shivanna-birthday

ಶಿವಣ್ಣನ‌ ಹುಟ್ಟುಹಬ್ಬಕ್ಕೆ ಅಶ್ವಿನಿ ಪುನೀತ್ ಕೊಟ್ಟ ಉಡುಗೊರೆ ನೋಡಿ..

CINEMA/ಸಿನಿಮಾ

ಸ್ಯಾಂಡಲ್ವುಡ್ ನ ಹ್ಯಾಟ್ರಿಕ್ ಹೀರೋ ದೊಡ್ಮನೆಯ ದೊಡ್ಡ ಮಗ ಶಿವಣ್ಣ ನಿನ್ನೆಯಷ್ಟೇ ತಮ್ಮ ಅರವತ್ತನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಸಿನಿಮಾ‌ ಮಂದಿ ಕುಟುಂಬದವರು ಹಾಗೂ ರಾಜಕೀಯ ಗಣ್ಯರು ಸೇರಿದಂತೆ ಆತ್ಮೀಯರು ಸ್ನೇಹಿತರು ಎಲ್ಲರೂ ಸಹ ಶಿವಣ್ಣನಿಗೆ ಶುಭ ಹಾರೈಸಿದರು.. ಇತ್ತ ಶಿವಣ್ಣನ ಅರವತ್ತನೇ ಹುಟ್ಟುಹಬ್ಬದ ದಿನ ಶಿವಣ್ಣನ ಮುಂದಿನ ಸಿನಿಮಾಗಳು ಸಹ ಅನೌನ್ಸ್ ಆದವು.‌. ಗೋಸ್ಟ್.. 45, ವೇದ ಹೀಗೆ ಮೂರ್ನಾಲ್ಕು ಸಿನಿಮಾಗಳ ಅಪ್ಡೇಟ್ ನೀಡಲಾಯಿತು.. ಅರವತ್ತರಲ್ಲೂ ಮೂವತ್ತು ನಲವತ್ತರಂತೆ ಕಾಣುವ ಶಿವಣ್ಣನಿಗೆ ಅಭಿಮಾನಿಗಳಿಂದ ಶುಭಾಶಯಗಳು ಹಾಗೂ ಹಾರೈಕೆಗಳ ಮಹಾಪೂರವೇ ಹರಿದು ಬಂದಿತ್ತು..

ಇನ್ನು ಕುಟುಂಬಸ್ಥರಾದ ರಾಘಣ್ಣ.. ವಿನಯ್ ರಾಜ್ ಕುಮಾರ್.. ಯುವ ರಾಜ್ ಕುಮಾರ್.. ಧೀರನ್ ರಾಮ್ ಕುಮಾರ್.. ವಿಜಯ ರಾಘವೇಂದ್ರ.. ಶ್ರೀ ಮುರುಳಿ ಸೇರಿದಂತೆ ಸಂಪೂರ್ಣ ಕುಟುಂಬವೇ ಶಿವಣ್ಣನಿಗೆ ಶುಭ ಹಾರೈಸಿತು.. ಎಲ್ಲವೂ ಸರಿ ಇದ್ದಿದ್ದರೆ ಈ ವರ್ಷ ಶಿವಣ್ಣನಿಗೆ ಅರವತ್ತನೇ ವರ್ಷದ ಷಷ್ಠಿ ಪೂರ್ತಿ ಆಚರಣೆ ಮಾಡಬೇಕಿತ್ತು.. ಆದರೆ ಕುಟುಂಬದ ಕುಡಿ ಅಗಲಿದ ನೋವು ಯಾವುದೇ ಸಂಭ್ರಮವನ್ನು ಬೇಡವೆಂದು ದೂರ ತಳ್ಳಿದರು..

ಕಳೆದ ಎರಡು ವರ್ಷದ ಹಿಂದೆ ಇದೇ ದಿನ ಅಪ್ಪು ಶಿವಣ್ಣನ ಹುಟ್ಟುಹಬ್ಬಕ್ಕಾಗಿ ಶಿವಣ್ಣನಿಗೆ ಇಷ್ಟವೆಂದು ಎರಡು ಲಕ್ಷ ರೂಪಾಯಿಯ ಸೈಕಲ್ ಅನ್ನು ಉಡುಗೊರೆಯಾಗಿ ನೀಡಿದ್ದರು.. ಇತ್ತ ಶಿವಣ್ಣ ತಮ್ಮ ಮನೆಯೊಳಗೇ ಸೈಕಲ್ ರೈಡ್ ಮಾಡಿ ವೀಡಿಯೋ ಮೂಲಕ ಸಂತೋಷ ಹಂಚಿಕೊಂಡಿದ್ದರು..

