shivarajkumar

ಶಿವಣ್ಣ ಜೊತೆ ಕೂತು ಭರ್ಜರಿಯಾಗಿ ಚಿಕನ್ ಬಿರಿಯಾನಿ ಸವಿದ ಅಶ್ವಿನಿ ಮೇಡಂ

CINEMA/ಸಿನಿಮಾ Entertainment/ಮನರಂಜನೆ

ಪುನೀತ್ ರಾಜಕುಮಾರ್ ಅವರ ಮರಣ ನಂತರ ಕುಟುಂಬದ ಜವಾಬ್ದಾರಿಯನ್ನು ಸಮರ್ಪಕವಾಗಿ ದೊಡ್ಡಮನೆಯ ಸೊಸೆಯಾಗಿ ನಿರ್ವಹಿಸುತ್ತಿರುವವರು ಅಶ್ವಿನಿ ಪುನೀತ್ ರಾಜಕುಮಾರ್ ರವರು. ಅಪ್ಪು ಇದ್ದಾಗ ಮಾಧ್ಯಮಗಳ ಮುಂದೆ ಬರಲು ಮುಜುಗರಕ್ಕೆ ಒಳಗಾಗುತ್ತಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈಗ ಅವರು ಇಲ್ಲದೇ ಇರುವ ಈ ಘಳಿಗೆಯಲ್ಲಿ ಅವರ ಪ್ರತಿನಿಧಿಯಾಗಿ ಎಲ್ಲಾ ಕಡೆ ಓಡಾಡುತ್ತಿದ್ದಾರೆ ಹಾಗೂ ಎಲ್ಲಾ ಕಡೆ ತಮ್ಮ ಬೆಂಬಲವನ್ನು ಕೂಡ ನೀಡುತ್ತಿದ್ದಾರೆ.

ಅದರಲ್ಲೂ ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಹೊಸ ಪ್ರತಿಭೆಗಳಿಗೆ ತಮ್ಮ ಬೆಂಬಲವನ್ನು ಸದಾ ಕಾಲ ಸೂಚಿಸುತ್ತಿದ್ದರು. ಈಗ ಅಪ್ಪು ಅವರ ಅನುಪಸ್ಥಿತಿಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಆಗಾಗ ಹೊಸ ಪ್ರತಿಭೆಗಳ ಸಿನಿಮಾ ಬಿಡುಗಡೆ ಕಾರ್ಯಕ್ರಮಕ್ಕೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗುತ್ತಿದ್ದಾರೆ.

ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹಾಗೆ ಜಿಮ್ ನಲ್ಲಿ ದೈಹಿಕ ಕಸರತ್ತನ್ನು ನಡೆಸುವ ಮೂಲಕ ಅಶ್ವಿನಿ ಪುನೀತ್ ರಾಜಕುಮಾರ್ ಅವರು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಈಗ ಕ್ರಿಕೆಟ್ ಆಡುವ ಮೂಲಕ ಎಲ್ಲ ಕಡೆ ದೊಡ್ಡ ಮಟ್ಟದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ಅವರು ಸೌಂಡ್ ಮಾಡುತ್ತಿದ್ದಾರೆ.

ಅಪ್ಪು ಅಭಿಮಾನಿಗಳು ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಅತಿಥಿಯಾಗಿ ಆಗಮಿಸಿದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆಳುತ್ತಿರುವಂತಹ ಎಲ್ಲಾ ಕ್ರೀಡಾಪಟುಗಳಿಗೂ ಕೂಡ ಶುಭಾಶಯಗಳನ್ನು ಸಲ್ಲಿಸುತ್ತಾರೆ. ನಂತರ ಕಾರ್ಯಕ್ರಮದ ಬಿಡುಗಡೆಗಾಗಿ ತಾವು ಮೊದಲ ಬಾರಿಗೆ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ರವರು ಚಾಲನೆ ನೀಡುತ್ತಾರೆ.

ಅದರಂತೆ ಇತ್ತೀಚಿಗೆ ಯುವ ಉದ್ಯಮಿಗಳಿಗೆ ಕೂಡ ಸಾತ್ ನೀಡಿದ್ದರು ಅದರಂತೆ ಹೊಸ ಉದ್ಯಮಿಗಳಿಗೆ ಬೆಂಬಲಿಸುವ ಸಲುವಾಗಿ ಬಿರಿಯಾನಿ ಹೋಟೆಲ್ ಉದ್ಘಾಟನಾ ಸಮಾರಂಭದಲ್ಲಿ ಭಾವಹಿಸಿ ನಟ ಹಾಗೂ ಪುನೀತ್ ರಾಜಕುಮಾರ್ ಅವರ ಅಣ್ಣನಾದ ಶಿವರಾಜ್ ಕುಮಾರ್ ಅವರೊಂದಿಗೆ ಊಟವನ್ನು ಸವಿದರು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.