ಸ್ನೇಹಿತರೆ ಕಳೆದ ಎಂಟು ತಿಂಗಳ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ಈ ಒಂದು ಮದುವೆ ಬಹಳನೇ ಸಂಚಲನ ಕ್ರಿಯೇಟ್ ಮಾಡಿತ್ತು. ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತ ಪರಿಸ್ಥಿತಿ ಎದುರಾಗಿತ್ತು.
ಅದೆಷ್ಟೋ ಜನರ ಬಾಯಲ್ಲಿ ದೇವರು ಮದುವೆ ಎಂಬುದನ್ನು ಸ್ವರ್ಗದಲ್ಲಿ ನಿಶ್ಚಯ ಮಾಡಿಬಿಡುತ್ತಾನೆ ಎಂಬುದು ಇವಾಗ ನಿಜವಾಯಿತು ಎಂಬ ಮಾತುಗಳು ಕೂಡ ಹರಿದಾಡುತ್ತಿತ್ತು. ಅಷ್ಟರಮಟ್ಟಿಗೆ ಸೆನ್ಸೇಷನ್ ಕ್ರಿಯೇಟ್ ಮಾಡಿದಂತಹ ಜೋಡಿ ಎಂದರೆ ಅದು ನಮ್ಮ ಶಂಕರಣ್ಣ ಮತ್ತು ಮೇಘನಾ ಅವರದ್ದು.
ಬರೋಬ್ಬರಿ 45 ವರ್ಷದ ವಯಸ್ಸಾದ ಅಂಕಲ್ ಒಂದಿಗೆ 25 ವರ್ಷದ ಹುಡುಗಿ ಮೇಘನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರ ಜೋಡಿ ನೋಡಿದ ಹಲವರು ಪ್ರೀತಿಗೆ ಕಣ್ಣಿಲ್ಲ ಎಂಬುದು ಮತ್ತೊಮ್ಮೆ ಪ್ರೂವ್ ಆಯಿತು ಎಂಬ ಕಮೆಂಟ್ಗಳನ್ನು ಸಹ ಬಹಳ ಜೋರಾಗಿ ಮಾಡಿದ್ದರು.
ಅದೆಷ್ಟೋ ಟ್ರೋಲ್ ಪೇಜ್ಗಳಿಗೆ ಇವರಿಬ್ಬರ ಮದುವೆ ಆಹಾರವಾಗಿ ಸಿಕ್ತು. ಹೀಗಿರುವಾಗ ನೆನ್ನೆಯಷ್ಟೆ ಹೊರ ಬಿದ್ದಂತಹ ಒಂದು ಸಂಗತಿ ಇಡೀ ಕರ್ನಾಟಕವನ್ನೇ ಒಮ್ಮೆಲೆ ಬೆಚ್ಚಿಬೀಳಿಸಿದೆ.
ಶಂಕ್ರಣ್ಣ ರವರು ತೋಟದ ಮಧ್ಯೆ ಇರುವಂತಹ ಒಂದು ಅರಳಿ ಮರಕ್ಕೆ ನೇಣುಬಿಗಿದುಕೊಂಡು ತನ್ನ ಪ್ರಾಣವನ್ನು ಕಾಣಿಸಿಕೊಂಡಿದ್ದಾರೆ. ಈ ಕುರಿತು ಮಾಧ್ಯಮದ ಮುಂದೆ ಮಾತನಾಡಿದ ಶಂಕ್ರಣ್ಣನ ಪತ್ನಿ ಮೇಘನಾ ನಮ್ಮ ಗಂಡ-ಹೆಂಡತಿಯ ಮಧ್ಯೆ ಯಾವ ರೀತಿಯಾದಂತಹ ಜಗಳವು ಇರಲಿಲ್ಲ.
ನಾವಿಬ್ಬರು ಬಹಳನೇ ಅನ್ಯೋನ್ಯವಾಗಿ ಇದ್ವಿ. ಆದರೆ ಅವರ ಅಮ್ಮ ಬೇಕು ಬೇಕು ಅಂತಲೇ ಕಿರಿಕಿರಿ ತೆಗೆಯುತ್ತಿದ್ದರು.
ನಮ್ಮಿಬ್ಬರದು ಬೇರೆ ಬೇರೆ ಜಾತಿಯಾದ ಕಾರಣ ಅವರು ನಮ್ಮ ಮದುವೆಯನ್ನು ಒಪ್ಪಿರಲಿಲ್ಲ. ನಮ್ಮೆಜಮಾನ್ರು ಮಾಡಿದ ಒತ್ತಾಯದ ಮೇರೆಗೆ ಅವರು ಈ ಮದುವೆಮಾಡಿಸಿದರು. ಅಲ್ಲದೇ ಹೊಸ ವರ್ಷದ ದಿನ ಸುಮ್ಮನೆ ನನ್ನ ಮೇಲೆ ಜಗಳಕ್ಕೆ ಬಂದರು ನನ್ನ ಗಂಡ ಸಮಾಧಾನ ಮಾಡಿ ಇಬ್ಬರನ್ನು ಸುಮ್ಮನಿರಿಸಿದ್ದರು.
ನಮತ್ತೆ ಹೊಲಕ್ಕೆ ಹೋಗುವಾಗ ನಾನು ನಾಯಿನ ವಾಕಿಂಗ್ ಕರೆದುಕೊಂಡು ಹೋಗಬೇಕು ಅಂತ ನಾಯಿಯ ಚೈನ್ ಬಿಟ್ಟರೆ ಅದು ನನ್ನ ಕೈಯಿಂದ ಕಿತ್ಕೊಂಡು ಓಡಿಹೋಯಿತು.
ಆಗ ನಮ್ಮ ಅತ್ತೆ ನಾನು ಸಾಕಿದ ನಾಯಿಯನ್ನು ನನಗೆ ಕಚ್ಚಲಿ ಎಂದು ಚೂ ಬಿಡುತ್ತೀಯ ಎಂಬ ಖ್ಯಾತೆ ಮತ್ತೆ ತೆಗೆದರು. ಹೀಗೆ ನಮ್ಮಿಬ್ಬರ ಜಗಳ ನೋಡಲಾರದೆ ಅವರು ಇತರ ಮಾಡಿಕೊಂಡಿರಬೇಕು.
ಅವರು ಪೊಲೀಸ್ ಕಂಪ್ಲೇಂಟ್ ಕೊಟ್ಟರೆ ಕೊಡಲಿ ನನ್ನದೇನು ತಪ್ಪಿಲ್ಲ ನಾನಿವಾಗ ನಾಲ್ಕು ತಿಂಗಳು ಗರ್ಭಿಣಿಯಾಗಿದ್ದೇನೆ ಎನ್ನುತ್ತಾ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ಶಂಕ್ರಣ್ಣನ ಸಾವಿಗೆ ಯಾರು ಕಾರಣ ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.