ಕನ್ನಡದ ಕಿರುತೆರೆಯ ಕಲಾವಿದೆ ಹಾಗೂ ಕೆಲವು ಸೀರಿಯಲ್ ಮೂಲಕ ಅಪಾರ ಅಭಿಮಾನಿ ಬಳಗವ ಗಳಿಸಿಕೊಂಡು ಕೆಲ ರಿಯಾಲಿಟಿ ಶೋಗಳ ಮೂಲಕವೂ ಗುರುತಿಸಿಕೊಂಡ ನಟಿ ಶ್ವೇತಾ ಚೆಂಗಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಇದೀಗ ಸಕ್ರಿಯ ಆಗಿದ್ದಾರೆ. ಬಿಗ್ ಬಾಸ್ ಮನೆಗೂ ಕೂಡ ಹೋಗಿ ಬಂದಿದ್ದ ನಟಿ ಶ್ವೇತಾ ಚಂಗಪ್ಪ ಅವರು ನಂತರದ ದಿನಗಳಲ್ಲಿ ಕಾಣಿಸಿಕೊಂಡಿದ್ದು ಮಜಾ ಟಾಕೀಸ್ ಕಾಮಿಡಿ ಷೋನ ವೇದಿಕೆ ಮೂಲಕ. ಅವರದೇ ಆದ ನಟನೆ ಮೂಲಕ ಸಾಕಷ್ಟು ಅಭಿಮಾನಿಗಳನ್ನು ನಗಿಸುತ್ತಾ, ಹೆಚ್ಚು ಚಟಪಟನೆ ಮಾತನಾಡುತ್ತಾ ರಾಣಿ ಪಾತ್ರದಿಂದಲೇ ಹೆಚ್ಚು ಜನಪ್ರಿಯತೆ ಹೊಂದಿದವರು. ಮಜಾ ಟಾಕೀಸ್ ಮನೆಯ ರಾಣಿ ಆಗಿ ನಟ ಸೃಜನ್ ಲೋಕೇಶ್ ಅವರ ಜೊತೆ ಮಾತನಾಡುತ್ತಿದ್ದ ಪರಿ,
ಅವರ ಜೊತೆಗಿನ ಕಾಮಿಡಿ ಜಲಕ್, ನೀಡುತ್ತಿದ್ದ ಆ ನಗೆ ಟಾನಿಕ್ ಈಗಲು ಕೂಡ ಕನ್ನಡಿಗರಿಗೆ ಅಚ್ಚುಮೆಚ್ಚು.ನಟಿ ಶ್ವೇತಾ ಚೆಂಗಪ್ಪ ಅವರು ನಿರೂಪಣೆಯಲ್ಲೂ ಕೂಡ ಸೈ ಅನಿಸಿಕೊಂಡವರು. ಧಾರವಾಹಿ ಮೂಲವೇ ಅಪಾರ ಅಭಿಮಾನಿ ಬಳಗ ಗಿಟ್ಟಿಸಿಕೊಂಡಿದ್ದ ನಟಿ ಶ್ವೇತಾ ಅವರು ಇತ್ತೀಚಿಗೆ ಕನ್ನಡ ಕಕಿರುತೆರೆಯ ಮತ್ತೊಂದು ರಿಯಾಲಿಟಿ ಶೋ ಗೆ ನಿರೂಪಕಿಯಾಗಿ ಮತ್ತೆ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮದುವೆಯಾದ ಬಳಿಕ ಗರ್ಭಿಣಿ ಆಗಿದ್ದ ವೇಳೆ ಹಾಗೆ ಮಗುವಾದ ಬಳಿಕ ನಟನೆಯಿಂದ ಮತ್ತು ಕ್ಯಾಮರದಿಂದ ದೂರ ಇದ್ದ ಶ್ವೇತಾ ಚಂಗಪ್ಪ ಅವರು ಹೆಚ್ಚು ಮಗನನ್ನ ಆರೈಕೆ ಮಾಡುತ್ತಾ ಸಮಯ ಕಳೆದಿದ್ದರು..
ಇದೀಗ ಇತ್ತೀಚಿಗೆ ಆರಂಭವಾಗಿರುವ ಜೋಡಿ ನಂಬರ್ ಒಂದು ಕಾರ್ಯಕ್ರಮದ ವೇದಿಕೆಯಲ್ಲಿ ನಿರೂಪಣೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಈಗಿನ ನಟಿಯರು ಎಂದರೆ ಹೆಚ್ಚಾಗಿ ಯಾವುದಾದರೂ ಒಂದು ವಿಡಿಯೋ ಅಥವಾ ಮ್ಯೂಸಿಕ್ ಬಾರಿ ವೈರಲ್ ಆಗುತ್ತಿದೆ ಎಂದರೆ ಸಾಕು, ಅದಕ್ಕೆ ರಿಲೀಸ್ ಮಾಡುವುದುಅದೇ ರೀತಿ ಶ್ವೇತಾ ಅವರು ತುಂಬಾ ಮಾಡರ್ನ್ ಡ್ರೆಸ್ ಈಗ ಹಾಕಿದ್ದು ಈ ವಿಡಿಯೋದಲ್ಲಿ ಸ್ಟೈಲಿಶ್ ಆಗಿ ಕಾಣಿಸಿದ್ದಾರೆ. ಒಂದು ಹಾಡಿಗೆ ತಲೆದೂಗಿಸಿರುವ ನಟಿ ಶ್ವೇತಾ ಅವರ ಈ ಅವತಾರಕ್ಕೆ ಫಿದಾ ಆಗಿದ್ದಾರೆ ನೆಟ್ಟಿಗರು. ಅಸಲಿಗೆ ನಟಿಯ ನೃತ್ಯ ಹೇಗಿದೆ ಗೊತ್ತ.? ಇಲ್ಲಿದೆ ನೋಡಿ ವಿಡಿಯೋ. ನಿಮಗೂ ಕೂಡ ಖಂಡಿತಾ ಇಷ್ಟ ಆಗುತ್ತದೆ. ಇಷ್ಟವಾದಲ್ಲಿ ಶೇರ್ ಮಾಡಿ ಮಾಹಿತಿ ಬಗ್ಗೆ ಅಭಿಪ್ರಾಯ ತಿಳಿಸಿ, ಧನ್ಯವಾದಗಳು..