Shubha Poonja: ಮುದ್ದು ಮುಖದ ಚೆಲುವೆ ನಟಿ ಶುಭಪುಂಜ ಅವರು ಕಳೆದ ಎರಡು ದಶಕಗಳಿಂದಲೂ ಕೂಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ . ಮೊಗ್ಗಿನ ಮನಸ್ಸು (Moggina Manassu) ಸಿನಿಮಾದಲ್ಲಿ ಇವರು ಮಾಡಿದಂತಹ ಅಮೋಘ ನಟನೆಯನ್ನು ಯಾರಿಂದಲೂ ಕೂಡ ಮರೆಯೋದಕ್ಕೆ ಸಾಧ್ಯವಿಲ್ಲ.
ತದನಂತರ ಚಂದ, ಸ್ಲಂ ಬಾಲ, ಜಾಕ್ಪಾಟ್, ಕಂಠೀರವ, ಗೂಗಲ್, ಪರಾರಿ ಜೈ ಮಾರುತಿ ಹೀಗೆ ಕನ್ನಡದಲ್ಲಿ ಸುಮಾರು 15 ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.
ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲಿಯೂ (Tamil Cinema) ಕೂಡ ಸಾಕಷ್ಟು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.ಒಟ್ಟಾರೆಯಾಗಿ ಹೇಳುವುದಾದರೆ ನಟಿ ಶುಭಪುಂಜ ಅವರು ಸದ್ಯಕ್ಕೆ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.

ಬಿಗ್ ಬಾಸ್ ನಲ್ಲೂ ನಟಿ ಮಿಂಚು
ಇದು ಒಂದು ಕಡೆಯಾದರೆ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಕೂಡ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಆಗಮಿಸಿದ್ದು ನಿಮಗೆ ತಿಳಿದೇ ಇದೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ನಟಿ ಶುಭಪುಂಜ ಅವರಿಗೆ ಇನ್ನಷ್ಟು ಸಿನಿಮಾದಲ್ಲಿ ನಟಿಸುವಂತಹ ಆಫರ್ ಸಿಕ್ಕಿದೆ.
ಸದ್ಯಕ್ಕೆ ಅಂಬುಜ ಎಂಬ ಸಿನಿಮಾದಲ್ಲಿ ಪ್ರೆಸ್ ರಿಪೋರ್ಟರ್ ಪಾತ್ರ ಒಂದನ್ನು ನಿಭಾಯಿಸಲಿದ್ದಾರೆ, ಈ ಸಿನಿಮಾದ ಶೂಟಿಂಗ್ ನಲ್ಲಿ ಸಕ್ಕತ್ ಬ್ಯುಸಿಯಾಗಿದ್ದಾರೆ ಇದಿಷ್ಟು ಇವರ ವೃತ್ತಿ ಜೀವನ. ಆದರೆ ನಟಿ ಶುಭಪುಂಜ ಅವರು ಮಾಧ್ಯಮದ ಮುಂದೆ ಮಾತನಾಡುವ ಸಮಯದಲ್ಲಿ ತಮ್ಮ ವೈಯಕ್ತಿಕ ವಿಚಾರವನ್ನು ಕೂಡ ಹಂಚಿಕೊಂಡಿದ್ದಾರೆ.
ಮದುವೆ ಬಳಿಕ ಏನಾಯ್ತು
ಹೌದು ನಟಿ ಶುಭಪುಂಜ ಹೇಳಿದ ವಿಚಾರ ಕೇಳಿ ನಿಜಕ್ಕೂ ಅಭಿಮಾನಿಗಳು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ ಅಷ್ಟಕ್ಕೂ ಶುಭಪುಂಜ ಅವರು ಹೇಳಿದ್ದಾದರೂ ಏನು ಎಂಬುದನ್ನು ನೋಡುವುದಾದರೆ.
ಶುಭಪುಂಜ ಅವರು ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ನಮ್ಮ ಬಹುಕಾಲದ ಗೆಳೆಯ ಹಾಗೂ ಬಿಸಿನೆಸ್ ಮ್ಯಾನ್ ಆದಂತಹ ಶಮಂತ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.
