ರಕ್ಷಣೆ

8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗುವಿನ ರಕ್ಷಣೆ ಮಾಡಿದ ಯುವಕನ ಧೈರ್ಯಕ್ಕೆ ಭಾರೀ ಮೆಚ್ಚುಗೆ: ವಿಡಿಯೋ ವೈರಲ್​

Today News / ಕನ್ನಡ ಸುದ್ದಿಗಳು
ಎಂಟನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗುವನ್ನು ಯುವಕನೊಬ್ಬ ರಕ್ಷಣೆ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಯುವಕನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಕಸಜಿಸ್ತಾನದಲ್ಲಿ ಈ ಘಟನೆ ನಡೆದಿದ್ದು, ರಕ್ಷಣೆ ಮಾಡುವ ಸಲುವಾಗಿ ಈ ಯುವಕ 100 ಅಡಿಯಷ್ಟು ಎತ್ತರಕ್ಕೆ ಹತ್ತಿ ಕಿಟಕಿಯಲ್ಲಿ ನೇತಾಡುತ್ತಿದ್ದ ಮಗವನ್ನು ಕೆಳಗಿಳಿಸಿ ಪ್ರಾಣ ರಕ್ಷಿಸಿದ್ದಾನೆ.ಈ ಮಗು 8ನೇ ಮಹಡಿಯಲ್ಲಿ ನೇತಾಡುತ್ತಿದ್ದದ್ದನ್ನು ಹೇಗೋ ಗಮನಿಸಿದ ಯುವಕ ಸ್ವಲ್ಪವೂ ತಡಮಾಡದೇ ಚಾಣಾಕ್ಷತನದಿಂದ  ಮಗುವನ್ನು ಕೆಳಗಿಳಿಸಿದ್ದಾನೆ. ಸ್ವಲ್ಪ ಎಚ್ಚರ ತಪ್ಪಿದರೂ ಮಗುವಿನ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ದೇವರಂತೆ ಬಂದ ಈ ಯುವಕ ಮಗುವನ್ನು ರಕ್ಷಿಸಿದ್ದಾನೆ.ಬಹುಮಹಡಿ ಕಟ್ಟಡದ ಎಂಟನೇ ಮಹಡಿಯಲ್ಲಿ ನೇತಾಡುತ್ತಾ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪುಟ್ಟ ಮಗುವನ್ನು ಯುವಕನೊಬ್ಬ ರಕ್ಷಣೆ ‌ಮಾಡಿದ್ದಾನೆ. ಯುವಕನ ಈ ಕಾರ್ಯಕ್ಕೆ ಮೆಚ್ಚಿ ಕಜಕಿಸ್ತಾನ ಸಚಿವಾಲಯ ಸನ್ಮಾನಿಸಿ ಬಹುಮಾನವನ್ನು ನೀಡಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.