ಸ್ನೇಹಿತರೆ ನಮಸ್ಕಾರ, ಕರುನಾಡ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಇದೀಗ ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರಕ್ಕೆ ಬಾರಿ ಸದ್ದು ಮಾಡುತ್ತಿದ್ದಾರೆ. ಹೌದು, ಶಿವಣ್ಣ ಅವರ ಧರ್ಮಪತ್ನಿ ಗೀತಾಕ್ಕ ಅವರು ಕಾಂಗ್ರೆಸ್ ಪಕ್ಷದ ಜೊತೆ ಸೇರ್ಪಡೆಗೊಂಡಿದ್ದಾರೆ. ಇದೀಗ ಬಿರುಸಿನ ಪ್ರಚಾರ ಕೂಡ ಮಾಡುತ್ತಿದ್ದಾರೆ.
ಈ ಪ್ರಚಾರದಲ್ಲಿ ಶಿವಣ್ಣ ಕೂಡ ಭಾಗಿಯಾಗಿದ್ದಾರೆ. ರಾಜ್ ಕುಟುಂಬದ ಯಾವುದೇ ಕುಡಿ ಕೂಡ ಈವರೆಗೆ ರಾಜಕೀಯ ಪ್ರಚಾರ ಅಥವಾ ಒಂದು ಪಕ್ಷದ ಪರ ಪ್ರಚಾರ ಮಾಡಿದ ಇತಿಹಾಸವಿಲ್ಲ. ಆದರೆ, ರಾಜ್ ಕುಟುಂಬದ ಮೊದಲ ಕುಡಿ ಶಿವಣ್ಣ ಅವರ ಹೆಂಡತಿ ಗೀತಾಕ್ಕ ಅವರು ರಾಜಕೀಯ ಕುಟುಂಬದಿಂದ ಬಂದಂತಹ ಸೊಸೆ.
ಹೌದು, ರಾಜಕೀಯ ಕುಟುಂಬದಿಂದ ಬಂದಂತಹ ಗೀತಾಕ್ಕ ಇದೀಗ ಕಾಂಗ್ರೆಸ್ ಪರ ಚುನಾವಣೆಗೆ ಇಳಿದಿದ್ದಾರೆ. ಜೊತೆಗೆ ಶಿವಣ್ಣ ಕೂಡ ತನ್ನ ಪತ್ನಿ ಪರ ಪ್ರಚಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಗೆ ಮತ ನೀಡುವಂತೆ ಒತ್ತಾಯ ಮಾಡಿದ್ದಾರೆ. ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಶಿವಣ್ಣ ಅವರು ಈ ಬಾರಿ ತಮ್ಮ ಹೆಂಡತಿಯನ್ನು ಗೆಲ್ಲುವಿನ ಪತಾಕೆಗೆ ಕರೆತರಲು ತನ್ನ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
ಜೊತೆಗೆ ಗೀತಾಕ್ಕ ಕಾಂಗ್ರೆಸ್ ಮೂಲಕ ಗೆದ್ದು ಬಂದರೆ. ಅಲ್ಲಿನ ಜನರಿಗೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುವುದರ ಬಗ್ಗೆ ಕೂಡ ಭರವಸೆ ನೀಡಿದ್ದಾರೆ. ಒಟ್ಟಾರೆಯಾಗಿ ರಾಜ್ ಕುಟುಂಬದ ಕುಡಿ ಮೊದಲ ಬಾರಿಗೆ ಚುನಾವಣೆ ಪ್ರಚಾರಕ್ಕೆ ಇಳಿದಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.