ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಶುಭಾ ಪೂಂಜಾ. ಜಾಕ್ ಪಾಟ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿ, ಮೊಗ್ಗಿನ ಮನಸ್ಸು ಸಿನಿಮಾ ಇಂದ ಬಹಳ ಜನಪ್ರಿಯತೆ ಮತ್ತು ಬೇಡಿಕೆ ಸೃಷ್ಟಿಸಿಕೊಂಡರು ಶುಭಾ ಪೂಂಜಾ. ಕೆಲ ವರ್ಷಗಳ ಕಾಲ ಕೆರಿಯರ್ ನಲ್ಲಿ ಉತ್ತಮ ಆಯ್ಕೆಗಳನ್ನು ಮಾಡಿದ ಶುಭಾ ಪೂಂಜಾ ನಂತರ ಎಡವಿದರು. ಅದರಿಂದ ಅವಕಾಶ ಮತ್ತು ಜನಪ್ರಿಯತೆ ಎರಡನ್ನು ಕಳೆದುಕೊಂಡರು ಶುಭಾ ಪೂಂಜಾ.
ಇವರ ಆಯ್ಕೆಯಿಂದ ಜನರಿಗೆ ಇವರ ಬಗ್ಗೆ ಇರುವ ಅಭಿಪ್ರಾಯವೇ ಬದಲಾಗಿ ಹೋಗಿತ್ತು. ಆದರೆ ಬಿಗ್ ಬಾಸ್ ಕನ್ನಡ ಸೀಸನ್8ಕ್ಕೆ ಸ್ಪರ್ಧಿಯಾಗಿ ಬಂದ ನಂತರ ಶುಭಾ ಪೂಂಜಾ ಅವರ ನಿಜವಾದ ವ್ಯಕ್ತಿತ್ವ ಏನು ಎಂಬುದು ಜನರಿಗೆ ಅರ್ಥವಾಯಿತು. ಶುಭಾ ಬಹಳ ಮುಗ್ಧ ಸ್ವಭಾವದ ಕ್ಯೂಟ್ ಹುಡುಗಿ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಂಡರು. ಬಿಬಿಕೆ8 ನ ಫೇವರೆಟ್ ಕಂಟೆಸ್ಟಂಟ್ ಶುಭಾ ಪೂಂಜಾ ಎಂದರೆ ತಪ್ಪಾಗುವುದಿಲ್ಲ. ನಮಗೆಲ್ಲ ಗೊತ್ತರುವ ಹಾಗೆ, ಶುಭಾ ಅವರು ಎಂಗೇಜ್ ಆಗಿದ್ದಾರೆ. ಇವರ ಭಾವಿ ಪತಿಯ ಹೆಸರು ಸುಮಂತ್. ಸುಮಂತ್ ಅವರನ್ನು ಪ್ರೀತಿಯಿಂದ ಚಿನ್ನಿ ಬಾಂಬ್ ಎನ್ನುತ್ತಾರೆ ಶುಭಾ.
ಮುಂದಿನ ವರ್ಷದ ಆರಂಭರಲ್ಲಿ ಶುಭಾ ಪೂಂಜಾ ಅವರ ಮದುವೆ ನಡೆಯಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಸಧ್ಯಕ್ಕೆ ಶುಭಾ ಪೂಂಜಾ ಅವರು ಭಾವಿ ಪತಿ ಜೊತೆ ಲೈಫ್ ಎಂಜಾಯ್ ಮಾಡುತ್ತಿಡ್ಸಾರೆ. ಬರ್ತ್ ಡೇ ಸಮಯದಲ್ಲಿ ಗೋವಾ ಟ್ರಿಪ್ ಗೆ ಹೋಗಿ ಬಂದಿದ್ದ ಶುಭಾ ಪೂಂಜಾ, ಇತ್ತೀಚೆಗೆ ತಮ್ಮ ಹುಟ್ಟೂರಿಗೆ ಭಾವಿಪತಿ ಜೊತೆ ಹೋಗಿದ್ದರು. ಬಿಗ್ ಬಾಸ್ ನಂತರ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಶುಭಾ ಈಗ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾ ಹೆಸರು ಅಂಬುಜ.
ಅಂಬುಜ ಸಿನಿಮಾದಲ್ಲಿ ಹಿಂದೆಂದೂ ಕಾಣಿಸಿಕೊಳ್ಳದ ವಿಭಿನ್ನವಾದ ಪಾತ್ರದಲ್ಲಿ ಶುಭಾ ಪೂಂಜಾ ನಟಿಸುತ್ತಿದ್ದಾರೆ. ಎರಡು ಶೇಡ್ ನ ಪಾತ್ರ ಇದಾಗಿದ್ದು, ಒಂದರಲ್ಲಿ ಪತ್ರಕರ್ತೆಯಾಗಿ ಮತ್ತೊಂದರಲ್ಲಿ ಲಂಬಾಣಿ ಹುಡುಗಿಯಾಗಿ ಶುಭಾ ಪೂಂಜಾ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಆಗಿದೆ. ಇಂದು ಬೆಳಗ್ಗೆ ಅಂಬುಜ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದ್ದು, ಶುಭಾ ಪೂಂಜಾ ಅವರು ಲಂಬಾಣಿ ಹುಡುಗಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಶುಭಾ ಅವರು ಧರಿಸಿರುವ ಕಾಸ್ಟ್ಯೂಮ್ ನ ಬೆಲೆ ಬರೋಬ್ಬರಿ 20 ಕೆಜಿ ತೂಕದ್ದಾಗಿದೆ.
ಈ ಕಾಸ್ಟ್ಯೂಮ್ ಅನ್ನು ಲಂಬಾಣಿಗರು ಸುಮಾರು ತುಂಬಾ ಸಮಯ ತೆಗೆದುಕೊಂಡು ತಯಾರಿಸಿದ್ದಾರೆ ಎನ್ನಲಾಗಿದೆ. ಇದೊಂದು ನೈಜ ಘಟನೆ ಆಧಾರಿತ ಸಿನಿಮಾ ಆಗಿದ್ದು, ಗದಗದಲ್ಲಿ ಈ ಗಜಟನೆ ನಡೆದಿತ್ತು. ಶುಭಾ ಅವರನ್ನು ಹೊರತುಪಡಿಸಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ, ಪ್ರಿಯಾಂಕ ಕಾಮತ್ ಸೇರಿದಂತೆ ಇನ್ನಿತರ ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದ ನಿರ್ಮಾಪಕ ಕಾಶಿನಾಥ್ ಮಡಿವಾಳರ್ ಮತ್ತು ನಿರ್ದೇಶಕ ಶ್ರೀನಿ ಹನುಮಂತರಾಜು.