ಹೆಣ್ಣು ಮಮತೆಯ ಆಗರ ಕರುಣೆಯ ಕಣಜ ಎಂಬುದಾಗಿ ನಮ್ಮ ಹಿರಿಯರು ಹಾಗೂ ಪುರಾತನ ಗ್ರಂಥಗಳಲ್ಲಿ (ancient scripture) ಕೂಡ ಹೆಣ್ಣಿನ ಕುರಿತಂತೆ ಪೂಜ್ಯ ಭಾವನೆಯಿಂದ ಉಲ್ಲೇಖ (Mentioned) ಮಾಡಲಾಗಿದೆ. ಇಷ್ಟೆಲ್ಲಾ ಹೆಣ್ಣಿನ ಕುರಿತಂತೆ ವರ್ಣನೆ ಮಾಡಿದರು ಕೂಡ ಆಕೆಯ ಮನಸ್ಸಿನಲ್ಲಿ ಏನಿದೆ ಅಥವಾ ಆಕೆಯ ಯೋಚನೆಗಳನ್ನು ಕಂಡುಹಿಡಿಯುವ ಚಾತುರ್ಯತೆ ಇದುವರೆಗೂ ಕೂಡ ಯಾವ ಮೇಧಾವಿ ಹಾಗೂ ಋಷಿಮುನಿಗಳಿಂದಲೂ ಕೂಡ ಸಾಧ್ಯವಾಗಲಿಲ್ಲ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇ ಬೇಕಾಗಿದೆ. ಆದರೆ ಈಗ ವಿಜ್ಞಾನ ಮುಂದುವರೆದಿದ್ದು ಎಲ್ಲವುದನ್ನು ಕೂಡ ತಿಳಿಯುವಂತಹ ಪ್ರಯತ್ನ ವಿಜ್ಞಾನಿಗಳಿಂದ (Scientists) ನಡೆಯುತ್ತಲೇ ಇದೆ.
ಹಲವಾರು ರಹಸ್ಯಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಳ್ಳುವ ಕಲೆ ಹೆಣ್ಣಿಗೆ ತಿಳಿದಿದೆ. ಹೀಗಾಗಿ ಹೆಣ್ಣಿನ ಮನಸ್ಸಿನ ಆಳವನ್ನು ತಲುಪುವುದು ಯಾರಿಂದಲೂ ಕೂಡ ಸಾಧ್ಯವಿಲ್ಲ ಎಂಬುದಾಗಿ ಹಿರಿಯರು ಹೇಳಿಕೊಂಡು ಬರುತ್ತಲೇ ಇದ್ದಾರೆ. ಹೇಗಿದ್ದರೂ ಕೂಡ ಮಹಿಳೆ ಯಾವೆಲ್ಲ ವಿಚಾರವನ್ನು ಬಿಟ್ಟು ಕೊಡುವುದಿಲ್ಲ ಗುಟ್ಟಾಗಿ ತನ್ನಲ್ಲೇ ಅಡಗಿಸಿಟ್ಟುಕೊಳ್ಳುತ್ತಾಳೆ ಎಂಬುದನ್ನು ವಿಜ್ಞಾನಿಗಳು ಕೂಡ ತಮ್ಮ ಸಂಶೋಧನೆಯಿಂದ(Research) ಕೊಂಚಮಟ್ಟಿಗೆ ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಹೇಳಬಹುದಾಗಿದೆ.

ಪ್ರತಿಯೊಬ್ಬರೂ ಕೂಡ ರಹಸ್ಯವನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಾರೆ ಆದರೆ ಈ ವಿಚಾರದಲ್ಲಿ ಹೆಣ್ಣು ಮಕ್ಕಳು ಒಂದು ಕೈ ಮೇಲೆ ಹೋಗುತ್ತಾರೆ. ವಿಶೇಷವಾಗಿ ಮದುವೆಯ ಮುಂಚೆ ಯಾವುದಾದರೂ ಪ್ರೇಮ ಸಂಬಂಧವನ್ನು ಹೊಂದಿದ್ದರೆ ಅದರ ಕುರಿತಂತೆ ಹೇಳುವುದಕ್ಕೆ ಹೋಗುವುದಿಲ್ಲ. ಇದನ್ನು ಹೇಳಿದರೆ ಮದುವೆ ನಂತರ ಗಂಡನೊಂದಿಗೆ ಸಂಬಂಧ(Relationship) ಹಾಳಾಗಬಹುದು ಎನ್ನುವ ಚಿಂತೆ ಅವರಲ್ಲಿ ಇರುತ್ತದೆ. ಇನ್ನು ಗಂಡನೊಂದಿಗೆ ಸೇರುವ ಸಂದರ್ಭದಲ್ಲಿ ನಿರೀಕ್ಷಿತ ಪರಾಕಾಷ್ಠೆಯ ಸುಖ ಸಿಗದಿದ್ದರೂ ಕೂಡ ಸಿಕ್ಕಿದೆ ಎಂಬುದಾಗಿ ಒಪ್ಪಿಕೊಳ್ಳುತ್ತಾರೆ.
ಹಳೆಯ ನೆನಪುಗಳನ್ನು ಹಾಗೂ ಇನ್ನಿತರ ವಿಚಾರಗಳನ್ನು ಕೂಡ ಎಲ್ಲರ ಬಳಿಯೂ ಹಂಚಿಕೊಳ್ಳಲು ಹೋಗುವುದಿಲ್ಲ ತನ್ನ ಮನಸ್ಸಿನಲ್ಲಿಯೇ ಒಳ್ಳೆಯ ವಿಚಾರವನ್ನು ನೆನಪಿಸಿಕೊಂಡು ಖುಷಿಪಡುತ್ತಾರೆ ಕೆಟ್ಟ ವಿಚಾರಗಳನ್ನು ನೆನಪಿಸಿಕೊಂಡು ತಾವೇ ದುಃಖ ಪಡುತ್ತಾರೆ. ಯಾವುದಾದರೂ ಆರೋಗ್ಯ ಸಮಸ್ಯೆಯನ್ನು(Illness) ಹೊಂದಿದ್ದರೆ ಕೂಡ ಯಾರೊಂದಿಗೆ ಹಂಚಿಕೊಳ್ಳಲು ಹೋಗುವುದಿಲ್ಲ. ಇನ್ನು ಹೆಣ್ಣು ಮಕ್ಕಳು ಮುಖ್ಯವಾಗಿ ತಾವು ಸುಂದರವಾಗಿರುವ ಮೇಕಪ್ ರಹಸ್ಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಹೋಗುವುದಿಲ್ಲ ಮತ್ತು ತಮ್ಮ ಸಂಗಾತಿಯಿಂದ ಹಣವನ್ನು ಉಳಿತಾಯ ಮಾಡಿಟ್ಟುಕೊಂಡರೆ ಕೂಡ ಅದನ್ನು ಕೂಡ ಹೇಳಲು ಹೋಗುವುದಿಲ್ಲ.