ಪುನೀತ್ ಗಾಗಿ ಶಬರಿಮಲೆಗೆ ಭೇಟಿ ನೀಡಿದ ಶಿವಣ್ಣ ಮತ್ತು ರಾಘಣ್ಣ! ದೊಡ್ಮನೆ ಮಕ್ಕಳ ದೈವಭಕ್ತಿ ಹೇಗಿದೆ ನೋಡಿ

Today News / ಕನ್ನಡ ಸುದ್ದಿಗಳು

ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಕುಟುಂಬ ತುಂಬಾ ಫೇಮಸ್, ಬರಿ ನಟನೆಯಲ್ಲಿ ಮಾತ್ರವಲ್ಲ ಬದಲಿಗೆ ಹಲವರಿಗೆ ಹಲವು ವಿಷಯದಲ್ಲಿ ಮಾದರಿಯೂ ಕೂಡ, ರಾಜಕುಮಾರ್ ಮಕ್ಕಳ ಸಮಾಜ ಸೇವೆ ಇರಬಹುದು, ಸರಳ ಗುಣ ಇರಬಹುದು ಅಥವಾ ದೈವ ಭಕ್ತಿ ಇರಬಹುದು ಅವರ ಅಭಿಮಾನಿಗಳೂ ಕೂಡ ಅನುಕರಣೆ ಮಾಡುತ್ತಾರೆ. ಸ್ನೇಹಿತರೆ, ವರನಟ ಡಾ. ರಾಜಕುಮಾರ್ ಅಪಾರ ದೈವ ಭಕ್ತಿಯನ್ನು ಹೊಂದಿದ್ದವರು ಎಂಬುದು ಹಲವರಿಗೆ ಗೊತ್ತು. ಇನ್ನು ಸ್ವತಃ ಶ್ರಿದೇವರ ಭಕ್ತನಾಗಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಕೂಡ. ಶ್ರೀ ಗುರು ರಾಘವೇಂದ್ರ, ಶ್ರೀಕೃಷ್ಣ, ವೆಂಕಟೇಶ್ವರ, ಸ್ವಾಮಿ ಅಯ್ಯಪ್ಪ ಹಾಗೂ ಇನ್ನಿತರೆ ದೇವರುಗಳ ಭಕ್ತನಾಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಆ ಸಿನಿಮಾಗಳಲ್ಲಿ ಅಷ್ಟು ಅದ್ಭುತವಾಗಿ ಅಭಿನಯಿಸಲು ಕಾರಣ ಅವರೇ ಸ್ವತಃ ದೇವ ಭಕ್ತಿ ಹೊಂದಿದ್ದವರಾಗಿದ್ದರು ಎಂಬ ಕಾರಣಕ್ಕೆ! ಇಂದು ಅವರ ಮಕ್ಕಳೂ ಕೂಡ ಅವರ ದಾರಿಯಲ್ಲೇ ನಡೆಯುತ್ತಿರುವುದು ವಿಶೇಷ. ಹೌದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಇಂದು ನಮ್ಮೆಲ್ಲರನ್ನೂ ಬಿಟ್ಟು ದೇವರ ಬಳಿಯೇ ಹೋಗಿ ಕುಳಿತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುವುದು, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವುದು ಮಾಡುತ್ತಿದ್ದರು.

ಇದೀಗ ಅಪ್ಪು ಅವರ ಅನುಪಸ್ಥಿತಿಯಲ್ಲಿ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೋಗಿದ್ದರು. ಡಾಕ್ಟರ್ ರಾಜಕುಮಾರ್ ಬದುಕಿರುವಾಗ ಅಯ್ಯಪ್ಪ ಸ್ವಾಮಿಯ ಮಾಲೆ ಹಾಕಿಸಿ ಇಡುಮುಡಿ ಕಟ್ಟಿಕೊಂಡು ಶಬರಿಮಲೆಗೆ ಭೇಟಿ ನೀಡುತ್ತಿದ್ದರು. ಪುನೀತ್ ಅವರು ಚಿಕ್ಕ ವಯಸ್ಸಿನಲ್ಲಿರುವಾಗ ಕೂಡ ರಾಜ ಕುಮಾರ್ ಜೊತೆ ದೇವಸ್ಥಾನಕ್ಕೆ ತೆರಳಿದ್ದರು. ಈ ಮೊದಲು ಪುನೀತ್ ರಾಜಕುಮಾರ್ ಜೊತೆಗೆ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಕೂಡ ಶಬರಿಮಲೆಯ ಅಯ್ಯಪ್ಪಸ್ವಾಮಿ ದರ್ಶನ ಪಡೆದಿದ್ದರು. ಪುನೀತ್ ಅವರೇ ತಮ್ಮನ್ನು ಕರೆದುಕೊಂಡು ಹೋಗಿದ್ದರು ಎಂದು ಶಿವರಾಜ್ ಕುಮಾರ್ ಮಾಧ್ಯಮವೊಂದರಲ್ಲಿ ಹೇಳುತ್ತಾ ಭಾವುಕರಾಗಿದ್ದರು. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.