ಶಮಿ ಅವರ ಪತ್ನಿ ಎಷ್ಟು ಮುದ್ದಾಗಿದ್ದಾರೆ ಗೊತ್ತಾ,ಹೆಂಡತಿಯ ಆ ಒಂದು ಕೆಲಸಕ್ಕೆ ಕಣ್ಣೀರು ಹಾಕಿದ್ದ ಶ.ಮಿ

ಪ್ರಸ್ತುತ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸುತ್ತಿದೆ. ಆಡಿರುವ 6 ಪಂದ್ಯಗಳಲ್ಲೂ ಸತತ ಗೆಲುವು ಕಂಡ ಭಾರತಕ್ಕೆ ತಂಡದ ಪ್ರತಿಯೊಬ್ಬ ಆಟಗಾರನ ಬೆಂಬಲವೂ ಸಿಕ್ಕಿದೆ. ಇನ್ನೊಂದೆಡೆ ಟೀಂ ಇಂಡಿಯಾದ ಬೌಲಿಂಗ್ ಅದ್ಭುತವಾಗಿದೆ. ಅದರಲ್ಲೂ ಸದ್ಯ ಟಾಕ್ ಆಫ್ ದಿ ಟೌನ್ ಆಗಿರುವುದು ಮೊಹಮ್ಮದ್ ಶಮಿ

ಹೌದು ಹಿಂದೊಮ್ಮೆ ಇವರ ವಿರುದ್ಧ ಗಂಭೀರ ಆರೋಪ ಮಾಡಿದ್ದ ಪತ್ನಿ ಹಸೀನ್ ಜಹಾನ್ ಅವರನ್ನು ಬಂಧಿಸುವಂತೆ ಸುಪ್ರೀಂ ಕೋರ್ಟ್​ಗೆ ಮೊರೆ ಹೋಗಿದ್ದರು ಕೂಡ. ಭಾರತ ತಂಡದ ಹಾಗೂ ಐಪಿಎಲ್​ನಲ್ಲಿ ಗುಜರಾತ್​ ಟೈಟಾನ್ಸ್​ ತಂಡದ ವೇಗದ ಬೌಲರ್​​ ಮೊಹಮ್ಮದ್ ಶಮಿ ಅವರಿಗೆ ಸಂಕಷ್ಟ ಎದುರಾಗಿತ್ತು. ಶಮಿ ವಿರುದ್ಧ ಮತ್ತೆ ಆರೋಪ ಮಾಡಿರುವ ಪತ್ನಿ.

ಹಸೀನ್​ ಜಹಾನ್,​​ ಸುಪ್ರೀಂ ಕೋರ್ಟ್‌ ಮೊರೆ ಮೆಟ್ಟಿಲು ಹತ್ತಿದ್ದರು .ಕಲ್ಕತ್ತಾ ಹೈಕೋರ್ಟ್‌ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಶಮಿ ಅವರ ವಿರುದ್ಧ ಬಂಧನಕ್ಕೆ ವಾರೆಂಟ್​ ತಡೆಯಾಜ್ಞೆ ಹಿಂಪಡೆಯುವಂತೆ ಹಸೀನ್​ ಜಹಾನ್​​ ಸಲ್ಲಿಸಿದ್ದ ಮನವಿಯನ್ನು ಸ್ಥಳೀಯ ನ್ಯಾಯಾಲಯ ವಜಾಗೊಳಿಸಿತ್ತು. ಈ ಆದೇಶದ ವಿರುದ್ಧ ಕಲ್ಕತ್ತಾದ ಹೈಕೋರ್ಟ್​ ಮೆಟ್ಟಿಲು ಹತ್ತಿದ್ದರು.

ಆದರೆ ಇಲ್ಲೂ ಕೂಡ ಅವರಿಗೆ ನ್ಯಾಯ ಸಿಗಲಿಲ್ಲ. ಹೈಕೋರ್ಟ್‌ ಸಹ ಸ್ಥಳೀಯ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು. ಹಾಗಾಗಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಕೊಡಿಸಿ ಎಂದು ಕೋರಿದ್ದರು. ಹಸೀನ್​ ಜಹಾನ್ ಅವರು ಇದೇ ವರ್ಷ ಮಾರ್ಚ್ 28ರಂದು ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದರು. ಜೊತೆಗೆ ಸೆಷನ್ ನ್ಯಾಯಾಲಯದ ಆದೇಶವನ್ನೂ ರದ್ದುಪಡಿಸುವಂತೆಯೂ ಕೋರಿದ್ದಾರೆ.

