ಅಪ್ಪು

ಅಪ್ಪು ಹೆಸರಲ್ಲಿ ದುಡ್ಡು ಮಾಡೋಕೆ ಮುಂದಾದ್ರ..ಇಷ್ಟೇ ಜೀವನ..

CINEMA/ಸಿನಿಮಾ

ಜೇಮ್ಸ್ ಬಹುಶಃ ಈ ಸಿನಿಮಾ ಕನ್ನಡಿಗರಿಗೆ ಅದೂ ಸಹ ಈಗಿನ ಜನರಿಗೆ ಅವರುಗಳು ಇರುವವರೆಗೂ ನೆನಪಿನಲ್ಲಿ‌ಇರುವ ಸಿನಿಮಾ.. ಇದಕ್ಕೆ ಕಾರಣ ಅಪ್ಪು.. ಹೌದು ಕನ್ನಡ ಚಿತ್ರರಂಗದ ನಟ ಅನ್ನೋದಕ್ಕಿಂತ ಕನ್ನಡಿಗರ ಮನೆ ಮಗ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕವಾಗಿ ಅಗಲಿ ತುಂಬಲಾಗದ ನಷ್ಟವಾಯಿತು.ಮ್ ಮರೆಯಲಾಗದ ನೋವಾಯಿತು.. ಮನೆ ಮಗನನ್ನು‌ ಕಳೆದುಕೊಂಡ ದುಃಖ ಪ್ರತಿಯೊಬ್ಬ ಕನ್ನಡಿಗನಿಗೂ ಆಯಿತು.. ಇನ್ನು ಅಪ್ಪು ಹೋಗುವ ಮುನ್ನ ಜೇಮ್ಸ್ ಸಿನಿಮಾದಲ್ಲಿ ಅಭಿನಯಿಸಿದ್ದು ಆ ಸಿನಿಮಾ ಬಿಡುಗಡೆಯಾಗಬೇಕಿತ್ತು..

ಆದರೆ ಆ ಸಿನಿಮಾದ ಕೆಲಸ ಇನ್ನೂ ಸಹ ಬಾಕಿ‌ ಉಳಿದಿತ್ತು.. ಡಬ್ಬಿಂಗ್ ಆಗಿರಲಿಲ್ಲ.. ಜೊತೆಗೆ ಕೆಲ ದೃಶ್ಯಗಳ ಚಿತ್ರೀಕರಣವೂ ಬಾಕಿ‌ ಇತ್ತು.. ಆದರೆ ಅಷ್ಟರಲ್ಲಿ ಇತ್ತ ಅಪ್ಪುವೇ ಇಲ್ಲದಂತಾಗಿ ಹೋದರು.. ಇನ್ನು ಅಪ್ಪು ಅವರು ಮತ್ತೊಂದು ತಮ್ಮದೇ ಬ್ಯಾನರ್ ನಲ್ಲಿ ಗಂಧದ ಗುಡಿ ಸಿನಿಮಾದಲ್ಲಿ ಅಭಿನಯಿಸಿ ಡಬ್ಬಿಂಗ್ ಕೂಡ ಮುಗಿಸಿದ್ದು ಸಿನಿಮಾ ಬಿಡುಗಡೆಯಾಗಬೇಕಿದೆ.. ಆದರೂ ಸಹ ಜೇಮ್ಸ್ ಸಿನಿಮಾವನ್ನು ಅಪ್ಪು ಅವರ ಕೊನೆ ಸಿನಿಮಾ ಇದು ಎಂದು ಬಿಂಬಿಸಲಾಯಿತು.. ಅಂದುಕೊಂಡಂತೆ ಪುನೀತ್ ಅವರ ಹುಟ್ಟುಹಬ್ಬದ ದಿನ ಸಿನಿಮಾ ಬಿಡುಗಡೆಯೂ ಆಯಿತು.. ಆದರೆ ಅಪ್ಪುವನ್ನು ತೆರೆ ಮೇಲೆ ಕಂಡರೂ ಸಹ ಅಪ್ಪುವಿನ ಧ್ವನಿ‌ ಇಲ್ಲದೇ ಮತ್ತಷ್ಟು ಸಂಕಟ ಅನುಭವಿಸುವಂತಾಯಿತು..

ಪುನೀತ್ ಅವರ ಬದಲಿಗೆ ಶಿವಣ್ಣ ಪುನೀತ್ ಅವರಿಗೆ ಧ್ವನಿ‌ ನೀಡಿದ್ದರು.. ಸಿನಿಮಾ ದೊಡ್ಡ ಸಕ್ಸಸ್ ಅನ್ನು ಕಂಡಿತ್ತು.. ಕಲೆಕ್ಷನ್ ನಲ್ಲಿ ದಾಖಲೆ ಬರೆದು ಮೊದಲ ದಿನವೇ ಇಪ್ಪತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತು.. ಹೀಗೆ ಬಾಕ್ಸ್ ಆಫೀಸಿನಲ್ಲಿ ಹೊಸ ದಾಖಲೆ ಬರೆಯಿತು.. ಆದರೆ ಇದೀಗ ಸಿನಿಮಾ ಬಿಡುಗಡೆಯಾಗಿ ಓಟಿಟಿಯಲ್ಲಿಯೂ ಸಿನಿಮಾ ಬಂದ ನಂತರ ಜೇಮ್ಸ್ ಚಿತ್ರತಂಡದಿಂದ ಹೊಸ ಪ್ರಕಟಣೆ ಬಂದಿದೆ.. ಹೌದು ಅಪ್ಪು ಅವರ ಧ್ವನಿಯನ್ನು ಟೆಕ್ನಾಲಜಿ ಮೂಲಕ ರೀಕ್ರಿಯೇಟ್ ಮಾಡಲಾಗಿದ್ದು ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನದಂದು ಮತ್ತೆ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.. ಇವರ ಮಾತಿಗೆ ಎಲ್ಲರೂ ಸಂತೋಷ ಪಟ್ಟಿದ್ದು ನಿಜ..

