ಚಾಮರಾಜನಗರದಲ್ಲಿ 16 ವರ್ಷದ ಹುಡುಗಿಗೆ ತಾಳಿ ಕಟ್ಟಿ ಮೂರು ದಿನ ಆಕೆಯ ಜೊತೆ ಆ ಕೆಲಸ ಮಾಡಿದವನ ಸ್ಥಿತಿ ಏನಾಗಿದೆ ನೋಡಿ..

Today News / ಕನ್ನಡ ಸುದ್ದಿಗಳು

ವಯಸ್ಸು ಇನ್ನೂ ಸಹ ಹದಿನೆಂಟು ದಾಟೋದಿಲ್ಲ ಆಗಲೇ ವಯಸ್ಸಿನಲ್ಲಿ ಆಗುವ ಆಕರ್ಷಣೆಗಳನ್ನು ಪ್ರೀತಿ ಎಂದುಕೊಂಡು ಮಾಡಬಾರದ ಕೆಲಸ ಮಾಡುತ್ತಾರೆ.. ಹೋಗಬಾರದ ದಾರಿಯಲ್ಲಿ ಹೋಗುತ್ತಾರೆ.. ಕೊನೆಗೆ ಹೆತ್ತು ಹೊತ್ತು ಸಾಕಿದ ತಂದೆ ತಾಯಿಗೆ ನೋವು ಕೊಟ್ಟು ತಮ್ಮ ಜೀವನವನ್ನೇ ಹಾಳು‌ ಮಾಡಿಕೊಂಡು ಬಿಡುತ್ತಾರೆ.. ಅಂತಹುದೇ ಒಂದು ಘಟನೆ ಮೈಸೂರಿನ ಪಕ್ಕದ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿದ್ದು ಹದಿನಾರು ವರ್ಷದ ಹುಡುಗಿಯ ಜೊತೆ ಮದುವೆಯಾದ.. ಮೂರು ದಿನ ಸಂಸಾರವನ್ನೂ ಸಹ ಮಾಡಿದ.. ಆದರೆ ಈಗ ಆತನ ಸ್ಥಿತಿ ಏನಾಗಿದೆ ನೋಡಿ..

ಹೌದು ಆತನ ಹೆಸರು ಮಹೇಂದ್ರ ಆತನ ವಯಸ್ಸು ಕೇವಲ ಇಪ್ಪತ್ತೊಂದು.. ಮೈಸೂರಿನ ಪಕ್ಕದ ಜಿಲ್ಲೆಯಾದ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೆಳಚವಾಡಿ ಗ್ರಾಮದ ನಿವಾಸಿ.. ಮಹೇಂದ್ರ ಅದೇ ಗ್ರಾಮದ ಹದಿನಾರು ವರ್ಷದ ಹುಡುಗಿಯೊಬ್ಬಳನ್ನು ಬಣ್ಣದ ಮಾತುಗಳನ್ನಾಡಿ ತನ್ನ ಬಲೆಗೆ ಬೀಳಿಸಿಕೊಂಡಿದ್ದ.. ಇತ್ತ ಇನ್ನೂ ಸಹ ತಿಳುವಳಿಕೆ ಇಲ್ಲದೇ ಅಪ್ಪ ಅಮ್ಮನ ಬಗ್ಗೆಯೂ ಸ್ವಲ್ಪವೂ ಆಲೋಚಿಸದೇ ಆತನ ಮಾತಿಗೆ ಮರುಳಾಗಿ ಆ ಹೆಣ್ಣು ಮಗಳು ಸಹ ವಯಸ್ಸಿನ ಆಕರ್ಷಣೆಯನ್ನೇ ಪ್ರೀತಿ ಎಂದುಕೊಂಡು ಆತನ ಜೊತೆ ಸುತ್ತಾಡಿದ್ದಾಳೆ.. ಆದರೆ ಅವರಿಬ್ಬರು ಇಷ್ಟಕ್ಕೆ ಸುಮ್ಮನಾಗಲಿಲ್ಲ.. ಮುಂದೊಂದು ದಿನ ಮನೆಯವರನ್ನು ಒಪ್ಪಿಸಿ ಮದುವೆಯಾಗುವ ಆಲೋಚನೆ ಮಾಡಲಿಲ್ಲ.. ಬದಲಿಗೆ ಹೆತ್ತವರ ಗೌರವವನ್ನೇ ಹಾಳು ಮಾಡುವ ನಿರ್ಧಾರ ಮಾಡಿ ಬಿಟ್ಟರು..

ಹೌದು ಮಹೇಂದ್ರ ತನ್ನ ಬಣ್ಣದ ಮಾತುಗಳನ್ನಾಡಿ ನೀನೆ ಜೀವ ನೀನೆ ಜೀವನ ನೀನೆ ಸರ್ವಸ್ವ ಎಂದ.. ಆತನ ಮಾತುಗಳಿಗೆ ಆಕೆಯೂ ಸಹ ಮರುಳಾಗಿ ಬಿಟ್ಟಳು.. ಸರಿಯಾಗಿ ನೋಡಿದರೆ ಎಸ್ ಎಸ್ ಎಲ್ ಸಿ ಓದುವ ವಯಸ್ಸು‌. ಆದರೆ ಆತನ ಮಾತಿಗೆಲ್ಲಾ ಹೂ ಎನ್ನುವಂತಾಗಿ ಹೋದಳು.. ಕೊನೆಗೆ ಕಳೆದ ನಾಲ್ಕು ದಿನದ ಹಿಂದೆ ಮಹೇಂದ್ರ ಆ ಹುಡುಗಿಯನ್ನು ಪುಸಲಾಯಿಸಿ ತನ್ನ ಜೊತೆ ತಮಿಳು ನಾಡಿಗೆ ಕರೆದುಕೊಂಡು ಹೋದ.. ಚೆಲುವಿನ ಚಿತ್ತಾರ ಸಿನಿಮಾ ರೀತಿಯಲ್ಲಿ ಅಲ್ಲಿಯೇ ಒಂದು ಮನೆಯನ್ನೂ ಸಹ ಮಾಡಿ ಆ ಮನೆಯಲ್ಲಿಯೇ ತಾಳಿಯನ್ನೂ ಸಹ ಕಟ್ಟಿದ..

