ಕಡಲನಗರಿ ಮಂಗಳೂರಿನಲ್ಲಿ ಆರ್ಥಿಕ ಸಂಕಷ್ಟ ಹೊಂದಿರುವ ವಿದ್ಯಾರ್ಥಿನಿಯರನ್ನೇ ಬಳಸಿಕೊಂಡು ನಡೆಸುತ್ತಿದ್ದ ಹೈಟೆಕ್ ವೇ-ಶ್ಯಾವಾಟಿಕೆ ದಂಧೆ ಬೆಳಕಿಗೆ ಬಂದಿದೆ. ಈ ಸಂಬಂಧ ಇದೀಗ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನಗರದ ನಂದಿಗುಡ್ಡ ಬಳಿಯ ಲಿಯಾನಾ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬಳಸಿ ನಡೆಸಲಾಗುತ್ತಿದ್ದ ವೇ-ಶ್ಯಾವಾಟಿಕೆ ಜಾಲದ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮತ್ತಷ್ಟು ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಗ್ರಾಹಕರು ಸಹಿತ ವೇ-ಶ್ಯಾವಾಟಿಕೆಗೆ ಸಹಕಾರ ನೀಡಿದ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ 10 ಮಂದಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಶಮೀನಾ ಮತ್ತು ಸಿದ್ದಿಕ್ ವೇ-ಶ್ಯಾವಾಟಿಕೆ ಜಾಲ ನಡೆಸುತ್ತಿದ್ದಾರೆ ಎಂಬ ಬಗ್ಗೆಯೂ ಅನುಮಾನವಿದೆ. ಸಿದ್ದಿಕ್‌ಗೆ ಬೇರೆ ಮದುವೆಯಾಗಿರುವ ಬಗ್ಗೆ ಮಾಹಿತಿ ಇದೆ ಎಂದು ಕಮಿಷನರ್ ತಿಳಿಸಿದ್ದಾರೆ. ಆರೋಪಿಗಳು ಮತ್ತು ಗ್ರಾಹಕರು ದೂರವಾಣಿ ಕರೆ ಮಾಡುವಾಗ ವ್ಯಾಟ್ಸ್ಯಾಪ್ ಕರೆ ಮಾಡಿ ರೆಕಾರ್ಡ್ ದಾಖಲಾಗದಂತೆ ನೋಡಿಕೊಳ್ಳುತ್ತಿದ್ದರು.
ಗ್ರಾಹಕರು ಡಿಜಿಟಲ್ ಪೇಮೆಂಟ್ ಮೂಲಕ ಹಣ ಪಾವತಿ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಮೊಬೈಲ್ ಮೂಲಕ ನಡೆದ ಎಲ್ಲ ಚಾಟಿಂಗ್‌ಗಳನ್ನು ಅಳಿಸಿ ಹಾಕಿದ್ದರು. ಆದರೂ ಕೆಲವೊಂದು ಮಹತ್ವದ ಮಾಹಿತಿಗಳು ಸಿಕ್ಕಿವೆ ಎಂದು ಕಮಿಷನರ್ ತಿಳಿಸಿದ್ದಾರೆ.
ನೋಟ್ ಬುಕ್‌ನಲ್ಲಿ ದಾಖಲೆ
ಜಾಲ ನಡೆಸುತ್ತಿದ್ದ ಆರೋಪಿಗಳು ಯುವತಿಯರ ಹಾಗೂ ಬರುವ ಗ್ರಾಹಕರ ಬಗ್ಗೆ ನೋಟ್ ಬುಕ್‌ನಲ್ಲಿ ದಾಖಲೆಗಳನ್ನು ಬರೆದಿಟ್ಟಿದ್ದರು. ಅವರ ಹೆಸರು, ದೂರವಾಣಿ ಸಂಖ್ಯೆಗಳು ಪತ್ತೆಯಾಗಿವೆ. ಅಲ್ಲದೆ ಗ್ರಾಹಕರು ಅ-ಪ್ತಾಪ್ತೆಯರನ್ನೇ ಕೇಳಿ ಈ ಫ್ಲ್ಯಾಟ್‌ಗೆ ಬರುತ್ತಿದ್ದರು. ಈ ಫ್ಲ್ಯಾಟ್ ಅಲ್ಲದೆ ಇತರ ಕೆಲವು ಮನೆಗಳನ್ನು ಉಪಯೋಗಿಸಿರುವ ಬಗ್ಗೆ ಮಾಹಿತಿ ಇದೆ ಎಂದು ಕಮಿಷನರ್ ತಿಳಿಸಿದ್ದಾರೆ.