ಆದರೆ ಇದೀಗ ಸಿನಿಮಾದ ನಿರ್ದೇಶಕ ನಿರ್ಮಾಪಕರ ಕುರಿತು ಸಾಕಷ್ಟು ಬೇರೆ ಬೇರೆ ರೀತಿಯ ಮಾತು ಕೇಳಿ ಬರುತ್ತಿದೆ.. ಹೌದು ಅಪ್ಪು ಅಗಲಿದ ಕೆಲ ತಿಂಗಳಲ್ಲಿಯೇ ಅಪ್ಪು ಧ್ವನಿಯನ್ನು ರೀಕ್ರಿಯೇಟ್ ಮಾಡಬಹುದು ಎಂದು ಖುದ್ದು ಚಿತ್ರತಂಡವೇ ತಿಳಿಸಿತ್ತು.. ಆದರೆ ಆ ಕೆಲಸ ಮಾಡದೇ ಶಿವಣ್ಣನ ಬಳಿ ಡಬ್ ಮಾಡಿಸಲಾಯಿತು.. ಇದೀಗ ಸಿನಿಮಾ ಬಿಡುಗಡೆಯಾಗಿ ಕೋಟಿ ಕೋಟಿ ಕಲೆಕ್ಷನ್ ಮಾಡಿದ ನಂತರ ಕೇವಲ ಇಪ್ಪತ್ತೈದಿ ದಿನದಲ್ಲಿಯೇ ಅಪ್ಪು ಧ್ವನಿ ರೀಕ್ರಿಯೇಟ್ ಮಾಡಿದ್ದು ಈಗ ಮತ್ತೆ ಬಿಡುಗಡೆ ಮಾಡುತ್ತೀವಿ ಎನ್ನುತ್ತಿದ್ದಾರೆ..

ಇದೇ ಕೆಲಸವನ್ನು ಮೊದಲೇ ಮಾಡಿದ್ದರೆ ಕೋಟ್ಯಾಂತರ ಜನ ಸಿನಿಮಾ ನೋಡುವಾಗ ಅಪ್ಪುವಿನ ಧ್ವನಿ ಇಲ್ಲದೇ ಸಂಕಟ ಪಡುವುದಾದರೂ ಕಡಿಮೆಯಾಗಿರಿತಿತ್ತು.. ಆದರೆ ಈಗ ಅಪ್ಪು ಧ್ವನಿ ರೀಕ್ರಿಯೇಟ್ ಮಾಡಿದ್ದೇವೆ.. ಮತ್ತೆ ಬಿಡುಗಡೆ ಮಾಡ್ತೇವೆ ಎಂದು ಸುದ್ಧಿ ಗೋಷ್ಟಿ ಮಾಡಿದ್ದಾರೆ.. ಇವರುಗಳು ಹಣ ಮಾಡುವ ಸಲುವಾಗಿ ಎರೆಡೆರುಡು ಬಾರಿ ಬಿಡುಗಡೆ ಮಾಡುವ ನಾಟಕ ಆಡ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದು ಅಭಿಮಾನಿಗಳ ಭಾವನೆಗಳ ಜೊತೆ ಆಟ ಆಡಬೇಡಿ ಎಂದಿದ್ದಾರೆ..

ಇದನ್ನೂ ಓದಿ >>>  ನನ್ನ ತಂದೆ ಯಾರು ಅಂತ ವಿನೋದ್ ರಾಜ್ ಕೇಳಿತ್ತಿದ್ದಾಗ ತಾಯಿ ಲೀಲಾವತಿ ಏನ್ ಹೇಳುತ್ತಿದ್ರು ಗೊತ್ತಾ..

ಇನ್ನು ಈ ವಿಚಾರದ ಬಗ್ಗೆ ನಿನ್ನೆ ಮಾದ್ಯಮದವರು ಶಿವಣ್ಣನನ್ನು ಕೇಳಲಾಗಿ ಈತರ ರೀಕ್ರಿಯೇಟ್ ಮಾಡಿದ್ದು ಸಂತೋಷ ಆಗ್ತಿದೆ.. ಆದರೆ ಮೊದಲೇ ಮಾಡಿದ್ರೆ ಇನ್ನೂ ಚೆನ್ನಾಗಿರ್ತಿತ್ತು ಎಂದಿದ್ದಾರೆ..ಒಟ್ಟಿನಲ್ಲಿ ಇದೆಲ್ಲಾ ಸಂದರ್ಭಗಳನ್ನು ಸೂಕ್ಷ್ಮವಾಗಿ ನೋಡಿದರೆ ಕೆಲವರಿಗೆ ನಿಷ್ಕಲ್ಮಷವಾದ ಭಾವನೆಗಳು ಹಣ ಸಂಪಾದನೆಯ ಸರಕಷ್ಟೇ ಎನಿಸುತ್ತದೆ.. ಅದೇನೇ ಆಗಲಿ ಅಪ್ಪು ಸರ್ ನೀವೆಂದು ನಮ್ಮಗಳ‌ ಮನಸ್ಸಿನಲ್ಲಿ ಅಜರಾಮರ.. ಕನ್ನಡಿಗರು ಉಸಿರಿರುವವರೆಗೂ ನೀವು ಹಸಿರಾಗಿರುವಿರಿ.. ಮತ್ತೆ ಹುಟ್ಟಿ ಬನ್ನಿ ಅಪ್ಪು ಸರ್.. ಮತ್ತೆ ಹುಟ್ಟಿಬನ್ನಿ..




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...