ಆದರೆ ಕೆಲವೇ ದಿನಗಳಲ್ಲಿ ಎಲ್ಲವೂ ಬದಲಾಗಿ ಹೋಯ್ತು.. ಇದ್ದಕಿದ್ದ ಹಾಗೆ ದೊಡ್ಡ ನೋವು ಕುಟುಂಬಕ್ಕೆ ಎದುರಾಯ್ತು.. ಅಪ್ಪು ಅಗಲಿಕೆಯ ನೋವು ಅಭಿಮಾನಿಗಳಿಗೆ ಸದಾ ಕಾಲ ಕಾಡುವುದು ಸತ್ಯ.. ಆದರೆ ಕುಟುಂಬಕ್ಕೆ ಅದು ಹೇಳಲಾಗದ ಸಂಕಟ.. ಅನುಭವಿಸಲೇ ಬೇಕಾದ ದೊಡ್ಡ ನೋವಾಗಿ ಉಳಿದು ಹೋಯಿತು.. ಇಂದು ಅಪ್ಪು ಇದ್ದಿದ್ದರೆ ತನ್ನ ಅಣ್ಣನ ಷಷ್ಟಿ ಪೂರ್ತಿ ಕಾರ್ಯಕ್ರಮವನ್ನು ಇನ್ನು ಯಾವ ರೀತಿ ಮಾಡುತ್ತಿದ್ದರೋ ಎಷ್ಟು ಸಂತೋಷ ಪಡುತ್ತಿದ್ದರೋ ಅವರೇ ಬಲ್ಲರು.. ಆದರೆ ಇಂದು ಅಪ್ಪುವಿನ ಜಾಗದಲ್ಲಿ ಅಶ್ವಿನಿ ಪುನೀತ್ ಅವರು ನಿಲ್ಲಲೇ ಬೇಕಾದ ಸಂದರ್ಭವಿದ್ದು ಪುನೀತ್ ಅವರು‌ ಮಾಡುತ್ತಿದ್ದ ಕೆಲಸವನ್ನೆಲ್ಲಾ ಜವಾಬ್ದಾರಿಗಳನ್ನೆಲ್ಲಾ ಅಶ್ವಿನಿ ಅವರೇ ನಿಭಾಯಿಸುತ್ತಿದ್ದಾರೆ..

ಅದೇ ರೀತಿ ನಿನ್ನೆ ಶಿವಣ್ಣನ ಹುಟ್ಟುಹಬ್ಬದ ದಿನದಂದು ಸಹ ಸಾಮಾಜಿಕ ಜಾಲತಾಣದಲ್ಲಿ ಶಿವಣ್ಣನಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ ಶುಭ ಹಾರೈಸಿದ್ದಾರೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ಶಿವಣ್ಣನ ಫೋಟೋ ಹಂಚಿಕೊಂಡಿರುವ ಅಶ್ವಿನಿ ಪುನೀತ್ ಅವರು “ಹುಟ್ಟು ಹಬ್ಬದ ಶುಭಾಶಯಗಳು ಶಿವಣ್ಣ.. ಸದಾಕಾಲ ಒಳಿತು ಮಾತ್ರವೇ ಆಗಲಿ ನಿಮಗೆ.. ವಿಷಿಂಗ್ ಯು ದಿ ಬೆಸ್ಟ್ ಆಲ್ವೇಸ್..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಅಪ್ಪು ಅಗಲಿಕೆಯ ನಂತರ ದೊಡ್ಮನೆ ಸೊಸೆ ದೊಡ್ಡತನದಿಂದಲೇ ನಡೆದುಕೊಂಡ ಅಶ್ವಿನಿ ಅವರು ಪ್ರತಿಯೊಂದು ದೊಡ್ಡ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಸಹ ಶಿವಣ್ಣನ ಬಳಿ ತಿಳಿಸಿಯೇ ಮುಂದುವರೆಯುತ್ತಿದ್ದು ನಿಜಕ್ಕೂ ಅವರ ದೊಡ್ಡಗುಣ ಎನ್ನಬಹುದು.. ಅಪ್ಪು ಅಗಲಿಕೆಯ ನಂತರ ಆಫೀಸಿಗೆ ತೆರಳುವಾಗ ಅನುಮತಿ ಪಡೆದು ಬಂದರು.. ನಂತರದಲ್ಲಿ ಕುಟುಂಬದ ವಿಚಾರವಾಗಲಿ ಸಿನಿಮಾ ಸಂಬಂಧ ಪಟ್ಟವಿಚಾರವಾಗಲಿ.. ನಿರ್ಮಾಣ ಸಂಸ್ಥೆಗೆ ಸಂಬಂಧ ಪಟ್ಟ ವಿಚಾರವಾಗಲಿ ಎಲ್ಲವನ್ನೂ ಸಹ ತಿಳಿಸಿ ಮುಂದುವರೆದರು.. ಇದೀಗ ಶಿವಣ್ಣನಿಗೆ ತಮ್ಮ ಇದ್ದಿದ್ದರೆ ಹೇಗೆ ಶುಭ ಹಾರೈಸುತ್ತಿದ್ದರೋ ಇಂದು ಅದೇ ಜಾಗದಲ್ಲಿ ಅಶ್ವಿನಿ ಅವರು ನಿಂತು ಶುಭಾಶಯ ತಿಳಿಸಿದ್ದಾರೆ..




ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...