ಸಾಮಾನ್ಯವಾಗಿ ಎಲ್ಲರಿಗೂ ದೇವರು ಕಣ್ಣು ಕೈ ಕಾಲು ಎಲ್ಲವನ್ನು ಸರಿಯಾಗಿ ಕೊಟ್ರು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಛಲವೇ ಇರುವುದಿಲ್ಲ. ಅಥವಾ ಸಾಧನೆ ಮಾಡಬೇಕು ಎಂದುಕೊಂಡರೆ ವಿಘ್ನಗಳೇ ಹೆಚ್ಚು. ಅಯ್ಯೋ ನನ್ನಿಂದ ಇದು ಮಾಡೋದಕ್ಕೆ ಆಗೋದಿಲ್ಲ, ಅದು ಸಾಧ್ಯವಿಲ್ಲ ಎಂದು ಕೈ ಚೆಲ್ಲಿ ಕುಳಿತುಬಿಡುತ್ತಾರೆ. ಆದರೆ ಎಂತಹ ಸೋಮಾರಿಗು ಮಾದರಿ ಆಗುವಂತಹ ವ್ಯಕ್ತಿಯ ಕಥೆ ಇದು.
ನೀವು ಯೂಟ್ಯೂಬ್ ನಲ್ಲಿ ಉತ್ತರ ಕನ್ನಡದ ಬಸವ ನಾಡು ಬಾಗೇವಾಡಿಯ ಶಿವಪುತ್ರ ಎನ್ನುವ ತಂಡದ ಕಾಮಿಡಿ ವಿಡಿಯೋಗಳನ್ನು ನೋಡಿಯೇ ಇರುತ್ತೀರಿ. ಇದರಲ್ಲಿ ಸಹೋದರರೆದರು ಹೇಗೆ ಲಕ್ಷಾಂತರ ಲೈಕ್ಸ್ ಗಿಟ್ಟಿಸಿಕೊಳ್ಳುತ್ತಾರೆ. ಹೀಗೆ ಕಾಮಿಡಿ ವಿಡಿಯೋ ಮಾಡ್ತಾ ಇರುವ ಈ ಸಹೋದರರಲ್ಲಿ ಒಬ್ಬರ ಹೆಸರು ಕೃಷ್ಣಪ್ಪ ಅವರ ಒಂದು ಕಾಲಿಗೆ ಊನ ಇದ್ದು ಅಂಗವೈಕಲ್ಯತೆ ಹೊಂದಿದ್ದಾರೆ.
ವಿಕಲಚೇತನರಾಗಿದ್ದು ಕೊಂಡೆ ಸಾಕಷ್ಟು ಸಾಧನೆ ಮಾಡಿರುವ ಹಲವರನ್ನು ನಾವು ನೋಡಿದ್ದೇವೆ ಅದೇ ರೀತಿ ಕೃಷ್ಣಪ್ಪ ಕೂಡ ಕೇವಲ ಕಾಮಿಡಿ ವಿಡಿಯೋ ಮಾಡುವುದು ಮಾತ್ರವಲ್ಲ ಜನರಿಗೆ ಮನರಂಜನೆ ಕೊಡುವುದರ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದವರು.
ಹೌದು ಕೃಷ್ಣಪ್ಪ ಅವರು ಕಾಮಿಡಿ ವಿಡಿಯೋ ಮಾಡಿಕೊಂಡೆ ಜನರನ್ನು ನಗಿಸಿಕೊಂಡೆ ಇದೀಗ ವಕೀಲರಾಗಿ ಬಡ್ತಿ ಪಡೆದಿದ್ದಾರೆ. ಹೌದು ಇವರ ಈ ಸಾಧನೆಗೆ ಅವರ ದೇಹದ ವೈಖನ್ಯತೆ ಯಾವುದೇ ಸಮಸ್ಯೆ ಉಂಟು ಮಾಡಿಲ್ಲ. ವಿಕಲಚೇತನರಾಗಿರುವ ಕೃಷ್ಣಪ್ಪ ತನ್ನ ಒಂದು ಕಾಲು ಇಲ್ಲ ಎನ್ನುವುದನ್ನೇ ಮರೆತು ಆ ನೋವನ್ನ ಮೆಟ್ಟಿ ನಿಂತು ಇದೀಗ ವಕೀಲರಾಗಿ ಪದವಿ ಪಡೆದಿದ್ದಾರೆ.
ಕಾಮಿಡಿ ವಿಡಿಯೋಗಳ ಜೊತೆಗೆ ಇನ್ನು ವಕೀಲ ವೃತ್ತಿಯ ಪ್ರಾಕ್ಟೀಸ್ ಕೂಡ ಮಾಡಲಿದ್ದಾರೆ ಕೃಷ್ಣಪ್ಪ. ಕೃಷ್ಣಪ್ಪ ಅವರ ಈ ಸಾಧನೆಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿದ್ದಾರೆ. ಈಗಾಗಲೇ ಸಾವಿರಾರು ಜನರು ಸಾಮಾಜಿಕ ಜಾಲತಾಣದಲ್ಲಿ ಕೃಷ್ಣಪ್ಪ ಅವರಿಗೆ ಶುಭವಾಗಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ತಮ್ಮಲ್ಲಿರುವ ನ್ಯೂನ್ಯತೆಯನ್ನ ಲೆಕ್ಕಿಸದೆ ಸಾಧನೆ ಮಾಡುವ ಛಲ ಹೊಂದಿರುವ ಕೃಷ್ಣಪ್ಪನಂತವರು ಖಂಡಿತವಾಗಿಯೂ ಎಲ್ಲರಿಗೂ ಮಾದರಿ. ಕೃಷ್ಣಪ್ಪ ಅವರ ಈ ಸಾಧನೆಗೆ ನೀವು ವಿಶ್ ಮಾಡಿ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡುವುದರ ಮೂಲಕ ತಿಳಿಸಿ.