ಕೆಟಿಗನ ಬಂಧನದ ವಾರಂಟ್‌ಗೆ ಪಶ್ಚಿಮ ಬಂಗಾಳದ ಸೆಷನ್ಸ್ ಕೋರ್ಟ್ ತಡೆ ನೀಡಿತ್ತು. ಈಗ ಹಸೀನ್​ ಜಹಾನ್​ ಪ್ರಮುಖ ವಕೀಲರನ್ನು ನೇಮಿಸಿ, ಸುಪ್ರೀಂ ಕೋರ್ಟ್​ನತ್ತ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಶಮಿ ವಿರುದ್ಧ ಗಂಭೀರ ಆರೋಪಗಳನ್ನೂ ಮಾಡಿದ್ದರು. ವರದಕ್ಷಿಣೆ ತರುವಂತೆ ಶಮಿ ಬೇಡಿಕೆ ಇಡುತ್ತಿದ್ದರು. ವೇಶ್ಯೆಯರೊಂದಿಗೆ ಅಕ್ರಮ ವಿವಾಹೇತರ ಲೈಂಗಿಕ ಸಂಬಂಧವವನ್ನೂ ಹೊಂದಿದ್ದರು.

ಇದನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದರು. ಇದು ಹೆಚ್ಚಾಗಿ ನಡೆಯುತ್ತಿದ್ದದ್ದು, ಬಿಸಿಸಿಐ ಪ್ರವಾಸಗಳಲ್ಲಿ. ಇದು ಬಿಸಿಸಿಐ ಒದಗಿಸಿದ ಹೋಟೆಲ್ ರೂಮ್​​ಗಳಲ್ಲಿ ಈಗಲೂ ಅಕ್ರಮ ಲೈಂಗಿಕ ಸಂಬಂಧ ನಡೆಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದರು. 16 ಆಗಸ್ಟ್ 2018 ರಂದು ಹಸೀನ್ ಜಹಾನ್, ಮೊಹಮ್ಮದ್ ಶಮಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಹಲ್ಲೆ, ಅತ್ಯಾಚಾರ, ಕೊಲೆ ಯತ್ನ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪದಡಿಯಲ್ಲಿ ಕ್ರಿಕೆಟಿಗ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

ಈ ವೇಳೆ ಮಗಳ ಖರ್ಚಿಗೆ ಹಾಗೂ ತನಗೆ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಹಸೀನ್ ದೂರಿನಲ್ಲಿ ಹೇಳಿದ್ದರು. ಮಾಸಿಕ 10 ಲಕ್ಷ ಕೊಡಿಸುವಂತೆ ಬೇಡಿಕೆ ಇಟ್ಟಿದ್ದರು. ಬಳಿಕ ಈ ಬಗ್ಗೆ ತೀರ್ಪು ನೀಡಿದ್ದ ನ್ಯಾಯಾಲಯವು, ಶಮಿ ಅವರಿಗೆ ಪ್ರತಿ ತಿಂಗಳು 50 ಸಾವಿರ ನೀಡುವಂತೆ ಸೂಚಿಸಿತ್ತು. 2014ರಲ್ಲಿ ವಿವಾಹವಾಗಿದ್ದ ಈ ಜೋಡಿಗೆ ಒಬ್ಬಳು ಮಗಳಿದ್ದಾಳೆ.

ಮದುವೆಯಾಗಿ ಡೈವೋರ್ಸ್ ಪಡೆದಿದ್ದ ಹಸೀನ್ ಜಹಾನ್ ಅವರನ್ನೇ ಶಮಿ ವಿವಾಹವಾಗಿದ್ದರು ಎಂಬುದು ವಿಶೇಷ. ಬಳಿಕ ವರ್ಷಗಳು ಕಳೆದಂತೆ, ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಯಿತು. 2018ರಲ್ಲಿ ಕೌಟುಂಬಿಕ ಹಿಂಸೆ, ಹಲ್ಲೆ, ವರದಕ್ಷಿಣೆ ಕಿರುಕುಳ ಮತ್ತು ಕ್ರಿಕೆಟ್ ಫಿಕ್ಸಿಂಗ್‌ನಂತಹ ಗಂಭೀರ ಆರೋಪಗಳನ್ನು ಹಸೀನ್ ಮಾಡಿದ್ದರು. ಆದರೆ ಇದೀಗ ಅವುಗಳನ್ನೆಲ್ಲ ಎದುರಿಸಿ ಸಮರ್ಥವಾಗಿ ಮಿಂಚುತ್ತಿದ್ದಾರೆ ಶಮಿ ಅವರು.

You might also like

Comments are closed.