ಮುಸ್ಲಿಂ ದಂಪತಿ

ಮಗುವಿಗೆ ಶಿವಮಣಿ ಹೆಸರಿಟ್ಟು ಸೌಹಾರ್ದದ ಸಂದೇಶ ನೀಡಿದ ಮುಸ್ಲಿಂ ದಂಪತಿ…

Today News / ಕನ್ನಡ ಸುದ್ದಿಗಳು

ತುಮಕೂರಿನ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವದಲ್ಲಿ ಶುಕ್ರವಾರ ಮುಸ್ಲಿಂ ದಂಪತಿ ತಮ್ಮ ಮಗುವಿಗೆ ‘ಶಿವಮಣಿ’ ಎಂದು ಹೆಸರಿಡುವ ಮೂಲಕ ಸಮಾಜಕ್ಕೆ ಸಾಮರಸ್ಯದ ಸಂದೇಶ ರವಾನಿಸಿದೆ.

ಸಿದ್ದಗಂಗಾ ಮಠದ ಆವರಣದಲ್ಲಿ ಡಾ ಶಿವಕುಮಾರ ಮಹಾ ಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್‌ನಿಂದ ಆಯೋಜಿಸಿದ್ದ ನಾಮಕರಣ ಕಾರ್ಯಕ್ರಮದಲ್ಲಿ 115 ಮಕ್ಕಳಿಗೆ ಶಿವಕುಮಾರ ಸ್ವಾಮೀಜಿ ಅವರ ಹೆಸರು ನಾಮಕರಣ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತುಮಕೂರು ತಾಲೂಕಿನ ಕ್ಯಾತ್ಸಂದ್ರದ ನಿವಾಸಿ ಶಾಹಿಸ್ತಾ-ಜಮೀರ್ ದಂಪತಿಯ ಮಗುವಿಗೆ ಶಿವಮಣಿ ಎಂದು ಹೆಸರಿಟ್ಟರು.

ತುಮಕೂರು: ಮಗುವಿಗೆ ಶಿವಮಣಿ ಹೆಸರಿಟ್ಟು ಸೌಹಾರ್ದದ ಸಂದೇಶ ನೀಡಿದ ಮುಸ್ಲಿಂ ದಂಪತಿ | Eedina | ಈದಿನ

“ನಮಗೆ ಹಿಂದುಗಳ ಹಾಗೆ ಇರಲು ಇಷ್ಟ. ಹಾಗಾಗಿ ಮಠದ ಆವರಣದಲ್ಲಿ ಸ್ವಾಮೀಜಿಯ ಹೆಸರು ಇಡಲಾಗಿದೆ. ಶಿವಕುಮಾರ ಸ್ವಾಮೀಜಿ ನಡೆದಾಡಿದ ಸ್ಥಳದಲ್ಲಿ ನಮ್ಮ ಮಗುವಿಗೆ ನಾಮಕರಣ ಮಾಡುತ್ತಿರುವುದು ಖುಷಿ ನೀಡುತ್ತಿದೆ. ಸ್ವಾಮೀಜಿ ಅವರ ವಿಚಾರಧಾರೆ ನಮಗೆಲ್ಲ ಮಾದರಿ. ಸಮಾನತೆಯ ಸಂದೇಶ ಸಾರಿದ್ದವರು ಸ್ವಾಮೀಜಿ. ಸಹಬಾಳ್ವೆ ನಡೆಸಲು ಸ್ವಾಮೀಜಿಯ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆ” ಎಂದು ಶಾಹಿಸ್ತಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

ರಾಜ್ಯದ ನಾನಾ ಭಾಗಗಳಿಂದ ಮಠಕ್ಕೆ ಬಂದಿದ್ದ ಮಕ್ಕಳಿಗೆ ನಾಮಕರಣ ಮಾಡುವ ಜತೆಗೆ ಮಕ್ಕಳಿಗೆ ಬೇಕಾದ ತೊಟ್ಟಿಲು, ಇತರ ಪರಿಕರಗಳನ್ನು ವಿತರಿಸಲಾಯಿತು ಎಂದು ಟ್ರಸ್ಟ್ ಸದಸ್ಯೆ ಅನುರಾಧ ವಿ.ಪಾಟೀಲ ವಿವರಿಸಿದ್ದಾರೆ.

ಮೂರ್ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಇದೊಂದು ವಿಭಿನ್ನ ಕಾರ್ಯಕ್ರಮ. ಶಿವಕುಮಾರ ಸ್ವಾಮೀಜಿ ಅವರ ಹುಟ್ಟುಹಬ್ಬದ ಅಂಗವಾಗಿ ಮಕ್ಕಳಿಗೆ ಹಾಸಿಗೆ, ತೊಟ್ಟಿಲನ ಉಚಿತವಾಗಿ ನೀಡಲಾಗುತ್ತಿದೆ. ರಾಮನಗರ, ಬೀದರ್, ರಾಯಚೂರು ಸೇರಿದಂತೆ ರಾಜ್ಯದ ಎಲ್ಲ ಭಾಗದಿಂದ ಎಲ್ಲ ಧರ್ಮದ ಮಕ್ಕಳು ನಾಮಕರಣದಲ್ಲಿ ಭಾಗಿಯಾಗಿದ್ದರು ಎಂದು ಟ್ರಸ್ಟ್ ಅಧ್ಯಕ್ಷ ಜಯಣ್ಣ ತಿಳಿಸಿದ್ದಾರೆ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...