ಸಾಮಾನ್ಯವಾಗಿ ನಟ ನಟಿಯರು ಮದುವೆ ಎಂದರೆ ಬಹಳ ಅದ್ದೂರಿಯಾಗಿ ಆಡಂಬರದಿಂದ ಮದುವೆ ಮಾಡಿಕೊಳ್ಳುತ್ತಾರೆ. ಆದರೆ ಮದುವೆಗೂ ಮುಂಚೆಯೇ ಶುಭಪುಂಜ ಅವರು ಸರಳವಾಗಿಯೇ ವಿವಾಹವಾಗಬೇಕು ಎಂಬ ಷರತ್ತು ಅನ್ನು ವಿಧಿಸಿದ್ದರಂತೆ.

ಒಂದು ಷರತ್ತಿನ ಅನುಗುಣವಾಗಿ ಶಮಂತ್ ಅವರು ಶುಭಪುಂಜ ಅವರ ಅಜ್ಜಿ ಮನೆ ಆದಂತಹ ಮಂಗಳೂರಿನ ಸಮೀಪದ ಪುಟ್ಟ ಗ್ರಾಮ ಒಂದರಲ್ಲಿ ಮನೆಯಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಇವರ ಮದುವೆಗೆ ಕುಟುಂಬಸ್ಥರು ಆತ್ಮೀಯ ಸ್ನೇಹಿತರನ್ನು ಬಿಟ್ಟರೆ ಬೇರೆ ಯಾರೂ ಕೂಡ ಹಾಜರಾಗಿರಲಿಲ್ಲ.
ಮದುವೆಯಾಗಿ ಎರಡು ವರ್ಷ ಆಗಿದೆ ಈ ಎರಡು ವರ್ಷದಲ್ಲಿ ತಮ್ಮ ದಾಂಪತ್ಯ ಜೀವನ ಚೆನ್ನಾಗಿಯೇ ಇದೆ ಶಮಂತ್ ನನ್ನನ್ನು ಅರ್ಥ ಮಾಡಿಕೊಂಡಿದ್ದಾರೆ ನನ್ನ ಎಲ್ಲಾ ಸಿನಿಮಾ ಕೆಲಸಗಳಿಗೂ ಕೂಡ ಸಪೋರ್ಟ್ ಮಾಡುತ್ತಾರೆ. ನಿಜಕ್ಕೂ ಕೂಡ ನಾನು ಅದೃಷ್ಟವಂತೆ ಆತನನ್ನು ಲೈಫ್ ಪಾರ್ಟ್ನರ್ ಆಗಿ ಪಡೆದಿದ್ದು ಎಂದು ಹೇಳಿದ್ದಾರೆ.
ಗಂಡನ ಮೇಲೆ ಆರೋಪ
ಇದಿಷ್ಟು ಒಳ್ಳೆಯ ವಿಚಾರವಾದರೆ ಇದರ ನಡುವೆಯೇ ತಮ್ಮ ಪತಿಯ ವಿರುದ್ಧ ಕಿಡಿ ಕಾರಿದ್ದಾರೆ ಹೌದು ಶುಭಪುಂಜ ಹಾಗೂ ಶವಂತ್ ಅವರು ಮದುವೆಯಾಗಿ ಎರಡು ವರ್ಷವಾಗಿದೆ.
ಆದರೂ ಕೂಡ ನಾವಿಬ್ಬರೂ ಇನ್ನು ಹನಿಮೂನ್ ಗೆ ಹೋಗಿಲ್ಲ ಈ ವಿಚಾರದ ಬಗ್ಗೆ ನನಗೆ ಬೇಸರವಿದೆ ಮದುವೆಯಾದ ಒಂದೇ ವಾರಕ್ಕೆ ನಾನು ಸಿಕ್ಕಾಪಟ್ಟೆ ಬ್ಯುಸಿ ಅದೇ ಸಿನಿಮಾ ಕೆಲಸದಲ್ಲಿ ನಿರತರಾಗಿದ್ದೆ.