ತಾಳಿ ಕಟ್ಟಿ ಮೂರು ದಿನ ಆಕೆಯ ಜೊತೆ ಎಲ್ಲಾ ರೀತಿಯ ಕೆಲಸವನ್ನೂ ಮಾಡಿಕೊಂಡ.. ಆದರೆ ಈಗ ಆತನ ಸ್ಥಿತಿ ಬೇರೆಯೇ ಆಗಿದೆ.. ಹೌದು ಇತ್ತ ಮಗಳು ಕಾಣೆಯಾಗುತ್ತಿದ್ದ ಹಾಗೆ ಆ ಹೆಣ್ಣು ಮಗಳ ತಂದೆ ಬೇಗೂರಿನ ಪೊಲೀಸ್ ಠಾಣೆಗೆ ದೂರು ನೀಡಿದ್ದರು.. ಇದನ್ನು ಗಂಭೀರವಾಗಿ ಪರಿಗಣಿಸಿದ ಬೇಗೂರಿನ ಪಿ ಎಸ್ ಐ ರಾಜೇಂದ್ರ ಅವರು ಹಾಗೂ ಅವರ ತಂಡ ತಕ್ಷಣ ಈ ಪ್ರಕರಣದ ಬೆನ್ನತ್ತಿದರು..ಹೌದು ಬೇಗೂರಿನಿಂದ ಹೊರಟ ಪಿಎಸ್ ಐ ರಾಜೇಂದ್ರ ನೇತೃತ್ವದ ತಂಡ ತಮಿಳು ನಾಡು ತಲುಪಿದೆ.. ಅಲ್ಲಿ ಮಹೇಂದ್ರನನ್ನು ಹುಡುಕಿ ಆತ ಮಾಡಿದ ಮನೆಯನ್ನು ಪತ್ತೆ ಹಚ್ಚಿದ್ದಾರೆ.. ಪೊಲೀಸರನ್ನು ನೋಡಿ ಮಹೇಂದ್ರ ಬೆಚ್ಚಿಬಿದ್ದಿದ್ದು ಸಧ್ಯ ಪೊಲೀಸರ ಅತಿಥಿಯಾಗಿದ್ದಾನೆ.. ಹೌದು ತಮಿಳುನಾಡಿನಲ್ಲಿ ಮಹೇಂದ್ರನನ್ನು ವಶಕ್ಕೆ ಪಡೆದ ಬೇಗೂರಿನ ಪೊಲೀಸರು ಮರಳಿ ಊರಿಗೆ ಕರೆತಂದು ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ..

ಇತ್ತ ಆ ಹೆಣ್ಣು ಮಗಳನ್ನು ರಕ್ಷಣೆ ಮಾಡಿ ಬಾಲಮಂದಿರಕ್ಕೆ ಸೇರಿಸಿದ್ದಾರೆ.. ಇತ್ತ ಮಗಳು ಮನೆಯ ಗೌರವ ಹಾಳು ಮಾಡಿದಳೆಂದು ಆ ಹೆಣ್ಣು ಮಗಳ ಹೆತ್ತವರು ಕೊರಗಿದರೆ.. ಅತ್ತ ಮಗ ಪೊಲೀಸರ ಪಾಲಾದ ಎಂದು ಮಹೇಂದ್ರನ ಹೆತ್ತವರು ಸಹ ಕೊರಗುವಂತಾಗಿದೆ‌.. ಒಟ್ಟಿನಲ್ಲಿ ಅಪ್ಪ ಅಮ್ಮನ ಬಗ್ಗೆ ಸ್ವಲ್ಪವೂ ಆಲೋಚಿಸದೇ ತಿಳುವಳಿಕೆ ಬರುವ ಮುನ್ನವೇ ವಯಸ್ಸಿನ ಆಸೆಗಳಿಗೆ ಬಿದ್ದು ಮಕ್ಕಳು ಮಾಡುವ ಕೆಲಸಕ್ಕೆ ಹೆತ್ತವರು ಸಂಕಟ ಪಡುವಂತಾಗಿದೆ.. ಪ್ರೀತಿ ಮಾಡೋದು ತಪ್ಪಲ್ಲ.. ಆದರೆ ಜೀವನದಲ್ಲಿ ತಿಳುವಳಿಕೆ ಬಂದ ನಂತರ ಜೀವನದಲ್ಲಿ‌ ಒಂದೊಳ್ಳೆ ರೀತಿ ಸೆಟಲ್ ಆದ ನಂತರ ನಾಲ್ಕು ಜನ ಗೌರವ ನೀಡುವಂತೆ ಬದುಕುವ ದಾರಿ ಕಂಡುಕೊಂಡ ನಂತರ ಪ್ರೀತಿಸಿ ಮನೆಯವರ ಒಪ್ಪಿಸಿ ಮದುವೆಯಾಗೋದು ನಿಜವಾದ ಪ್ರೀತಿಯ ಲಕ್ಷಣ.. ಆದರೆ ಅದನ್ನು ಬಿಟ್ಟು ಈ ರೀತಿ ಮಾಡಿಕೊಂಡು ಜೀವನ ಹಾಳು ಮಾಡಿಕೊಳ್ಳದಿರಲಿ..

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.