ಮುಂಬೈ : ಮುಂಬೈನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಮುಂಬೈನ ಬಾಂದ್ರಾ ಬೀಚ್ ನಲ್ಲಿ ಪತಿ ಎದುರೇ ಪತ್ನಿಯು ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ದಂಪತಿಗಳು ಬಂಡೆಯ ಮೇಲೆ ಹೋಗಿದ್ದರು, ಆದರೆ ಪ್ರಬಲ ಅಲೆ ಅಪ್ಪಳಿಸಿ ಜ್ಯೋತಿ ಸೋನಾರ್ ಎಂಬ ಮಹಿಳೆ ಕೊಚ್ಚಿಹೋದ ಹೃದಯ ವಿದ್ರಾವಕ ಘಟನೆ ನಡೆದಿದೆ. ಆಕೆಯ ಪತಿ ಮುಖೇಶ್ ಮತ್ತು ಅವರ ಮೂವರು ಮಕ್ಕಳು ದುರದೃಷ್ಟಕರ ಘಟನೆ ಅಸಹಾಯಕರಾಗಿ ನೋಡುತ್ತಾ ನಿಂತಿದ್ದರು.
ರಬಾಲೆಯ ಗೌತಮ್ ನಗರದಲ್ಲಿ ವಾಸಿಸುವ ಮುಖೇಶ್ ಹಾಗೂ ಜ್ಯೋತಿ ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ ಬೀಚ್ ಗೆ ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿರುವುದಾಗಿ ಮುಕೇಶ್ ಹೇಳಿದ್ದಾನೆ.”ನಾನು ಅವಳನ್ನು ಉಳಿಸಲು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ನಾಲ್ಕನೇ ಅಲೆಯು ನಮ್ಮನ್ನು ಹಿಂದಿನಿಂದ ಅಪ್ಪಳಿಸಿದಾಗ, ನಾನು ನನ್ನ ಸಮತೋಲನವನ್ನು ಕಳೆದುಕೊಂಡೆ ಮತ್ತು ನಾವಿಬ್ಬರೂ ಜಾರಿದೆವು. ನಾನು ನನ್ನ ಹೆಂಡತಿಯ ಸೀರೆಯನ್ನು ಹಿಡಿದುಕೊಂಡಾಗ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ನನ್ನ ಕಾಲನ್ನು ಹಿಡಿದರು, ಆದರೆ ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ.
ಸದ್ಯ ಈ ವಿಡಿಯೋ ವೈರಲ್ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ವೀಡಿಯೊದಲ್ಲಿ ದಂಪತಿಗಳು ನೀರಿನ ಚಿಮ್ಮುವಿಕೆಯ ನಡುವೆ ನಿಂತಿದ್ದರೆ. ಇದ್ದಕ್ಕಿದ್ದಂತೆ, ಬೃಹತ್ ಅಲೆಯು ಅವರನ್ನು ಆವರಿಸಿ, ಮಹಿಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ದುರದೃಷ್ಟವಶಾತ್, ‘ಮಮ್ಮಿ’ ಎಂಬ ಮಕ್ಕಳ ಹತಾಶೆಯ ಕೂಗು ಕೇಳುತ್ತಿದ್ದಂತೆ ಕ್ಯಾಮೆರಾ ಆಫ್ ಆಗಿದೆ.
#alert : Be careful ❗️ guys don’t get tempt with social media and give up on lives #bandra #bandstand #mumbairains pic.twitter.com/bFe4bTdXeS
— Suresh Kumar Kurapaty (@kurafatygyan) July 14, 2023