ಅತ್ತ ಕಡೆ ಶ್ರಮಂತ್ ಅವರು ಕೂಡ ಬಿಸಿನೆಸ್ ಮ್ಯಾನ್ ಹೀಗಾಗಿ ಆಗಿನಿಂದಲೂ ಕೂಡ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ.
ನಾವಿಬ್ಬರೂ ಕೂಡ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳುವುದಕ್ಕೆ ಮತ್ತು ಏಕಾಂತದಲ್ಲಿ ಇರುವುದಕ್ಕೆ ಸಮಯ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇದರ ಜೊತೆಗೆ ಸಂದರ್ಶನಾಗಾರರು ಹನಿಮೂನ್ ಗೆ ಯಾವ ಜಾಗಕ್ಕೆ ಹೋಗಬೇಕು ಅಂತ ಅಂದುಕೊಂಡಿದ್ದೀರಾ ಎಂಬ ಪ್ರಶ್ನೆಯನ್ನು ಕೇಳುತ್ತಾರೆ.

ಮಾಲ್ಡಿವ್ಸ್ ಎಂದರೆ ತುಂಬಾನೆ ಇಷ್ಟ
ಪ್ರಶ್ನೆಗೆ ಉತ್ತರಿಸಿದ ಶುಭಪುಂಜ ಅವರು ನನಗೆ ಮಾಲ್ಡಿವ್ಸ್ ಎಂದರೆ ತುಂಬಾನೆ ಇಷ್ಟ ಹಾಗಾಗಿ ಶಮಂತ್ ಅನ್ನು ಹನಿಮೂನ್ ಗೆ ಮಾಲ್ಡಿವ್ಸ್ ಗೆ ಕರೆದುಕೊಂಡು ಹೋಗು ಅಂತ ಕೇಳಿದ್ದೇನೆ. ಆದರೆ ಆತ ಮಾತ್ರ ಕರ್ನಾಟಕದಲ್ಲಿಯೇ ಇರುವ ಸಿಂಪಲ್ ಪ್ಲೇಸ್ ಹುಡುಕುತ್ತಿದ್ದಾನೆ ಆದರೆ ನನಗೆ ಮಾಲ್ಡಿವ್ಸ್ ಗೆ ಹೋಗಬೇಕು ಎಂಬ ಆಸೆ ಇದೆ ಎಂದು ಹೇಳಿದ್ದಾರೆ.
ನಟಿ ಶುಭಪುಂಜ ಅವರು ಸ್ವಲ್ಪವು ನಾಚಿಕೆ ಇಲ್ಲದೆ ನಿಸ್ಸಂಕೋಚವಾಗಿ ತಮ್ಮ ಹನಿಮೂನ್ ವಿಚಾರವನ್ನು ಮುಕ್ತವಾಗಿ ಮಾಧ್ಯಮ ಮುಂದೆ ಮಾತನಾಡಿದ್ದಾರೆ.
ಈ ವಿಚಾರ ಕೇಳುತ್ತಿದ್ದ ಹಾಗೆ ಕೆಲವು ಅಭಿಮಾನಿಗಳು ಶಮಂತ್ ಅವರಿಗೆ ಆದಷ್ಟು ಬೇಗ ನಿಮ್ಮ ಹೆಂಡತಿಯನ್ನು ಹನಿಮೂನ್ ಗೆ ಕರೆದುಕೊಂಡು ಹೋಗಿ ಎಂದು ಬುದ್ಧಿವಾದ ಹೇಳುತ್ತಿದ್ದಾರೆ. ಮತ್ತು ಕೆಲವು ಅಭಿಮಾನಿಗಳು ತೀರಾ ವೈಯಕ್ತಿಕ ವಿಚಾರವನ್ನು ಮಾಧ್ಯಮದ ಮುಂದೆ ಪ್ರಚಾರ ಮಾಡುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.