
ಭಾರತದಲ್ಲಿ ತಾಳಿಗೆ ವಿಶೇಷವಾದ ಸ್ಥಾನ ಮಾನವನ್ನು ನೀಡಲಾಗಿದೆ. ಪ್ರತಿಯೊಬ್ಬರೂ ತಾಳಿಯನ್ನು ಗೌರವಿಸುತ್ತಾರೆ. ತಾಳಿಯನ್ನು ಕಟ್ಟುವಾಗ ಅದೆಷ್ಟೋ ಜನ ತಾಳಿಯನ್ನು ಕಟ್ಟುವಾಗ ಕೈ ನಡುಗುವುದೂ ಉಂಟು. ತಾಳಿಯ ಮೇಲೆ ಭಾರತೀಯರಿಗೆ ಅಷ್ಟೇ ಗೌರವವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ತಾಳಿ ಎಂದರೆ ಎಲ್ಲರಿಗೂ ಆಟವಾಗಿದೆ. ಯಾರೂ ತಾಳಿಗೆ ಕೊಡಬೇಕಾದ ಗೌರವವನ್ನು ಕೊಡುವುದೇ ಇಲ್ಲ. ಅದೊಂದು ಚಿನ್ನ ಎಂದೇ ಪರಿಗಣಿಸುತ್ತಾರೆ.
ಇಲ್ನೋಡಿ ಬಾಲಕ ಹಾಗೂ ಬಾಲಕಿಯನ್ನು ಶಾಲೆಗೆ ಹೋಗಿ ಓದಿ ಎಂದು ಪೋಷಕರು ಆಸೆ ಪಟ್ಟು ಕಳಿಸುತ್ತಾರೆ. ಆದರೆ, ಮಕ್ಕಳು ಓದುವುದೊಂದನ್ನು ಬಿಟ್ಟು ಬೇರೆ ಎಲ್ಲವನ್ನೂ ಮಾಡುತ್ತಾರೆ. ಕೆಟ್ಟದ್ದನ್ನೇ ರೂಢಿಸಿಕೊಳ್ಳುವ ಮಕ್ಕಳು ಈಗಂತೂ ಪ್ರೀತಿ-ಪ್ರೇಮ ಎಂದು ಒದ್ದಾಡುತ್ತಾರೆ. ಚಿಕ್ಕ ವಯಸ್ಸಿಗೆ ಲವ್ ಅಂತ ಹುಡುಗ ಹುಡುಗಿಯರು ಅಲೆದಾಡುತ್ತಾರೆ. ಪೋಷಕರಿಗೂ ಇದರ ಬಗ್ಗೆ ದೊಡ್ಡ ತಲೆ ನೋವಾಗಿ ಹೋಗಿದೆ.
ಶಾಲೆಗೆ ಹೋಗುವ ಬಾಲಕಿ ಬಾಲಕಿ ಇಬ್ಬರು ಬಸ್ ಸ್ಟ್ಯಾಂಡ್ ನಲ್ಲಿ ಕೂತು ತಾಳಿ ಕಟ್ಟಿದ್ದಾರೆ. ಬಾಲಕ ತಾಳಿ ಕಟ್ಟಿರುವ ಹಾಗೂ ತಾಳಿ ಕಟ್ಟಿಸಿಕೊಂಡು ನಾಚಿಕೊಂಡ ವೀಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಇವರನ್ನು ನೋಡಿದ ನೆಟ್ಟಿಗರು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ಆದರೆ ಈ ವೀಡಿಯೋದಲ್ಲಿ ನಡೆದಿರುವ ಘಟನೆ ಸಂಭವಿಸಿದ್ದು ಕಳೆದ ವರ್ಷ. ಚೆನ್ನೈನಲ್ಲಿ ಈ ಘಟನೆ ನಡೆದಿದ್ದು, ಕಾನೂನಿಗೆ ವಿರುದ್ಧವಾಗಿ ಅಪ್ರಾಪ್ತರು ಎಂದು ಪೊಲೀಸರು ದೂರು ಕೂಡ ದಾಖಲಿಸಿಕೊಂಡಿದ್ದರು.
View this post on Instagram
Comments are closed.