ವಿಕ್ರಾಂತ್ ರೋಣ

ಬಂಗಾಲದ ಹುಡುಗಿ ಕನ್ನಡದ ವಿಕ್ರಾಂತ್ ರೋಣ ಸಿನೆಮಾದ ಹಾಡಿಗೆ ಅದೆಷ್ಟು ವೈನಾಗಿ ಡ್ಯಾನ್ಸ್ ಮಾಡಿದಾಳೆ ನೋಡಿ…

CINEMA/ಸಿನಿಮಾ

ಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಮೊದಲ ಹಾಡು ಇದೀಗ ಬಿಡುಗಡೆಯಾಗಿದೆ, ಈ ಹಾಡು ದಾಖಲೆ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವುದನ್ನು ನಾವು ನೋಡಬಹುದಾಗಿದೆ. ಅದರಲ್ಲಿಯೂ ರಾ ರಾ ರಕ್ಕಮ್ಮ ಎಂಬ ಹಾಡಿಗೆ ಇದುವರೆಗೂ ಸಾಕಷ್ಟು ಸೆಲೆಬ್ರಿಟಿಗಳಿಗೆ ಹೆಜ್ಜೆ ಹಾಕಿರುವುದು ವಿಶೇಷ. ಕಳೆದ ವಾರವಷ್ಟೇ ಈ ಹಾಡಿಗೆ ಆಶಿಕಾ ರಂಗನಾಥ್, ಅಕುಲ್ ಬಾಲಾಜಿ ಸೇರಿದಂತೆ ಕಿರುತೆರೆಯ ಹಾಗೂ ಬೆಳ್ಳಿತೆರೆಯ ಸಾಕಷ್ಟು ಕಲಾವಿದರು ಸ್ಟೆಪ್ ಹಾಕಿದ್ದರು‌. ಇದನ್ನು ಸ್ವತಃ ಸುದೀಪ್ ಅವರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದರು.

ಆದರೆ ಇದೀಗ ಇವೆಲ್ಲದಕ್ಕಿಂತಲೂ ಕೂಡ ಭಿನ್ನವಾಗಿ ಪಶ್ಚಿಮ ಬಂಗಾಲದ ಹುಡುಗಿ ಸಯಾಂತನಿ ಘೋಷ್ (Sayantani Ghosh) ಅಥವಾ ಲುನಾ (Luna) ಸ್ಟೆಪ್ ಹಾಕಿರುವುದನ್ನು ನೋಡಬಹುದಾಗಿದೆ. ಇವರ ಸ್ಟೆಪ್ ನೋಡಿದರೆ ನಿಜಕ್ಕೂ ಕೂಡ ಪಡ್ಡೆ ಹುಡುಗರ ನಿದ್ದೆ ಕೆಡುವುದಂತೂ ಖಚಿತ. ಹೌದು, ರಾ ರಾ ರಕ್ಕಮ್ಮಾ ಸಾಂಗ್ ಗೆ ಬಂಗಾಲಿ ಹುಡುಗಿ ಹಾಕಿರುವಂತಹ ಸ್ಟೆಪ್ ನೋಡಿದರೆ ಇದುವರೆಗೂ ಎಲ್ಲ ಸೆಲೆಬ್ರಿಟಿಗಳ ಸ್ಟೆಪ್ ಕೂಡ ಇದರ ಮುಂದೆ ಕಮ್ಮಿನೇ ಅಂತ ಅನಿಸುತ್ತದೆ.

