sengha

ನೆನೆಸಿಟ್ಟ ಶೇಂಗಾ ಇವತ್ತೇ ತಿನ್ನಿ ಯಾಕೆಂದರೆ

HEALTH/ಆರೋಗ್ಯ

ಶೇಂಗಾ ಬೀಜ ನಮ್ಮ ದೇಹಕ್ಕೆ ಎಷ್ಟೊಂದು ಒಳ್ಳೆಯದು ಅಲ್ವಾ. ತುಂಬಾನೇ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದರ ಜೊತೆಗೆ ನಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ನಾವು ತುಂಬಾ ಆರೋಗ್ಯವಂತರಾಗಿ ಇರುವುದಕ್ಕೆ ತುಂಬಾನೇ ಸಹಾಯವಾಗುತ್ತದೆ. ಅದನ್ನು ನಾವು ಪ್ರತಿದಿನ ನೆನೆಸಿದ

ಶೇಂಗವನ್ನು ತಿಂದರೆ ನಮ್ಮ ದೇಹಕ್ಕೆ ಯಾವ ಯಾವ ರೀತಿ ಸಹಾಯ ಆಗುತ್ತದೆ. ಎನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಾ ಇದ್ದೇನೆ. ಶೇಂಗಾವನ್ನು ನಾವು ಬೇರೆ ಬೇರೆ ರೀತಿಯಲ್ಲಿ ತಿನ್ನುತ್ತೇವೆ ಅಲ್ವಾ ಹುರಿದು ಬಿಟ್ಟು ತಿನ್ನುತ್ತೇವೆ ಹಾಗೆ ಹಸಿಯಾಗಿ ಕೂಡ ಬಳಸುತ್ತೇವೆ. ಅಥವಾ ಅಡುಗೆಯಲ್ಲಿ ಕೂಡ ನಾವು ಕೆಲವೊಂದು ರೀತಿಯಲ್ಲಿ ಬಳಸುತ್ತೇವೆ.

ಆದರೆ ನಾವು ಹಸಿ ಶೇಂಗಾವನ್ನು ನೆನೆಸಿ ಹಾಗೆ ತಿಂದರೆ ಎಷ್ಟೊಂದು ಒಳ್ಳೆಯದು ಅನ್ನುವುದನ್ನು ಹೇಳುತ್ತಾ ಇದ್ದೇನೆ ಇವಾಗ. ಮೊದಲನೆಯದು ವೆರಿ ಇಂಪಾರ್ಟೆಂಟ್ ಅಂತ ಹೇಳಿದರೆ ನಾರ್ಮಲ್ ಆಗಿ ಚಳಿಗಾಲ ಅಥವಾ ಮಳೆಗಾಲಕ್ಕೆ ತುಂಬಾ ಇಂಪಾರ್ಟೆಂಟ್ ಇದು ಬೇಕೆ ಬೇಕಾಗುತ್ತದೆ ಯಾಕೆ ಅಂತ ಹೇಳಿದರೆ ನಮ್ಮ ದೇಹವನ್ನು ಬೆಚ್ಚುಗೆ ಇಡುವುದಕ್ಕೆ ಇದು ತುಂಬಾನೇ ಸಹಾಯವಾಗುತ್ತದೆ.

ಇನ್ನು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಕೂಡ ನೆನೆಸಿದ ಶೇಂಗಾ ಏನಿದೆ ತುಂಬಾನೇ ಸಹಾಯವಾಗುತ್ತದೆ. ನಾವು ನಿಯಮಿತವಾಗಿದ್ದನು ತಿನ್ನಬಹುದು. ಇನ್ನು ಕೆಲವರಿಗೆ ತುಂಬಾನೇ ಕೀಲು ನೋವು, ಮೈಕೈ ನೋವು ಬೆನ್ನು ನೋವು ಎಲ್ಲಾ ಬರುತ್ತ ಇರುತ್ತದೆ ಅಲ್ಲವಾ. ಅಂತಹವರಿಗೆ ಕೂಡ ಬೆಸ್ಟ್ ಮನೆಮದ್ದು ಅಂತ ಹೇಳಬಹುದು ಈ ಶೇಂಗಾ. ಇದರಲ್ಲಿ ಇರುವಂತಹ ಕ್ಯಾಲ್ಸಿಯಂ ಪ್ರೊಟೀನ್ ಎಲ್ಲವೂ ಕೂಡ ಮೂಳೆಗಳ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.

Groundnut - BharatAgri

ಹಾಗೆ ನಮ್ಮ ಕಣ್ಣಿನ ಆರೋಗ್ಯಕ್ಕೆ ಕೂಡ ತುಂಬಾನೇ ಒಳ್ಳೆಯದು ಕಣ್ಣಿನ ದೃಷ್ಟಿ ಸಮಸ್ಯೆ ಯಾರಿಗಾದರೂ ಇದ್ದರೆ ಅಂತಹವರು ಪ್ರತಿದಿನ ಶೇಂಗಾವನ್ನು ನೆನೆಸಿ ತಿನ್ನುವುದರಿಂದ ಅವರ ದೃಷ್ಟಿಯ ಸಮಸ್ಯೆ ದೂರವಾಗುತ್ತದೆ. ಹಾಗೆ ಹೃದಯದ ಆರೋಗ್ಯಕ್ಕೆ ಕೂಡ ಒಂದು ಬೆಸ್ಟ್ ಕಾಳು ಅಂತಾನೆ ಹೇಳಬಹುದು.ಶೇಂಗಾ ಮತ್ತು ಬೆಲ್ಲದ ಸೇವನೆಯಿಂದ ದೇಹದಲ್ಲಿ ರಕ್ತದ ಉತ್ಪಾದನೆ ಹೆಚ್ಚಾಗುತ್ತದೆ. ಇದು ಹೆಣ್ಣು ಮಕ್ಕಳಿಗೆ ಹೆಚ್ಚು ಒಳ್ಳೆಯದು.

ಮುಟ್ಟಿನ ದಿನಗಳಲ್ಲಿ ಉಂಟಾಗುವ ನೋವನ್ನು ಕಡಿಮೆ ಮಾಡಲು ಕೂಡ ಈ ಶೇಂಗಾ ಮತ್ತು ಬೆಲ್ಲ ಸಹಾಯಕವಾಗಿದೆ.ಅಲ್ಲದೆ ಪ್ರತೀ ತಿಂಗಳು ನಷ್ಟವಾಗುವ ರಕ್ತವನ್ನು ಮತ್ತೆ ಪಡೆಯಬಹುದಾಗಿದೆ. ಹೀಗಾಗಿ ಶೇಂಗಾ ಮತ್ತು ಬೆಲ್ಲವನ್ನು ಪ್ರತಿನಿತ್ಯ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಇದು ಪುರುಷರಲ್ಲೂ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.

ರುಚಿಯಲ್ಲಿಯೂ ಉತ್ತಮವಾಗಿರುವ ಈ ಸ್ನ್ಯಾಕ್ಸ್‌ ಮಕ್ಕಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇನ್ನು ವಯಸ್ಸಾದಂತೆ ಕೂಡ ಮೂಳೆಗಳ ಸವೆತವಾಗುತ್ತದೆ. ಇದನ್ನು ತಡೆಯಲು ಶೇಂಗಾ ಮತ್ತು ಬೆಲ್ಲ ಸಹಾಯಕವಾಗಿದೆ.ಹೃದ್ರೋಗಗಳನ್ನು ತಡೆಯಲು ಮತ್ತು ನಿಮ್ಮ ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...