ರಸ್ತೆಯಲ್ಲಿ ಬಿದ್ದಿದ್ದ ಹುಡುಗನನ್ನು ಉಳಿಸಲು ಯಾವುದೇ ಹಿಂಜರಿಕೆ ಇಲ್ಲದೇ ಈಕೆ ಮಾಡಿದ ಕೆಲಸ ನೋಡಿ..

ರಸ್ತೆಯಲ್ಲಿ ಸಾಮಾನ್ಯವಾಗಿ ಇಂತಹ ಘಟನೆಗಳು ಏನಾದರು ನಡೆದರೆ ನಮಗ್ಯಾಕೆ ಬೇಕು ಅಂತ ಸುಮ್ಮನೆ ಹೋಗೋ ಜನರೇ ಹೆಚ್ಚು.. ಮತ್ತೊಂದು ವರ್ಗ ಸಹಾಯಕ್ಕೆ ಬಾರದಿದ್ದರೂ ಮೊಬೈಲ್ ನಲ್ಲಿ ನಡೆಯೋದನ್ನೆಲ್ಲಾ ವೀಡಿಯೋವನಂತೂ ತಪ್ಪದೇ ಮಾಡಿಕೊಳ್ಳುತ್ತದೆ.. ಇನ್ನೊಂದು ವರ್ಗ ಸಹಾಯ ಮಾಡಲು ಮನಸ್ಸಿದ್ದರೂ ಇದರಿಂದ ನಮಗೇನಾದರೂ ತೊಂದರೆ ಆದೀತು ಎಂದು ಸುಮ್ಮನಾಗುತ್ತಾರೆ.. ಆದರೆ ಇವರೆಲ್ಲರ ನಡುವೆಯೂ ಮಾನವೀಯತೆಯ ಜೊತೆಗೆ ದಿಟ್ಟತನ ದಿಂದ ಸಹಾಯ ಮಾಡುವವರು ಸಹ ಇದ್ದಾರೆ.. ಅದೇ ರೀತಿ ಇಲ್ಲೊಬ್ಬ ಮಹಾತಾಯಿ ರಸ್ತೆಯಲ್ಲಿ ಬಿದ್ದಿದ್ದ ಹುಡುಗನ ಜೀವ ಉಳಿಸಲು ಮಾಡಿರುವ ಕೆಲಸ ನಿಜಕ್ಕೂ ಮೈಜುಮ್ಮೆನ್ನುವಂತಿದೆ.. ಈ ಮಹಾತಾಯಿಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು. ಅಷ್ಟಕ್ಕೂ ಈಕೆ ಯಾರು ನಡೆದ ಘಟನೆ ಏನು..

ಈ ಮಹಿಳೆ ಹೆಸರು ವನಜಾ.. ಮೂವತ್ತೊಂಭತ್ತು ವರ್ಷದ ಈ ಮಹಿಳೆ ಇದೀಗ ಈ ಹುಡುಗನಿಗೆ ಮರುಜನ್ಮ ನೀಡಿದ ಮಹಾತಾಯಿ.. ಹೌದು ವನಜಾ ಅವರು ವೃತ್ತಿಯಲ್ಲಿ ನರ್ಸ್ ಆಗಿದ್ದು ಮನ್ನಾರ್ ಗುಡಿಯಲ್ಲಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.. ಅವರಿಗೆ ವಾರದ ರಜೆ ಇದ್ದ ಕಾರಣ ತನ್ನ ಕುಟುಂಬದೊಂದಿಗೆ ವನಜಾ ಅವರು ಮಧುಕೂರಿನಿಂದ ಮನ್ನಾರ್ ಗುಡಿಗೆ ಕಾರಿನಲ್ಲಿ ತೆರಳುತ್ತಿದ್ದರು.. ಬಹುಶಃ ದೇವರೇ ಆಕೆಯನ್ನು ಆ ರಸ್ತೆಯಲ್ಲಿ ಬರುವಂತೆ ಮಾಡಿದನೋ ಏನೋ.. ಈಕೆಯ ಮಾನವೀಯತೆ.. ಹಾಗೂ ದಿಟ್ಟತನ ಧೈರ್ಯದಿಂದ ತೆಗೆದುಕೊಂಡ ನಿರ್ಧಾರದಿಂದ ಇಂದು ಬದುಕಿ ಬಾಳಬೇಕಾದ ಒಬ್ಬ ಹುಡುಗ ಉಳಿದುಕೊಳ್ಳುವಂತಾಯಿತು…

