ಸ್ಯಾಂಡಲ್ ವುಡ್ ನಟಿ ಶುಭಾ ಪೂಂಜಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾಗಿಂತ ಹೆಚ್ಚಾಗಿ ಬಿಗ್ ಬಾಸ್ ಮನೆಗೆ ಬಂದ ನಂತರವೇ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ. ಸೆಕೆಂಡ್ ಇನ್ನಿಂಗ್ಸ್ ಬಿಗ್ ಮನೆಗೆ ಮತ್ತೊಮ್ಮೆ ಹೋಗಿದ್ದ ಶುಭಾ ಫಿನಾಲೆ ವರೆಗೂ ಇದ್ದು ಮನೆಯಿಂದ ಹೊರಬಂದರು. ಶುಭಾ ಪೂಂಜಾ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು ಒಟ್ಟು 14 ವಾರಗಳ ಕಾಲ. ಇದೀಗ ಶುಭಾ ಪೂಂಜಾ ಅವರು ಹೊಸ ಸ್ಟೈಲ್ ನಲ್ಲಿ ಮಿಂಚುತ್ತಿದ್ದಾರೆ.

ನಟಿ ಶುಭಾ ಪೂಂಜಾ ಜ್ಯಾಕ್ ಪಾಟ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ಆದರೆ ಇವರು ಹೆಚ್ಚಿನ ಜನಪ್ರಿಯತೆ ಪಡೆದಿದ್ದು ದುನಿಯಾ ವಿಜಯ್ ಅವರಿಗೆ ನಾಯಕಿಯಾಗಿ ನಟಿಸಿದ ಚಂಡ ಸಿನಿಮಾ ಇಂದ. ಚಂಡ ನಂತರ ಹಲವಾರು ಸಿನಿಮಾಗಳಲ್ಲಿ ಶುಭಾ ನಾಯಕಿಯಾಗಿ ಕಾಣಿಸಿಕೊಂಡರು. ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು. ಮೊಗ್ಗಿನ ಮನಸ್ಸು ಸಿನಿಮಾ ಅಭಿನಯಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದುಕೊಂಡರು.

ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ಮನೆಯೊಳಗೆ ಹೋದರು ಶುಭಾ. ಬಿಗ್ ಬಾಸ್ ಮನೆಗೆ ಹೋದ ನಂತರ ಶುಭಾ ಅವರ ಬಗ್ಗೆ ಜನರಿಗೆ ಇದ್ದ ಅಭಿಪ್ರಾಯವೇ ಬದಲಾಯಿತು. ಈ ಮೊದಲು ಜನರಿಗೆ ಶುಭಾ ಅವರ ಬಗ್ಗೆ ಸ್ವಲ್ಪ ಬೇರೆಯದೇ ರೀತಿಯ ಅಭಿಪ್ರಾಯ ಇತ್ತು. ಬಿಗ್ ಮನೆಯಲ್ಲಿ ಶುಭಾ ಅವರು ಎಷ್ರು ಮುಗ್ಧರು ಒಳ್ಳೆಯ ಸ್ವಭಾವದವರು ಎನ್ನುವುದು ಎಲ್ಲರಿಗೂ ಗೊತ್ತಾಯಿತು. ಶುಭಾ ಪೂಂಜಾ ಅವರು ಮೂಲತಃ ಉಡುಪಿಯ ಶಿರುವಾ ಗ್ರಾಮದವರು. ನಮಗೆಲ್ಲ ಗೊತ್ತಿರುವ ಹಾಗೆ ಶುಭಾ ಪೂಂಜಾ ಅವರಿಗೆ ಈಗಾಗಲೇ ಮದುವೆ ಫಿಕ್ಸ್ ಆಗಿದೆ. ಮುಂದಿನ ವರ್ಷ ಮದುವೆಯಾಗಲಿದ್ದಾರೆ.

ಪ್ರಸ್ತುತ ರೈಮ್ಸ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಶುಭಾ ಪೂಂಜಾ, ಹೊಸ ಫೋಟೋಶೂಟ್ ಗೆ ಪೋಸ್ ನೀಡಿದ್ದಾರೆ. ಹೊಸ ರೀತಿಯ ಹೇರ್ ಸ್ಟೈಲ್ ನಲ್ಲಿ, ಕಪ್ಪು ಬಣ್ಣದ ಡಿಸೈನರ್ ಬಟ್ಟೆ ಧರಿಸಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ ಶುಭಾ. ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳಿಗೆ ಈಗಾಗಲೇ ಬಹಳ. ಮೆಚ್ಚುಗೆ ಸಿಗುತ್ತಿದೆ. 15 ಸಾವಿರಕ್ಕಿಂತ ಹೆಚ್ಚು ಜನ ಫೋಟೋಗಳನ್ನು ಇಷ್ಟಪಟ್ಟು ಕಮೆಂಟ್ಸ್ ಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಶುಭಾ ಅವರ ಫೋಟೋ ನೋಡಿ..
