ಅತ್ಯಂತ ಚಿಕ್ಕ ವಯಸ್ಸಿನಲ್ಲಿ ನಾಯಕಿಯಾಗಿ ಆಯ್ಕೆಗೊಂಡು ಕನ್ನಡ (Kannada) ದಲ್ಲಿ ಮಾತ್ರವಲ್ಲದೆ ಇದೀಗ ಟಾಲಿವುಡ್ (Tollywood) ನಲ್ಲಿಯೂ ಕೂಡ ಹಲ್ ಚಲ್ ಎಬ್ಬಿಸಿರುವ ನಟಿ ಶ್ರೀಲೀಲಾ (Shreeleela) ಬಗ್ಗೆ ನಿಮಗೂ ಗೊತ್ತಿರಬಹುದು. ಕಿಸ್ (Kiss) ಎನ್ನುವ ಸಿನಿಮಾದ ಮೂಲಕ ತಮ್ಮ ಸಿನಿಮಾ ಜರ್ನಿಯನ್ನು ಆರಂಭಿಸಿ ಇದೀಗ ಅತ್ಯುತ್ತಮ ನಟಿ (Best Actress) ಎನಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ನಟಿಸುವುದಕ್ಕಾಗಿಯೇ ವಿದೇಶದಿಂದ ವಾಪಸ್ ಭಾರತಕ್ಕೆ ಬಂದ ನಟಿ ಶ್ರೀಲೀಲಾ ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿ ಅಭಿನಯಿಸಿದರು. ಶ್ರೀಲೀಲಾ ಅವರ ಹವಾ ಟಾಲಿವುಡ್ ನಲ್ಲಿ ಜೋರಾಗಿದೆ. ‘ ಪೆಳ್ಳಿ ಸಂದಡಿ ‘ ಸಿನಿಮಾದಲ್ಲಿ ನಟಿಸುವುದರ ಮೂಲಕ ಟಾಲಿವುಡ್ ಗೆ ಎಂಟ್ರಿ ನೀಡಿದರು. ರವಿ ತೇಜ ಅವರೊಂದಿಗೆ ‘ಧಮಾಕ’ ಎನ್ನುವ ಸಿನಿಮಾದಲ್ಲಿ ತೆರೆ ಹಂಚಿಕೊಂಡ ನಂತರ ಟಾಲಿವಿಡ್ ನಲ್ಲಿ ಹವಾ ಸೃಷ್ಟಿಸಿದ್ದಾರೆ.
ಇದೀಗ ಹಿಟ್ ಲಿಸ್ಟ್ ನಲ್ಲಿ ಧಮಾಕ ಸಿನಿಮಾ ಕೂಡ ಸೇರಿಕೊಂಡಿದೆ. ಇದೀಗ ಶ್ರೀಲೀಲಾ ಅವರು ಎರಡು ಗುಡ್ ನ್ಯೂಸ್ (Good news) ಅನ್ನು ಹಂಚಿಕೊಂಡಿದ್ದಾರೆ ಅದೇನು ಗೊತ್ತಾ ಮುಂದೆ ಓದಿ. ತೆಲಗಿನ ಮಾಸ್ ಮಹಾರಾಜ ಎಂದೇ ಖ್ಯಾತರಾಗಿರುವ ರವಿತೇಜ (Raviteja) ಅವರ ಜೊತೆಗೆ ಧಮಾಕಾ ಎನ್ನುವ ಸಿನಿಮಾದಲ್ಲಿ ನಟಿಸಿದ್ರು. ಇದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಕೇವಲ ಎರಡೇ ವಾರದಲ್ಲಿ 100 ಕೋಟಿ ರೂಪಾಯಿಗಳ ಕ್ಲಬ್ ಹೌಸ್ ಸೇರಿತ್ತು.
ಕೆಲವು ಸಿನಿಮಾಗಳಲ್ಲಿ ನಟಿಸಿ ರವಿತೇಜ ಸೋಲನ್ನ ಕಂಡರೂ ಧಮಾಕ ಅವರ ಜೀವನದಲ್ಲಿ ದೊಡ್ಡ ಧಮಾಕ ಬ್ರೇಕ್ ನೀಡಿದೆ. ಇನ್ನು ಈ ಸಿನಿಮಾದ ಯಶಸ್ಸಿನ ಜೊತೆಗೆ ಶ್ರೀಲೀಲಾ ಅವರಿಗೂ ಕೂಡ ಸಿನಿಮಾ ರಂಗದಲ್ಲಿ ಇನ್ನಷ್ಟು ಬೇಡಿಕೆ ಹೆಚ್ಚಾಗಿದೆ, ಈ ಸಿನಿಮಾ ತ್ರಿನಾದ ರಾವ್ ನಕ್ಕಿನ ಅವರ ನಿರ್ದೇಶನದಲ್ಲಿ ಮೂಡಿ ಬಂದಿದೆ. ವಿಶ್ವ ಪ್ರಸಾದ್ ಈ ಸಿನಿಮಾದ ನಿರ್ಮಾಪಕರು. ಟಾಲಿವುಡ್ ನಲ್ಲಿ ಸಾಕಷ್ಟು ನಿರ್ಮಾಪಕರ ಕಣ್ಣು ಶೀಲೀಲಾ ಮೇಲೆ ಬಿದ್ದಿದೆ. ಹಾಗಾಗಿ ಶ್ರೀಲೀಲಾ ಅವರ ಕಾಲ್ ಶೀಟ್ ಗಾಗಿ ಕಾಯುವ ಕಾಲ ದೂರವಿಲ್ಲ.
