ಶಿವಣ್ಣ ಅಡುಗೆ ಮಾಡುತ್ತಿರುವ ಅಪರೂಪದ ವೀಡಿಯೊ

ಪುನೀತ್ ರಾಜಕುಮಾರ್ ಅವರು ಹಲವಾರು ಸಾಮಾಜಿಕ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ ಎನ್ನುವುದು ಇತ್ತೀಚೆಗೆ ನಮಗೆಲ್ಲ ತಿಳಿದಿರುವ ವಿಷಯ ಇನ್ನೂ ರಾಜ್ ಕುಮಾರ್ ಕುಟುಂಬದವರು ಒಂದಲ್ಲ ಒಂದು ಸಾಮಾಜಿಕ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ  ಅಣ್ಣಾವ್ರ ಅಭಿಮಾನಿಗಳು ಎಲ್ಲರೂ ತಮ್ಮ ಮನೆಯಲ್ಲಿ ಹಬ್ಬದ ಅಡುಗೆ ತಯಾರಿಸಿ ಊಟ ಮಾಡುತ್ತಾರೆ ಯಾಕೆಂದರೆ ಅದು ವರನಟ ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ

ಆದರೆ ಈ ವರ್ಷ ಅವರ ಜನ್ಮದಿನವನ್ನು ಅಪ್ಪುವಿನ ಸವಿ ನೆನಪಿನ ಜೊತೆಗೆ ಪುನೀತ್ ರಾಜ್ ಕುಮಾರ್ ನಡೆಸಿಕೊಂಡು ಬಂದಿರುವ ಶಕ್ತಿಧಾಮದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಶಿವಣ್ಣ ಅವರು ತಮ್ಮ ಅಭಿಮಾನಿ ಜೊತೆಗೆ ಆಚರಿಸಲಿದ್ದಾರೆ

ಇನ್ನೂ ಶಿವಣ್ಣ ಅವರ ಚಿತ್ರ ಈಗಷ್ಟೆ ಮುಕ್ತಾಯ ಆಗಿದ್ದು ಆ ಸಿನಿಮಾವನ್ನು ಅಪ್ಪು ಅವರು ಬಹಳ ಇಷ್ಟ ಪಟ್ಟಿದ್ದರು ಹಾಗಾಗಿ ಈ ಸಿನಿಮಾವನ್ನು ನನ್ನ ತಮ್ಮ ಹಾಗೂ ಅವನ ಅಭಿಮಾನಿಗಳಿಗೆ ಅರ್ಪಿಸಲಿದ್ದೇನೆ ಎಂದು ಹೇಳಿದ್ದಾರೆ. ಏಪ್ರಿಲ್ 24 ರಂದು ಮೈಸೂರಿನ ಶಕ್ತಿಧಾಮ ಕ್ಕೆ ಭೇಟಿ ಮಾಡಲಿದ್ದು ತಮ್ಮ ಕೈಯಾರೆ ಅಡುಗೆ ಮಾಡಿ ಅಲ್ಲಿನ ಮಕ್ಕಳಿಗೆ ಉಣಬಡಿಸಿ ತದನಂತರ ತಮ್ಮ ಅಭಿಮಾನಿಗಳು ಹಾಗೂ ಇತರರಿಗೆ ಅನ್ನ ಸಂತರ್ಪಣೆ ಮಾಡಲಿದ್ದಾರೆ ಎಂದು ವರದಿ ಅಲ್ಲಿ ತಿಳಿಸಿದ್ದಾರೆ.

You might also like

Comments are closed.