vikrant-rona-1-3 | Vikrant Rona 2022 On The Set - Bollywood Hungama

ಸಯಾಂತನಿ ಘೋಷ್ ರಾ ರಾ ರಕ್ಕಮ್ಮ ಸಾಂಗ್ ಗೆ ಹೆಜ್ಜೆಯನ್ನು ಹಾಕಿದ್ದು ಈ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ, ಅದನ್ನು ನೋಡಿದಂತಹ ನೆಟ್ಟಿಗರು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೆ ಇಲ್ಲಿಯವರೆಗೂ ಮಾಡಿದಂತಹ ಎಲ್ಲಾ ಸೆಲೆಬ್ರಿಟಿಗಳ ಡ್ಯಾನ್ಸ್ ಮುಂದೆ ಇದು ಮೊದಲ ಸ್ಥಾನವನ್ನು ಪಡೆಯುತ್ತದೆ ಅಂತ ನೋಡುಗರು ಹೇಳಿಕೊಂಡಿದ್ದಾರೆ. ಲುನಾ ರಬ್ಬರ್ ನಂತೆ ಬಳುಕಿರುವುದು ನೋಡುಗರನ್ನು ಸೆಳೆದಿದೆ.

ಇನ್ನು ಸಿನೆಮಾ ಬಗ್ಗೆ ಹೇಳಬೇಕೆಂದರೆ, ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಅಬ್ಬರಿಸಲು ರೆಡಿಯಾಗುತ್ತಿದೆ. ಸಿನಿಮಾ ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ವಿಶೇಷತೆಯಿಂದ ಸುದ್ದಿಯಾಗುತ್ತಿದೆ. ಈಗ ಐಟಂ ಸಾಂಗ್ ಅನ್ನು ರಿಲೀಸ್ ಮಾಡಿ ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡುತ್ತಿದೆ. ಕಳೆದ ವಾರ ಯೂಟ್ಯೂಬ್ನಲ್ಲಿ ರಿಲೀಸ್ ಆದ ಈ ಹಾಡು ದಾಖಲೆ ಮಟ್ಟದಲ್ಲಿ ವೀಕ್ಷಣೆ ಪಡೆಯುತ್ತಿದೆ.

Vikrant Rona Fan Photos | Vikrant Rona Photos, Images, Pictures # 75187 - FilmiBeat

ಈ ಹಾಡಿಗೆ ಅನುಪ್ ಬಂಡಾರಿ ಅವರು ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್ ಅವರು ಮ್ಯೂಸಿಕ್ ನೀಡಿದ್ದಾರೆ ಮತ್ತು ನಕಾಶ್ ಅಝೀಝ್ ಹಾಗೂ ಸುನಿಧಿ ಚೌಹಾಣ್ ಅವರು ಧ್ವನಿಯನ್ನು ನೀಡಿದ್ದಾರೆ ಮತ್ತು ಜಾನಿ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡು ಅದ್ಭುತವಾಗಿ ಮೂಡಿ ಬರುವುದಕ್ಕೆ ಇವರೆಲ್ಲರೂ ಕಾರಣವಾಗಿದ್ದಾರೆ. ಎಲ್ಲಕ್ಕಿಂತ ವಿಶೇಷ ಎಂದರೆ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ.

ರಾರಾ ರಕ್ಕಮ್ಮ ಎನ್ನುವ ಈ ಹಾಡಿಗೆ ಸಿನಿಮಾದಲ್ಲಿ ಸುದೀಪ್ ಮತ್ತು ಜಾಕ್ಲಿನ್ ಅವರು ಸಕ್ಕತ್ತಾಗಿ ಹೆಜ್ಜೆ ಹಾಕಿದ್ದಾರೆ. ಇತ್ತ ಸಿನಿರಸಿಕರು – ಅಭಿಮಾನಿಗಳು ಕೂಡ ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕುತ್ತಿರುವುದು ಹಾಗೂ ಸಿನೆಮಾಕ್ಕೆ ಪರೋಕ್ಷವಾಗಿ ಪ್ರಚಾರ ಕೊಡುತ್ತಿರುವುದು ಸುದೀಪ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಕನ್ನಡ ಸಿನೆಮಾಗಳು ಹೀಗೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಖುಷಿಯ ವಿಚಾರ.

ಬಂಗಾಲಿ ಹುಡುಗಿಯ ಡ್ಯಾನ್ಸ್ ವಿಡಿಯೊ ಕೆಳಗಿದೆ ನೋಡಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.