಯಕ್ಕೆ ನಿರೂಪಣೆ, ನಟನೆ ಹಾಗೂ ಸಂಸಾರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.
View this post on Instagram
Comments are closed.