ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಶಿವಣ್ಣ ಗೀತಕ್ಕ..! ನೋವಿನಲ್ಲೂ ಶಿವಣ್ಣ ಹೇಳಿದ್ದೆ ಬೇರೆ

CINEMA/ಸಿನಿಮಾ

ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರು ಹ್ಯಾಟ್ರಿಕ್ ಹೀರೋ ಆಗಿ ಕನ್ನಡದ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಡಾಕ್ಟರ್ ರಾಜಕುಮಾರ್ ಅವರ ಮೊದಲ ಪುತ್ರನಾಗಿ ಜನಿಸಿದ ಶಿವಣ್ಣ ಅವರ ತಂದೆ ಹಾಗೇನೆ ಅಭಿಮಾನಿಗಳೆ ನಮ್ಮ ಮನೆಯ ದೇವರು ಎನ್ನುತ್ತಾರೆ. ಹಾಗೆ ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಬಂದರೂ ಮೊದಲು ಎದ್ದು ನಿಲ್ಲುವುದು ಅಂದರೆ ಅದು ಶಿವಣ್ಣ ಮಾತ್ರ. ಸಿನಿಮಾ ಡಬ್ಬಿಂಗ್ ವಿಚಾರದಲ್ಲಿಯೂ ಕೂಡ ಶಿವಣ್ಣ ತುಂಬಾನೇ ಹೋರಾಟ ಮಾಡಿದ್ದರು.

ಅವರ ಸರಳತೆಯನ್ನ, ಹಾಗೆ ಅವರ ಪ್ರೀತಿ ಅವರ ಸ್ನೇಹ ದೊಡ್ಡಮನೆಯ ಆ ಸಹೃದಯ ಹೃದಯತೆ ಎಲ್ಲರಿಗೂ ಬರುವುದಿಲ್ಲ. ಚಿತ್ರವನ್ನ ವೀಕ್ಷಿಸುವ ಅಭಿಮಾನಿ ದೇವರುಗಳಿಗೆ ಇವರು ಕೊಡುವ ಮರ್ಯಾದೆ ಅಷ್ಟಿಷ್ಟಲ್ಲ, ಎಲ್ಲದರಲ್ಲಿಯೂ ಕೂಡ ದೊಡ್ಡವರೆ ಎಂದು ನಾವು ಹೇಳಬಹುದು.

ಸಾಕಷ್ಟು ಸಹಾಯ ಮಾಡುತ್ತ ಇಂದಿಗೂ ಕೂಡ ಕರ್ನಾಟಕ ಚಿತ್ರರಂಗದಲ್ಲಿ ದೊಡ್ಡದಾಗಿ ಸಾಧನೆ ಮಾಡುತ್ತಾ ಬಂದಿದೆ ರಾಜಣ್ಣ ಅವರ ಕುಟುಂಬ. ತಂದೆ ಹೇಳಿಕೊಟ್ಟ ದಾರಿಯಲ್ಲಿ ಶಿವಣ್ಣ ಅವರು ಕೂಡ ನಡೆದು ಬಂದಿದ್ದಾರೆ.ಹೌದು ಇತ್ತೀಚಿಗೆ ಅವರ ಕುಟುಂಬದಲ್ಲಿ ಒಂದು ನಡೆಯಬಾರದ ಘಟನೆ ಅತಿಬೇಗನೆ ನಡೆಯಿತು. ನಮ್ಮ ಪ್ರೀತಿಯ ಅಪ್ಪು ಅವರನ್ನ ಅವರು ಮಾತ್ರವಲ್ಲದೆ ಕರುನಾಡೆ ಕಳೆದುಕೊಂಡು ಕಣ್ಣೀರು ಹಾಕಿತ್ತು.

ಶಿವಣ್ಣ-ಗೀತಕ್ಕ 36ನೇ ಮ್ಯಾರೇಜ್ ಆನಿವರ್ಸರಿ l Shivarajkuma marriage anniversary  #shivarajkumar#sandalwood - YouTube

ಹೌದು ಅಪ್ಪು ನೋವು ಪ್ರತಿದಿನ ಶಿವಣ್ಣ ಅವರ ಮುಖದಲ್ಲಿ ಕಾಣುತ್ತಿದೆ, ಈಗಲೂ ಕೂಡ ಶಿವಣ್ಣ ಅವರು ಅಪ್ಪು ಅಗಲಿಕೆಯಿಂದ ಇನ್ನೂ ಹೊರ ಬಂದಿಲ್ಲ, ಹಾಗೆ ಹೊರಬರುವುದು ಅನುಮಾನ ಎನ್ನಬಹುದು. ಶಿವಣ್ಣ ಮೊನ್ನೆ ನಾವು ಯಾವುದೇ ಕುಷಿಯ ಕಾರ್ಯಕ್ರಮಗಳನ್ನು ಹೆಚ್ಚಾಗಿ ಮಾಡುವುದಿಲ್ಲ ಎಂದು ಹೇಳಿದ್ದರು.

ಆದರೆ ಅವರ ಅಭಿಮಾನಿಗಳು ಇಂದು ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ಅವರ ಮದುವೆ ವಾರ್ಷಿಕೋತ್ಸವದ ದಿನ, ಈ ದಿನವ ಆಚರಣೆ ಮಾಡಲೇಬೇಕು ಶಿವಣ್ಣ ನೀವು ಎಂದು ಅವರ ಮನೆಗೆ ಹೋಗಿ ಒತ್ತಾಯ ಮಾಡಿದ್ದಾರೆ. ಆಗ ಅಭಿಮಾನಿಗಳಿಗೆ ನೋವಾಗುತ್ತದೆ, ನಾನು ಅವರ ಮಾತನ್ನು ನಡೆಸಲಿಲ್ಲ ಎಂದು ಅರಿತು ಶಿವಣ್ಣ ಸರಳವಾಗಿಯೇ 35ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಣೆ ಮಾಡಿದ್ದಾರೆ. ಶಿವಣ್ಣ ಮತ್ತು ಪತ್ನಿ ಗೀತಾ ಶಿವರಾಜಕುಮಾರ್ ಅವರು 35 ವರ್ಷ ವಿವಾಹ ವಾರ್ಷಿಕೋತ್ಸವ ಮುಕ್ತಾಯ ಮಾಡಿದ್ದು, ಇಂದು 36ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೌದು ಸಂತೋಷದ ಆ ಕ್ಷಣ ಹೇಗಿತ್ತು ಗೊತ್ತಾ..? ಈ ವಿಡಿಯೋದಲ್ಲಿದೆ ನೋಡಿ. ಹಾಗೆ ಶಿವಣ್ಣ ಗೀತಕ್ಕ ಅವರಿಗೆ ಶುಭಕೋರಿ. ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೆ ವಿಡಿಯೋ ಇಷ್ಟವಾದರೆ ತಪ್ಪದೆ ಶೇರ್ ಮಾಡಿ ಧನ್ಯವಾದಗಳು…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.