ಮಳೆಯ ಕುರಿತು ಮತ್ತೊಮ್ಮೆ ಶಾ’ಕಿಂಗ್ ಭವಿಷ್ಯ ನುಡಿದ ಕೋಡಿಮಠ ಶ್ರೀ

Today News / ಕನ್ನಡ ಸುದ್ದಿಗಳು

ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಮಳೆಯ ಕಾಟ, ಎಲ್ಲೆಲ್ಲೂ ವರುಣರಾಯ ಅಬ್ಬರಿಸುತ್ತಿದ್ದು ಡ್ಯಾಂಗಳು ತುಂಬಿ ತುಳುಕುತ್ತಿವೆ. ವರುಣರಾಯನ ಬಗ್ಗೆ ಕೋಡಿಮಠದ ಶ್ರೀಗಳು ಹೇಳಿರುವ ಭವಿಷ್ಯವಾಣಿಯನ್ನು ಈ ಲೇಖನದಲ್ಲಿ ನೋಡೋಣ.

ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲುವುದಿಲ್ಲ ಎಂದು ಧಾರವಾಡದಲ್ಲಿ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಇನ್ನು ಮಳೆ ಹೆಚ್ಚಾಗುವ ಲಕ್ಷಣ ಇದೆ. ಕಾರ್ತಿಕ ಕಳೆಯುವವರೆಗೂ ಮಳೆ ಇರುತ್ತದೆ. ಸದ್ಯ ಪ್ರಕೃತಿ ವಿಕೋಪ ಆಗಿದೆ, ಏನೂ ಮಾಡಲು ಆಗುವುದಿಲ್ಲ, ಮಳೆಯಿಂದ ಅನಾಹುತಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಂಕ್ರಾಂತಿಯವರೆಗೂ ಮಳೆ ಇರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ

ಆದರೆ ಅವರು ರಾಜಕೀಯ ವಿಚಾರದ ಭವಿಷ್ಯದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇನ್ನು ಈ ಹಿಂದೆ ಮುಂದಿನ ಕಾರ್ತಿಕ ಮಾಸದವರೆಗೆ ಜಲಗಂಡಾತರ ಇದೆ, ಕೊರೋನ ಇನ್ನೂ ಹೆಚ್ಚಾಗಲಿದೆ ಎಂದು ಹೇಳಿದ್ದರು ಆದರೂ ದೈವ ಕೃಪೆಯಿಂದ ಒಳ್ಳೆಯ ದಿನಗಳು ಬರಲಿವೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶ್ರೀಗಳು ಭವಿಷ್ಯ ನುಡಿದಿದ್ದರು.

ಸಿಎಂ ಯಾವುದೇ ವಿವಾದ ಸೃಷ್ಟಿಸಿಕೊಳ್ಳದೇ ರಾಜ್ಯ ಮುನ್ನಡೆಸಲಿದ್ದಾರೆ: ಕೋಡಿಮಠ ಶ್ರೀ  ಭವಿಷ್ಯ – Public TV

ಕೋಡಿಮಠದ ಶ್ರೀಗಳು ಅಶುಭ ನುಡಿಗಳು ಈಗ ಬೇಡ ನಮ್ಮ ಮುಂದೆ ಅಶುಭಗಳು ನಡೆಯುತ್ತಲೆ ಇದೆ. ಕುಂಭದಲ್ಲಿ ಗುರುಗ್ರಹ ಇದ್ದಾಗ ಕೆರೆ ಕಟ್ಟೆಗಳು ತುಂಬುತ್ತವೆ. ಜಲಗಂಡಾಂತರ ಇನ್ನೂ ಮುಂದುವರೆಯಲಿದೆ ನೂತನ‌ ಸಿಎಂ ಬಗ್ಗೆ ಈಗಲೆ ಏನನ್ನು ಹೇಳಬಾರದು ಜೊತೆಗೆ ಅಶುಭ ನುಡಿಯಬಾರದು ಎಂದು ಹೇಳಿದ್ದಾರೆ.

ಕಾರ್ತಿಕ ಮಾಸ ಕಳೆದ ನಂತರ ಹೇಳುತ್ತೇನೆ ಎಂದು ಕೋಲಾರ ತಾಲ್ಲೂಕು ಲಕ್ಷ್ಮೀಸಾಗರ ಗ್ರಾಮದಲ್ಲಿ ಕೋಡಿ ಮಠದ ಶ್ರೀ ಶಿವಾನಂದ ಶ್ರೀಗಳು ಹೇಳಿದರು. ಒಟ್ಟಾರೆಯಾಗಿ ಕೋಡಿಮಠದ ಶ್ರೀಗಳು ಮುಂದೆ ನಡೆಯುವುದರ ಬಗ್ಗೆ ಭವಿಷ್ಯ ನುಡಿಯುತ್ತಾರೆ. ಅವರು ಹೇಳಿದ ಮಾತುಗಳು ನಿಜವಾಗಿದೆ. ಇದೀಗ ಮುಂದಿನ ದಿನಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈಗಿನ ವಾತಾವರಣದ ಬಗ್ಗೆ ನಿಜಕ್ಕೂ ಭಯ ಹುಟ್ಟುತ್ತದೆ.

ಮುಂದಿನ ದಿನಗಳಲ್ಲಿ ಗಾಳಿ ಗಂಡಾಂತರವಿದೆ; ಬರ ಹೆಚ್ಚಾಗಲಿದೆ: ಕೋಡಿಮಠ ಶ್ರೀ ಭವಿಷ್ಯ |  Kodi Mutt Swamiji Prediction on Natural Disasters Education System in  Karnataka | TV9 Kannada

ಕೊರೋನ ವೈರಸ್ ಎರಡು ಬಾರಿ ವೇಗವಾಗಿ ಹರಡಿ ಅನೇಕ ಜನರ ಪ್ರಾಣವನ್ನು ಬಲಿತೆಗೆದುಕೊಂಡಿತು. ಇದೀಗ ಕೊರೋನ ವೈರಸ್ ವಿರುದ್ಧ ಲಸಿಕಾ ಕಾರ್ಯಕ್ರಮವನ್ನು ನಡೆಸಿ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸುವ ಮೂಲಕ ಕೊರೋನ ವೈರಸ್ ನಿಯಂತ್ರಣಕ್ಕೆ ಬಂದಿದೆ. ಅದರೊಂದಿಗೆ ಈಗ ಒಂದು ವಾರದಿಂದ ವರುಣರಾಯ ಅಬ್ಬರಿಸುತ್ತಿದ್ದು ಎಲ್ಲಾ ಕಡೆ ಜಲಾವೃತವಾಗಿದೆ. ವರುಣರಾಯನ ಅಬ್ಬರ ಆದಷ್ಟು ಬೇಗ ಮುಗಿದು ಒಳ್ಳೆಯ ದಿನಗಳು ಬರಲಿ ಎಂದು ಆಶಿಸೋಣ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಮಗಳ ಲವ್ವರ್ ಜೊತೆ ಸೇರಿಕೊಂಡು ಗಂಡನನ್ನೇ ಮುಗಿಸೋಕೆ ಮಾಸ್ಟರ್ ಮೈಂಡ್ ಪ್ಲಾನ್ ಮಾಡಿದ ಮಹಿಳೆ