ಹೌದು ಕಾರ್ ನಲ್ಲಿ ಕುಟುಂಬದ ಸಮೇತ ವನಜಾ ಅವರು ಹೋಗುತ್ತಿದ್ದರು.. ಈ ಸಮಯದಲ್ಲಿ‌ ಮಧುಕ್ಕೂರು ರಸ್ತೆಯ ಲೆಕ್ಕಂಪೇಟೆಯ ಬಳಿ ಹುಡುಗನೊಬ್ಬ ಪ್ರಜ್ಞೆ ತಪ್ಪಿ ಬಿದ್ದಿದ್ದನು.. ಹೌದು ಈ ಹುಡುಗನ ಹೆಸರು ವಸಂತ್.. ವಯಸ್ಸಿನ್ನು ಕೇವಲ ಇಪ್ಪತ್ತೆರೆಡು.. ಕರುವಾಕುರಿಚಿಯಲ್ಲಿ ಪಾಲಿಟೆಕ್ನಿಕ್ ಓದುತ್ತಿದ್ದನು.. ಈತ ಬೈಕ್ ನಲ್ಲಿ ಬರುವಾಗ ಮೇಕೆಗಳ ಗುಂಪಿಗೆ ಬೈಕ್ ತಾಗಿದ್ದು ಈತ ಕೆಳಗೆ ಬಿದ್ದಿದ್ದಾನೆ.. ತಕ್ಷಣ ವಸಂತ್ ಗೆ ಪ್ರಜ್ಞೆ ತಪ್ಪಿ ಹೋಗಿದೆ.. ಸುತ್ತಲೂ ಜನ ಸೇರಿದ್ದರು.. ಆದರೆ ಏನು ಮಾಡಬೇಕೆಂದು ಯಾರಿಗೂ ತಿಳಿದಿಲ್ಲ.. ಕೆಲವರು ಆಂಬ್ಯುಲೆನ್ಸ್ ಗೆ ಫೋನ್ ಮಾಡಿದ್ದರು.. ಇನ್ನು ಅದೇ ದಾರಿಯಲ್ಲಿ ಬಂದ ವನಜಾ ಅವರು ಜನಗಳ ಗುಂಪನ್ನು ನೋಡಿ ಕಾರ್ ನಿಲ್ಲಿಸಿ ಕಾರ್ ನಿಂದ ಇಳಿದು ಬಂದಿದ್ದಾರೆ.. ಬಂದವರು ಈ ಹುಡುಗನ ಸ್ಥಿತಿ ನೋಡಿ ತಕ್ಷಣ ಸುತ್ತುವರೆದಿದ್ದ ಜನರನ್ನು ಹಿಂದೆ ಸರಿಸಿ ಆ ಒಂದು ಕೆಲಸ ಮಾಡಲು ನಿರ್ಧರಿಸಿ ಬಿಟ್ಟರು..

ಹೌದು ವನಜಾ ಅವರು ತಕ್ಷಣ ವಸಂತ್ ನನ್ನು ಸರಿಯಾಗಿ ಮಲಗಿಸಿ ಇದ್ದ ಜಾಗದಲ್ಲಿಯೇ ಸಿಪಿಆರ್ ಮಾಡಿದ್ದಾರೆ.. ಹೌದು ಧೃತಿ ಗೆಡದ ವನಜಾ ಅವರು ಆ ಹುಡುಗನನ್ನು ಉಳಿಸಲೇ ಬೇಕೆಂದು ತಮ್ಮ ಕೈಮೀರಿ ಪ್ರಯತ್ನ ಪಟ್ಟಿದ್ದಾರೆ.. ಆಕೆಯ ಪರಿಶ್ರಮಕ್ಕೆ ದೇವರು ಫಲ ನೀಡಿದಂತೆ ಮೂವತ್ತು ಸೆಕೆಂಡ್ ಗಳಲ್ಲಿ ವಸಂತ್ ಎದ್ದು ಕೂತ.. ಹೌದು ಸಿಪಿಆರ್ ಚಿಕಿತ್ಸೆ ನೀಡಲು ಆಮ್ಲಜನಕದ ವ್ಯವಸ್ಥೆ ಇರಬೇಕಾಗುತ್ತದೆ.. ಆದರೆ ಆ ಸಮಯದಲ್ಲಿ ತಕ್ಷಣ ಬುದ್ಧಿ ಉಪಯೋಗಿಸಿ ಹುಡುಗನನ್ನು ಉಳಿಸಲು ಸಿಪಿಆರ್ ಚಿಕಿತ್ಸೆ ನೀಡಿ ಆ ಹುಡುಗನನ್ನು ಉಳಿಸಿದ್ದಾರೆ.. ವಸಂತ್ ಎಚ್ಚರಗೊಳ್ಳುತ್ತಿದ್ದಂತೆ ವನಜಾ ಅವರಿಗೆ ಕೈಮುಗಿದು ಧನ್ಯವಾದ ತಿಳಿಸಿ ಕಾಲಿಗೆ ಬೀಳಲು ಮುಂದಾಗಿದ್ದಾನೆ..

ತಕ್ಷಣ ಅದನ್ನು ತಡೆದ ವನಜಾ ಅವರು ಮಕ್ಕಳು ಹೀಗೆಲ್ಲಾ ಮಾಡಬಾರದು ಎಂದು ನಂತರ ಆಂಬ್ಯುಲೆನ್ಸ್ ನಲ್ಲಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ..ನಿಜಕ್ಕೂ ಆ ಮಹಾತಾಯಿ ಸಮಯಕ್ಕೆ ಸರಿಯಾಗಿ ಮಾಡಿದ ಕೆಲಸಕ್ಕೆ ಇಂದು ವಸಂತ್ ಉಳಿದುಕೊಂಡ.. ಆತನ ತಂದೆ ತಾಯಿ ಜೀವನ ಪೂರ್ತಿ ನೋವು ಅನುಭವಿಸುವುದು ತಪ್ಪಿತೆನ್ನಬಹುದು‌‌‌.. ಯಾವುದೇ ಹಿಂಜರಿಕೆ ಇಲ್ಲದೇ ವನಜಾ ಅವರು ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಇಂದು ಒಂದು ಜೀವವೇ ಉಳಿಯಿತು.. ಅವರ ಮಾನವೀಯತೆಗೆ ಹ್ಯಾಟ್ಸ್ ಆಫ್.. ಅವರು ಹಾಗೂ ಅವರ ಕುಟುಂಬ ನೂರ್ಕಾಲ ಸುಖವಾಗಿರಲಿ..

You might also like

Comments are closed.