ರಕ್ಷಿತ್ ಶೆಟ್ಟಿ

ರಶ್ಮಿಕ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ರಕ್ಷಿತ್ ಶೆಟ್ಟಿ….ನೋಡಿ ಹೇಳಿದ್ದೇನು…

CINEMA/ಸಿನಿಮಾ

ನಮಸ್ಕಾರ ವೀಕ್ಷಕರೇ ರಶ್ಮಿಕ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ದೂರವಾದ ನಂತರ ಯಾವತ್ತು ರಶ್ಮಿಕಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದವರಲ್ಲ ರಕ್ಷಿತ್ ಶೆಟ್ಟಿ. ಮೊನ್ನೆಯಷ್ಟೇ ಸಂದರ್ಶನವೊಂದರಲ್ಲಿ ರಶ್ಮಿಕಾ ಬಗ್ಗೆ ಮಾತನಾಡುತ್ತಾ ಅವರ ಬೆಳವಣಿಗೆ ಖುಷಿ ತಂದಿದೆ ಎಂದು ಹೇಳಿದ್ದರು.

ಅಲ್ಲದೆ ತಮ್ಮ ಪರಮ್ ಸ್ಟುಡಿಯೋಸ್ ನಿಂದ ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೂಡ ಹೇಳಿದ್ದಾರೆ. ಆದರೆ ರಕ್ಷಿತ್ ಶೆಟ್ಟಿ ಬರ್ತಡೇ ದಿನ ರಶ್ಮಿಕ ಮಂದಣ್ಣ ಅವರು ಶುಭಾಶಯ ಹೇಳಲೇ ಇಲ್ಲ. ಈ ಹಿಂದೆಯೂ ರಶ್ಮಿಕಾ ಅವರು ಕನ್ನಡದ ಅನೇಕ ನಟರ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳುವುದಾಗಲಿ ಅಥವಾ ನಿಧನರಾದಾಗ ಶಾಂತಿ ಕೋರುವುದು ಆಗಲಿ ಮಾಡದೇ ಅಭಿಮಾನಿಗಳ ಕೋಪಕ್ಕೆ ಕಾರಣರಾಗಿದ್ದರು.

ಇವತ್ತು ಕೂಡ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಕಿಡಿಕಾರಿದ್ದಾರೆ. ಒಳ್ಳೆಯ ಹೃದಯವಿರುವ ವ್ಯಕ್ತಿಯ ಋಣದಲ್ಲಿ ಇದ್ದೀರಿ ಎಂದು ಹಲವರು ಬರೆದುಕೊಂಡಿದ್ದಾರೆ. ಕಿರಿಕ್ ಪಾರ್ಟಿ ಮೂಲಕ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ್ದರು ರಕ್ಷಿತ್ ಶೆಟ್ಟಿ. ಈ ಸಿನಿಮಾವು ಕೂಡ ದೊಡ್ಡ ಹಿಟ್ ಆಗಿತ್ತು

Rakshit Shetty to Rashmika Mandanna: grow grow and grow girl | Kannada Movie News - Times of India

ದೊಡ್ಡ ಹೆಸರು ಕೂಡ ಬಂತು. ಕನ್ನಡ ಸ್ಟಾರ್ ನಟರ ಸಿನಿಮಾದಲ್ಲಿ ಅವಕಾಶ ಸಿಗಲು ಇದೇ ಚಿತ್ರ ನೆರವಾಗಿತ್ತು. ಅನಂತರ ರಕ್ಷಿತ್ ಮತ್ತು ರಶ್ಮಿಕಾ ಪ್ರೀತಿಸುತ್ತಿರುವ ವಿಷಯ ಹೊರಬಂತು. ಈ ಜೋಡಿ ಪ್ರೀತಿಸುತ್ತಿದ್ದಾರೆ ಎಂದಾಗ ಅಭಿಮಾನಿಗಳು ಅದ್ಭುತ ಜೋಡಿ ಎಂದು ಬಣ್ಣಿಸಿದರು.

ನಂತರ ಅವರ ಎಂಗೇಜ್ಮೆಂಟ್ ಕೂಡ ಆಯ್ತು.ವೈಯಕ್ತಿಕ ಕಾರಣಗಳಿಂದಾಗಿ ಇಬ್ಬರು ದೂರವಾದರೂ. ಇಷ್ಟಾದರೂ ರಕ್ಷಿತ್ ಶೆಟ್ಟಿ ಒಂದು ದಿನವೂ ರಶ್ಮಿಕ ಮಂದಣ್ಣ ಅವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿಲ್ಲ. ಅವರಿಗೆ ಒಳ್ಳೆಯದನ್ನು ಬಯಸಿದ್ದಾರೆ.

ಹಾಗಾಗಿ ಈಗ ಶುಭಾಶಯಗಳನ್ನು ರಶ್ಮಿಕ ಹೇಳಬೇಕಾಗಿತ್ತು ಎನ್ನುವುದು ರಕ್ಷಿತ್ ಶೆಟ್ಟಿ ಅಭಿಮಾನಿಗಳ ಆಸೆಯಾಗಿತ್ತು. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು. ಮತ್ತು ಈ ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.