ಬಹುಭಾಷಾ ನಟಿ ಶ್ರೀಯಾ ಶರಣ್ ನಿಮಗೆಲ್ಲರಿಗೂ ಪರಿಚಯವಿರುತ್ತೆ. ಕನ್ನಡದಲ್ಲಿ ಕೂಡ ನಟಿಸಿರುವ ನಟಿ ಶ್ರೀಯಾ ಶರಣ್ ಅವರು ಹೆಚ್ಚಾಗಿ ತಮಿಳು, ತೆಲುಗು, ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ ಇನ್ನು ಕನ್ನಡದಲ್ಲಿಯೂ ಕೂಡ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಶ್ರೀಯಾ ಶರಣ ಕನ್ನಡಿಗರಿಗೂ ಕೂಡ ಅಚ್ಚುಮೆಚ್ಚಿನ ನಟಿ ಎನಿಸಿದ್ದಾರೆ.
ಇತ್ತೀಚಿಗೆ ಶ್ರೀಯಾ ಶರಣ್ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ ಯಾಕೆಂದರೆ ಅವರು ಫ್ಯಾಮಿಲಿ ಲೈಫ್ ಎಂಜಾಯ್ ಮಾಡುತ್ತಿದ್ದರು ಪತಿಯ ಜೊತೆಗೆ ಬೇಬಿ ಫೋಟೋ ಕೂಡ ಮಾಡಿಸಿದ್ದ ಶ್ರೀಯ ಶರಣ್ ಇದೀಗ ಪತಿ ಹಾಗೂ ಮುದ್ದಾದ ಮಗಳೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ. ಆದರೆ ಇತ್ತೀಚೆಗೆ ಭಾರತಕ್ಕೆ ಮರಳಿದ ಶ್ರೀಯಾ ಅವರು ಕನ್ನಡದಲ್ಲಿ ಹೊಸ ಸಿನಿಮಾ ಒಂದರಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಶ್ರೀಯಾ ಶರಣ್ ಅವರಿಗೆ 40ರ ವಸಂತ. ಇತ್ತೀಚಿಗಷ್ಟೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಶ್ರೀಯಾ ಶರಣ್ ನೋಡೋದಕ್ಕೆ ಸಕ್ಕತ್ ಕ್ಯೂಟ್ ಆಗಿಯೂ ಫಿಟ್ ಆಗಿಯೂ ಕಾಣಿಸುತ್ತಾರೆ. ಅವರನ್ನು ನೋಡಿದರೆ ಅವರಿಗೆ 40 ವರ್ಷ ಪ್ರಾಯ ಅಂತ ಹೇಳೋದಕ್ಕೆ ಸಾಧ್ಯವೇ ಇಲ್ಲ. ನಟಿ ಶ್ರೀಯಾ ಶರಣ್ ಅವರು ತಮ್ಮ ಸಿನಿಮಾ ಜರ್ನಿ ಆರಂಭಿಸಿದ್ದು ತೆಲುಗು ಸಿನಿಮಾ ರಂಗದ ಮೂಲಕ.
2001ರಲ್ಲಿ ತೆಲುಗು ಭಾಷೆಯಲ್ಲಿ ಇಷ್ಟಂ ಎನ್ನುವ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ನಟಿ ಶ್ರೀಯಾ ಶರಣ್. ನಟಿ ಶ್ರೀಯ ಶರಣ್ ಅತ್ಯದ್ಭುತ ಕಥಕ್ ಡ್ಯಾನ್ಸರ್ ಕೂಡ ಹೌದು. ಶ್ರೀ ಅವರ ಕನ್ನಡ ಸಿನಿಮಾದ ಬಗ್ಗೆ ಹೇಳುವುದಾದರೆ ಪುನೀತ್ ರಾಜಕುಮಾರ್ ಅವರ ಜೊತೆಗೆ ಅರಸು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸುವುದರ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು
ಇನ್ನು ನೆನಪಿರಲಿ ಪ್ರೇಮ್ ನಟನೆಯ ಚಂದ್ರ ಸಿನೆಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಅಭಿನಯ ಆರಂಭಿಸಿದರು. ಇದೀಗ ಕೆಲವು ವರ್ಷಗಳ ಬಳಿಕ ಆರ್ ಚಂದ್ರು ನಿರ್ದೇಶನದ ಕಬ್ಜಾ ಸಿನಿಮಾದಲ್ಲಿ ಶ್ರೀಯಾ ಮತ್ತೆ ಬಣ್ಣ ಹಚ್ಚಲಿದ್ದಾರೆ. ಹೌದು ಕನ್ನಡದ ಬಹು ನಿರೀಕ್ಷಿತ ಸಿನಿಮಾ ಕಬ್ಜಾ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಇಬ್ಬರ ಕಾಂಬಿನೇಷನ್ ನಲ್ಲಿ ಕಬ್ಜಾ ಸಿನಿಮಾ ನಿರ್ಮಾಣವಾಗುತ್ತಿದೆ.
ಇದರಲ್ಲಿ ಇಬ್ಬರು ನಾಯಕಿಯರು ಇದ್ದು ಮಧುವತಿ ಪಾತ್ರದಲ್ಲಿ ನಟಿ ಶ್ರೀಯಾ ಶರಣ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಶ್ರೀಯಾ ಅವರು ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ತುಂಬಾನೇ ಆಕ್ಟಿವ್ ಆಗಿರುತ್ತಾರೆ. ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ನೋಡಿದರೆ ಸುಮಾರು 3 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಇದ್ದಾರೆ.
ಸಾಕಷ್ಟು ಫೋಟೋಶೂಟ್ ಗಳನ್ನು, ರೀಲ್ ಗಳನ್ನು ಮಾಡುವ ಶ್ರೀಯಾ ಶರಣ್ ತಮ್ಮ ಹೊಸ ಹೊಸ ಲುಕ್ ಮೂಲಕ ಅಭಿಮಾನಿಗಳ ಕಣ್ಣುಗಳಿಗೆ ರಸದೌತಣ ನೀಡುತ್ತಾರೆ. ಇತ್ತೀಚಿಗೆ ಬೆಡ್ ಮೇಲೆ ಬಿಳಿಯ ಬಣ್ಣದ ಬಟ್ಟೆ ಧರಿಸಿ ಕಪ್ಪು ಬಣ್ಣದ ಹೀಲ್ಸ್ ಧರಿಸಿ ಫೋರ್ಸ್ ಕೊಟ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಲೈಕ್ಸ್ ಪಡೆದುಕೊಂಡಿವೆ.