
ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ನಟನೆಯ ಪಠಾಣ್ ಚಿತ್ರದ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಲವಾರು ರಾಜ್ಯಗಳಲ್ಲಿ ಚಿತ್ರ ಬಹಿಷ್ಕರಿಸುವ ಬೆದರಿಕೆ ಬಂದಿರುವ ಬೆನ್ನಲ್ಲೆ ಆಯೋಧ್ಯೆಯ ಪರಮಹಂಸ ಆಚಾರ್ಯ ಅವರು ಒಂದು ಹೆಜ್ಜೆ ಮುಂದೆ ಹೋಗಿದ್ದು, ಶಾರೂಕ್‍ನನ್ನು ಜೀವಂತ ಸುಡುವುದಾಗಿ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡದಿದ್ದರೆ ಜಲ ಸಮಾಧಿಯಾಗುವ ಹೇಳಿಕೆ ನೀಡಿ ಗಮನ ಸೆಳೆದಿದ್ದ ಆಚಾರ್ಯರು ಇದೀಗ ಶಾರೂಕ್ ಅವರು ಜೀವಂತ ಸುಡುವುದಾಗಿ ಬೆದರಿಕೆ ಹಾಕಿ ಗಮನ ಸೆಳೆದಿದ್ದಾರೆ.
ಹಿಂದೂ ಭಾವನೆಗಳಿಗೆ ಧಕ್ಕೆ ತರುವಂತೆ ಚಿತ್ರಿಕರಿಸಿರುವ ಬೇಷರಂ ರಂಗ್ ಹಾಡನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ನಾವು ಪಠಾಣ್ ಚಿತ್ರದ ಪೋಸ್ಟರ್‍ಗಳನ್ನು ಕಿತ್ತು ಹಾಕಿದ್ದೇವೆ. ಒಂದು ವೇಳೆ ಶಾರೂಕ್ ನನ್ನ ಕೈಗೆ ಸಿಕ್ಕರೆ ಜೀವಂತವಾಗಿ ಸುಡುವುದಾಗಿ ಆಚಾರ್ಯರು ಹೇಳಿಕೆ ನೀಡಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಇದಕ್ಕೂ ಮೊದಲು, ಹನುಮಾನ್ ಗರ್ಹಿಯ ಅರ್ಚಕ ಮಹಂತ್ ರಾಜು ದಾಸ್ ಅವರು ಪಠಾಣ್ ಬಿಡುಗಡೆಯಾಗುವ ಚಿತ್ರಮಂದಿರಗಳನ್ನು ಸುಟ್ಟುಹಾಕುವಂತೆ ಜನರಿಗೆ ಮನವಿ ಮಾಡಿದ್ದರು. ಬಾಲಿವುಡ್ ಮತ್ತು ಹಾಲಿವುಡ್ ಯಾವಾಗಲೂ ಸನಾತನ ಧರ್ಮವನ್ನು ಗೇಲಿ ಮಾಡಲು ಪ್ರಯತ್ನಿಸುತ್ತವೆ.
ದೀಪಿಕಾ ಪಡುಕೋಣೆ ಅವರು ಬಿಕಿನಿಯಾಗಿ ಕೇಸರಿ ಬಳಸುತ್ತಿರುವ ರೀತಿ ನಮಗೆ ನೋವುಂಟುಮಾಡುತ್ತದೆ. ಬಿಕಿನಿಯಾಗಿ ಕೇಸರಿ ಧರಿಸುವ ಅವಶ್ಯಕತೆ ಏನಿತ್ತು? ಚಲನಚಿತ್ರವನ್ನು ಬಹಿಷ್ಕರಿಸುವಂತೆ ನಾನು ಜನರಿಗೆ ಮನವಿ ಮಾಡುತ್ತೇನೆ. ಚಿತ್ರ ಪ್ರದರ್ಶನಗೊಳ್ಳುವ ಥಿಯೇಟರ್‍ಗಳನ್ನು ಸುಟ್ಟು ಹಾಕಿ, ಇಲ್ಲದಿದ್ದರೆ ಅವರಿಗೆ ಅರ್ಥವಾಗುವುದಿಲ್ಲ, ಕೆಟ್ಟದ್ದನ್ನು ಎದುರಿಸಲು ನೀವು ದುಷ್ಟರಾಗಬೇಕು, ಎಂದು ರಾಜು ದಾಸ್ ಹೇಳಿದ್ದರು.
Comments are closed.