Scooty

ದೇವಸ್ಥಾನದ ಮುಂದೆ ಸ್ಕೂಟಿ ಸ್ಟಾರ್ಟ್ ಮಾಡಿದ ಯುವತಿ ಸೀದಾ ಬಂದು ಬಿದ್ದಿದ್ದು ಭಗವಂತನ ಪಾದಕ್ಕೇ!

Entertainment/ಮನರಂಜನೆ

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಇನ್ನೂ ಕೆಲವೊಮ್ಮೆ ಕೆಲವೊಂದು ವೀಡಿಯೋಗಳು ನಮ್ಮ ಅಸಮಾಧಾನಕ್ಕೆ ಸಹಾ ಕಾರಣವಾಗುತ್ತವೆ. ಹಾಗೆ ಹೇಳುತ್ತಾ ಹೋದರೆ, ಕೆಲವು ವೀಡಿಯೋಗಳು ನಮ್ಮನ್ನು ನಗಿಸಿದರೆ, ಇನ್ನೂ ಕೆಲವು ವಿಡಿಯೋಗಳು ನಮ್ಮನ್ನು ಅಳುವಂತೆ ಮಾಡಿ ಬಿಡುತ್ತವೆ. ಇನ್ನು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಈ ವೀಡಿಯೋದಲ್ಲಿನ ದೃಶ್ಯವನ್ನು ನೋಡಿದ ನಂತರ ನಿಮಗೆ ನಿಮ್ಮ ನಗುವನ್ನು ತಡೆಯುವುದು ಸಾಧ್ಯವಾಗುವುದಿಲ್ಲ.

ಈ ವೀಡಿಯೋದಲ್ಲಿ ನಾವು ದೇವಸ್ಥಾನದ ಗೇಟ್ ಮುಂದೆ ಮಹಿಳೆಯೊಬ್ಬರು ಸ್ಕೂಟಿ ಸ್ಟಾರ್ಟ್ ಮಾಡುವುದನ್ನು ನಾವು ನೋಡಬಹುದಾಗಿದೆ. ಆದರೆ ಆಕೆ ಗಾಡಿ ಸ್ಟಾರ್ಟ್ ಮಾಡಿದ ನಂತರ ನಡೆದ ಘಟನೆ ಅನಿರೀಕ್ಷಿತ ಮತ್ತು ಆ ಘಾ ತಕಾರಿ ಸಹಾ ಹೌದು‌. ಏಕೆಂದರೆ ಸ್ಕೂಟಿ ಸ್ಟಾರ್ಟ್ ಮಾಡಿದ ಸ್ವಲ್ಪ ಸಮಯದ ನಂತರ ನಡೆದ ಘಟನೆ ನೋಡಿದಾಗ ನಗುವಿನ ಜೊತೆಗೆ ಒಂದು ಕ್ಷಣ ಅಯ್ಯೋ ಪಾಪ ಎಂತಲೂ ಅನಿಸುವುದುಂಟು.

ವೀಡಿಯೋದಲ್ಲಿ ದೇವಾಲಯದ ಮುಂದೆ ಮಹಿಳೆಯೊಬ್ಬರು ಸ್ಕೂಟಿ ಸ್ಟಾರ್ಟ್ ಮಾಡುತ್ತಿರುವುದು ಕಾಣುತ್ತದೆ. ಆದರೆ ಸ್ಕೂಟಿ ಸ್ಟಾರ್ಟ್ ಮಾಡಿದ ನಂತರ ಆಕೆ ಅದರ ಮೇಲಿನ ಬ್ಯಾಲೆನ್ಸ್ ಕಳೆದುಕೊಳ್ಳುತ್ತಾರೆ. ಸ್ಕೂಟಿ ಅವರ ಕಂಟ್ರೋಲ್ ತಪ್ಪಿ ಹೋಗುತ್ತದೆ. ರಭಸವಾಗಿ ಮುನ್ನುಗಿದ ಸ್ಕೂಟಿ ಮಹಿಳೆಯ ಸಮೇತ ದೇವಾಲಯದ ಒಳಕ್ಕೆ ನುಗ್ಗುತ್ತದೆ. ಒಳಗೆ ಬಂದ ಸ್ಕೂಟಿ ನೆಲಕ್ಕೆ ಉರುಳುತ್ತದೆ ಮತ್ತು ಮಹಿಳೆ ಸಹಾ ಸ್ಕೂಟಿ ಇಂದ ಸ್ವಲ್ಪ ಮುಂದೆ ಮುಗ್ಗರಿಸಿ ಬೀಳುತ್ತಾರೆ.

ಇಂತಹುದೊಂದು ಸನ್ನಿವೇಶವನ್ನು ನೋಡಿದ ನೆಟ್ಠಿಗರಿಗೆ ನಗು ತಡೆಯಲಾಗುತ್ತಿಲ್ಲ. ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳ ವೇದಿಕೆಯಾದ ಟ್ವಿಟರ್‌ನಲ್ಲಿ ಶೇರ್ ಮಾಡಲಾಗಿದೆ. ಈ ವೀಡಿಯೊವನ್ನು ಟ್ವಿಟರ್ ನಲ್ಲಿ JaikyYadav16 ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೋವನ್ನು ಈಗಾಗಲೇ ಬಹಳಷ್ಟು ಜನರು ವೀಕ್ಷಣೆ ಮಾಡಿದ್ದಾರೆ.

ಈವರೆಗೆ ಈ ವೀಡಿಯೋ ಸುಮಾರು 30 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇನ್ನು ವೀಡಿಯೋ ನೋಡಿದ ನಂತರ ನೆಟ್ಟಿಗರಿಂದ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆಗಳು ಬಂದಿವೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, ದೇವರು ಸರ್ವಶಕ್ತ, ಅವನು ನಿಮ್ಮನ್ನು ತನ್ನ ನ್ಯಾಯಾಲಯಕ್ಕೆ ಕರೆದಾಗ ನೀವು ಹೋಗಬೇಕಾಗುತ್ತದೆ ಎಂದು ಬರೆದು ತಮಾಷೆ ಮಾಡಿದ್ದಾರೆ.

ಆ ವಿಡಿಯೊ ಕೆಳಗಿದೆ ನೋಡಿ…

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...