
Sewing machine free delivery: ಫ್ರೀ ಸೇವಿಂಗ್ ಮಷೀನ್ ಸ್ಕೀಮ್ 2023 ಯೋಜನೆಯ ಅಡಿ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳೇನು ಅರ್ಜಿಯನ್ನು ಸಲ್ಲಿಸುವುದು ಹೇಗೆ, ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಎಂದು ನಾವು ಇಲ್ಲಿ ತಿಳಿದುಕೊಳ್ಳೋಣ.
Sewing machine free delivery
ಬಡವರ ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಅನೇಕ ಯೋಜನೆಗಳಲ್ಲಿ ಉಚಿತ ಹೊಲಿಗೆ ಯಂತ್ರ ವಿತರಣೆಯು ಕೂಡ ಒಂದು. ದೇಶದ ಬಡ ಮಹಿಳೆಯರು ಸ್ವಾವಲಂಬನೆಯ ಬದುಕು ನಡೆಸುವುದಕ್ಕೆ ನೆರವಾಗುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನ ಆರಂಭಿಸಿದ್ದಾರೆ.
ಕರ್ನಾಟಕವು ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಈ ಯೋಜನೆಯ ಅನುಷ್ಠಾನಗೊಳ್ಳಲಿದೆ, ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಬಡ, ದುರ್ಬಲ ವರ್ಗದ ಮಹಿಳೆಯರಿಗೆ ಯಂತ್ರವನ್ನು ವಿತರಿಸಲಾಗುತ್ತದೆ 50,000ಕ್ಕೂ ಹೆಚ್ಚು ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಲಾಗುತ್ತದೆ.
1.ಯೋಜನೆಯಡಿ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು ಅಂದರೆ ಉಚಿತವಾಗಿ ಸಿಗುವ ಹೋಲಿಗೆ ಯಂತ್ರಕ್ಕೆ ಯಾರೆಲ್ಲಾ ಅರ್ಜಿಯನ್ನ ಸಲ್ಲಿಸಬಹುದು ಎಂದರೆ ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು.
2.ಅಭ್ಯರ್ಥಿಗಳು 20 ರಿಂದ 40 ವರ್ಷದ ನಡುವಿನವರಾಗಿರಬೇಕು.
3.ಆರ್ಥಿಕವಾಗಿ ದುರ್ಬಲ ಮಹಿಳೆಯರು ಮಾತ್ರ ಈ ಯೋಜನೆ ಅಡಿ ಹೊಲಿಗೆ ಯಂತ್ರವನ್ನು ಪಡೆಯಲು ಅರ್ಹರಾಗಿರುತ್ತಾರೆ. ಮಹಿಳೆಯ 4.ಪತಿಯ ಆದಾಯ ವರ್ಷಕ್ಕೆ 12000 ಮೀರಿರಬಾರದು.
5.ವಿದೇವಿಯರು ಹಾಗೂ ಅಂಗವಿಕಲರು ಅರ್ಜಿಯನ್ನು ಸಲ್ಲಿಸಬಹುದು ಮತ್ತು ಅದರ ಪ್ರಯೋಜನಗಳನ್ನು ಪಡೆಯಬಹುದು.
ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲಾತಿಗಳು ಬೇಕೆಂದರೆ ಅಭ್ಯರ್ಥಿ ಆಧಾರ್ ಕಾರ್ಡ್, ಗುರುತಿನ ಚೀಟಿ,ವಯಸ್ಸಿನ ಪ್ರಮಾಣ ಪತ್ರ, ಸಮುದಾಯ ಪ್ರಮಾಣ ಪತ್ರ,ಆದಾಯ ಪ್ರಮಾಣ ಪತ್ರ, ಪಾಸ್ಪೋರ್ಟ್ ಗಾತ್ರದ ಭಾವಚಿತ್ರ,ಮೊಬೈಲ್ ನಂಬರ್ ,ಅಂಗವಿಕಲರಾಗಿದ್ದರೆ ಅಂಗವಿಕಲ ವೈದ್ಯಕೀಯ ಪ್ರಮಾಣ ಪತ್ರ, ವಿಧವೆಯರಾಗಿದ್ದರೆ ವಿದೇವಿಯ ಪ್ರಮಾಣ ಪತ್ರ ಇಷ್ಟು ದಾಖಲಾತಿಯ ಅವಶ್ಯಕತೆಗಳಿವೆ.
ಉಚಿತ ಹೊಲಿಗೆ ಅರ್ಜಿ ಸಲ್ಲಿಕೆ ಹೇಗೆಂದರೆ ಉಚಿತ ಹೋಲಿಗೆ ಯಂತ್ರ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಹೋಂ ಪೇಜ್ ನಲ್ಲಿ ಉಚಿತ ಯಂತ್ರಗಳ ಪೂರೈಕೆಗಾಗಿ ಅರ್ಜಿ ನಮೂನೆ ಲಿಂಕ್ ಮೇಲೆ ಕ್ಲಿಕ್ ಮಾಡಿ. PDF ರೂಪದಲ್ಲಿ ಪರದೆಯ ಮೇಲೆ ಅಪ್ಲಿಕೇಶನ್ ಫಾರ್ಮ್ ಪುಟ ಕಾಣಿಸುತ್ತದೆ ಅದನ್ನು ಡೌನ್ ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ. ಅಗತ್ಯ ವಿವರಣೆಯನ್ನು ನಮೂದಿಸಿ ಎಲ್ಲಾ ಅಗತ್ಯವಾದ ಮಾಹಿತಿಯನ್ನು ಭರ್ತಿ ಮಾಡಿದ ನಂತರ ನಿಮ್ಮ ಎಲ್ಲಾ ದಾಖಲಾತಿಗಳು ಜೆರಾಕ್ಸ್ ಕಾಫಿಯನ್ನ ಲಗ್ಗತ್ತಿಸಿ, ಜೆರಾಕ್ಸ್ ಕಾಫಿಯನ್ನ ಸಂಬಂಧಿಸಿದ ಕಚೇರಿಗೆ ನೀಡಬೇಕು ಅರ್ಜಿಯ ನಮೂನೆಯನ್ನು ಕಚೇರಿಯ ಅಧಿಕಾರಿಗಳು ಪರಿಶೀಲಿಸುತ್ತಾರೆ ಬಳಿಕ ಅವರ ಶಿಫಾರಸ್ಸಿನ ಮೇರೆಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಿಸಲಾಗುತ್ತದೆ.
Comments are closed.