ಧಮಾಕ ಸಿನಿಮಾ ಏನೋ ಹಿಟ್ ಆಯ್ತು ನೂರು ಕೋಟಿ ಕ್ಲಬ್ ಹೌಸ್ ಕೂಡ ಸೇರಿಕೊಂಡಿತು. ಆದರೆ ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು (Mahesh Babu) ಅವರ ಮುಂದಿನ ಸಿನಿಮಾದಲ್ಲಿ ಶ್ರೀಲೀಲಾ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸೌಂಡ್ ಮಾಡಿತ್ತು. ಆದರೆ ಇದೀಗ ಬಂದಿರುವ ಸುದ್ದಿಯ ಪ್ರಕಾರ ಈ ಚಿತ್ರದಲ್ಲಿ ಕೇವಲ ಪೂಜಾ ಹೆಗ್ಡೆ ಮಾತ್ರ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎನ್ನುವ ಸುದ್ದಿ ಇತ್ತು.
ಮತ್ತೋರ್ವ ನಾಯಕಿಯ ಪಾತ್ರವನ್ನು ಶ್ರೀಲೀಲಾ ಮಾಡಲಿದ್ದಾರೆ ಎನ್ನುವ ಸುದ್ದಿ ಹರಡಿತು ಆದರೆ ಎರಡನೇ ನಾಯಕಿ ಪಾತ್ರಕ್ಕೆ ಶ್ರೀಲೀಲಾ ಒಪ್ಪಿಗೆ ಸೂಚಿಸಲಿಲ್ಲ ವೈರಲ್ ಆಗುತ್ತಿದೆ. ಶ್ರೀಲೀಲಾ ಒಂದಾದ ಮೇಲೆ ಒಂದರಂತೆ ಪ್ರಾಜೆಕ್ಟ್ ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರ ಜೊತೆಗೆ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರಂತೆ ಶ್ರೀಲೀಲಾ. ಜಾತಿ ರತ್ನಲು ಎನ್ನುವ ಸಿನಿಮಾದ ಮೂಲಕ ಖ್ಯಾತಿ ಗಳಿಸಿದ ನವೀನ್ ಪೊಲಿಸೆಟ್ಟಿ ಜೊತೆಗೂ ಕೂಡ ತೆರೆ ಹಂಚಿಕೊಳ್ಳಲಿದ್ದಾರೆ.
ದಿಲ್ ರಾಜು ಅವರಿಗೆ ನಿರ್ಮಾಣ ಮಾಡುವುದಕ್ಕೆ ಕಾಲ್ ಶೀಟ್ ನೀಡಿದ್ದಾರೆ. ನಟ ನಿತಿನ್ ಜೊತೆಗೆ ಇನ್ನೊಂದು ಸಿನಿಮಾ ಹಾಗೂ ಕಿರೀಟಿ ರೆಡ್ಡಿ ಜೊತೆಗೆ ಜೂನಿಯರ್ ಎನ್ನುವ ಸಿನಿಮಾದಲ್ಲಿಯೂ ಶ್ರೀಲೀಲಾ ಮುಖ್ಯ ಪಾತ್ರ ನಿಭಾಯಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ನಂದಮೂರಿ ಬಾಲಕೃಷ್ಣ ಅವರ ಹೊಸ ಸಿನಿಮಾದಲ್ಲಿಯೂ ಕೂಡ ಶ್ರೀಲೀಲಾಗೆ ಅವಕಾಶ ಸಿಕ್ಕಿದೆಯಂತೆ. 2023 ಆರಂಭವಾಗುತ್ತಿದ್ದ ಹಾಗೆ ಶ್ರೀಲೀಲಾ ಅವರ ಪರ್ಸ್ ಫುಲ್ ಆಗುತ್ತಿರುವುದಂತೂ ಸತ್ಯ.