
Kannada News: ತೆಲುಗಿನಲ್ಲಿ ವರುಣ್ ಸಂದೇಶ್ (Varun Sandesh) ಅವರ ಜೊತೆಗೆ ಕೊತ್ತ ಬಂಗಾರು ಲೋಕಂ ಚಿತ್ರದಲ್ಲಿ ನಟಿಸಿದ್ದ ಶ್ವೇತಾ ಬಸು ಪ್ರಸಾದ್ (Shwetha Basu Prasad) ಅತ್ಯಂತ ಜನಪ್ರಿಯ ನಟಿಯಾಗಿದ್ದವರು. ಈ ಚಿತ್ರದ ಮೂಲಕ ನಟನೆಗೆ ಎಂಟ್ರಿಕೊಟ್ಟ ಅವರು ಆ ಕಾಲದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದರು. ಕೊತ್ತಾ ಬಂಗಾರು ಲೋಕಂ ಚಿತ್ರವು ಭರ್ಜರಿ ಸೂಪರ್ ಡೂಪರ್ ಹಿಟ್ ಆಗಿ ಶ್ವೇತ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆಯನ್ನು ತಂದುಕೊಟ್ಟಿತು. ಆ ಮೂಲಕ ಅವರನ್ನು ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುವಂತೆ ಮಾಡಿತು. ಆದರೆ ದುರಾದೃಷ್ಟವಶಾತ್ ಆನಂತರ ಅವರು ನಟಿಸಿದ ಯಾವುದೇ ಚಿತ್ರಗಳು ಅಷ್ಟೇನೂ ಹೆಸರು ಮಾಡಲಿಲ್ಲ. ಆನಂತರ ಅವರು ಬಹುತೇಕ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಇದೀಗ ನಟಿ ಶ್ವೇತಾ ಮತ್ತೆ ಸುದ್ದಿಯಲ್ಲಿದ್ದಾರೆ.
Comments are closed.