ಶುಭಾ ಪೂಂಜಾ.. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ. ಮೊಗ್ಗಿನ ಮನಸ್ಸು ಸಿನಿಮಾ ಇಂದ ನಟಿ ಶುಭಾ ಪೂಂಜಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ಅದಕ್ಕೂ ಮೊದಲು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. 25 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಶುಭಾ ಪೂಂಜಾ ಅವರು ಇತ್ತೀಚೆಗೆ ಮದುವೆಯಾದರು, ಮದುವೆಯಾದ ಕೆಲವು ತಿಂಗಳುಗಳ ನಂತರ ಇದೀಗ ನಟಿ ಶುಭಾ ಪೂಂಜಾ, ಒಂದು ಗುಡ್ ನ್ಯೂಸ್ ನೀಡಿದ್ದಾರೆ.. ಅದೇನು ಗೊತ್ತಾ?
ನಟಿ ಶುಭಾ ಪೂಂಜಾ, ಕನ್ನಡದಲ್ಲಿ ಮೊಗ್ಗಿನ ಮನಸ್ಸು, ಚಂಡ, ಸ್ಲಮ್ ಬಾಲ, ಪರಾರಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲಿ ಸಹ ಗುರುತಿಸಿಕೊಂಡಿದ್ದರು. ಹೇಳಿಕೊಳ್ಳುವಂಥ ಯಶಸ್ಸು ಇವರಿಗೆ ಸಿನಿಮಾ ಮೂಲಕ ಸಿಗಲಿಲ್ಲ. ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಶುಭಾ ಪೂಂಜಾ ಅವರು ಎಡವಿದರು. ಕೆಲವೊಂದು ತಪ್ಪು ಪಾತ್ರಗಳನ್ನು ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ಸೋಲನ್ನು ಕಂಡರು ಶುಭಾ. ಇದರಿಂದ ಅವರಿಗಿದ್ದ ಬೇಡಿಕೆ ಸಹ ಕಡಿಮೆಯಾಗಿತ್ತು.
ಆದರೆ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟ ನಂತರ ಶುಭಾ ಪೂಂಜಾ ಅವರನ್ನು ಜನರು ಇಷ್ಟಪಡಲು ಶುರು ಮಾಡಿದರು. ನಿಜವಾಗಿಯೂ ಶುಭಾ ಪೂಂಜಾ ಅವರ ಗುಣ ಎಂಥದ್ದು ಎನ್ನುವುದು ವೀಕ್ಷಕರಿಗೆ ಅರ್ಥವಾಯಿತು. ಬಿಗ್ ಬಾಸ್ ಇಂದ ಜನಪ್ರಿಯತೆ ಪಡೆದುಕೊಂಡ ಶುಭಾ ಪೂಂಜಾ, ಬಿಗ್ ಮನೆಯಿಂದ ಹೊರಬಂದ ಸ್ವಲ್ಪ ದಿನದ ಬಳಿಕ ಬಹುಕಾಲದ ಗೆಳೆಯ ಸುಮಂತ್ ಬಿಲ್ಲವ ಅವರ ಜೊತೆ ಮದುವೆಯಾದರು. ಇದೀಗ ಸುಂದರವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.
ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ಶುಭಾ ಪೂಂಜಾ, ಗುಡ್ ನ್ಯೂಸ್ ನೀಡಿದ್ದಾರೆ…ನಾನೀಗ 3 ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. 2 ಸಿನಿಮಾಗಳು ಬಿಡುಗಡೆಗೆ ರೆಡಿಯಿದೆ. ಮತ್ತೊಂದು ಸಿನಿಮಾ ತಯಾರಾಗುತ್ತಿದೆ. ನನ್ನ ಬದುಕಿಗೆ ತಿರುವು ಕೊಟ್ಟಿದ್ದು ಕಿರುತೆರೆ, ಹಾಗಾಗಿ ನನ್ನ ಮುಂದಿನ ದಿನಗಳನ್ನು ಕಿರುತೆರೆಯಲ್ಲಿ ಕಳೆಯಲು ಬಯಸುತ್ತೇನೆ. ಮೂರು ಸಿನಿಮಾಗಳು ಮುಗಿದ ನಂತರ ಕಿರುತೆರೆಯಲ್ಲಿ ನನ್ನ ಜರ್ನಿಯನ್ನು ಶುರು ಮಾಡುತ್ತೇನೆ ಎಂದು ಹೇಳಿದ್ದಾರೆ ಶುಭಾ. ತಮ್ಮದೇ ಆದ ಹೊಸ ಪ್ರೊಡಕ್ಷನ್ ಹೌಸ್ ಶುರು ಮಾಡಿ ನಿರ್ಮಾಪಕಿಯಾಗಿ ಬರಲಿದ್ದಾರೆ ಶುಭಾ. ಯಾವ ವಾಹಿನಿಗೆ ಧಾರಾವಾಹಿ ನಿರ್ಮಾಣ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.