Saturn

ಧನು ರಾಶಿಯವರಿಗೆ 2 ವರ್ಷ ಶನಿಬಲ ಇರೋದ್ರಿಂದ ಹಣಕಾಸಿನ ಸ್ಥಿತಿ ಹೇಗಿರತ್ತೆ ಗೊತ್ತಾ..

Heap/ರಾಶಿ ಭವಿಷ್ಯ

2 years of Saturn for Sagittarius: ಶನಿ ಗ್ರಹವನ್ನು ಎಲ್ಲಾ ಗ್ರಹಗಳಿಗೂ ಹೋಲಿಸಿದರೆ ಅತ್ಯಂತ ಬಲಶಾಲಿಯಾಗಿರುವಂತಹ ಗ್ರಹ ಎಂದೇ ಹೇಳಲಾಗುತ್ತದೆ ಧನಸ್ಸು ರಾಶಿ ಶನಿ ಬಲ (Shani bala) 2023-25 ರಲ್ಲೀ ಹೇಗಿದೆ ಈ ಸಮಯದಲ್ಲಿ ಅವರ ಜೀವನ ಯಾವ ರೀತಿ ನಡೆಯಲಿದೆ ಎಂಬುದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಶನಿ (Shani)ಎಂಬ ಹೆಸರನ್ನು ಕೇಳಿದರೆ ಸಾಕು ದೇವಾನುದೇವತೆಗಳು ಕೂಡ ಹೆದರಿಕೊಳ್ಳುತ್ತಾರೆ ಇದಕ್ಕೆ ಕಾರಣ ಸಾಕ್ಷಾತ್ ಪರಮೇಶ್ವರನನ್ನು ಬಿಡದೆ ಕಾಡಿದವನು ಶನೇಶ್ಚರ ಅವರವರ ಕರ್ಮಕ್ಕೆ ಅನುಸಾರ ವಾಗಿ ತಕ್ಕಂತೆ ದೇವಾನುದೇವತೆಗಳೇ ಆಗಲಿ ಗುರು ಗಳೇ ಆಗಲಿ ಯಾರನ್ನು ಬಿಡದೆ ಕಾಡುವವನು ಶನಿ ಆಗಿರುವುದರಿಂದ ಎಲ್ಲಾ ದೇವಾನುದೇವತೆಗಳು ಹಾಗೂ ಭೂಮಿ ಮೇಲೆ ಇರುವಂತ ಪ್ರತಿಯೊಬ್ಬ ಮನುಷ್ಯನು ಕೂಡ ಶನಿ ಎಂಬ ಹೆಸರನ್ನು ಕೇಳಿದರೆ ಸಾಕು ಭಯಭೀತಗೊಳ್ಳುತ್ತಾರೆ

ಹಾಗಾದರೆ ಯಾರು ಈ ಶನೇಶ್ವರ ಎಂಬ ಮಾಹಿತಿಯನ್ನು ನೋಡುವುದಾದರೆ ಸೂರ್ಯದೇವ ಹಾಗೂ ಅವನ ಪತ್ನಿ ಛಾಯಾದೇವಿಗೆ ಜನಿಸಿದಂತಹ ಮಗನೇ ಶನಿ ಇವನು ಸಂಸಾರದಿಂದ ಬೇಸತ್ತು ಸಂಸಾರದ ಮೇಲೆ ಇರುವಂತಹ ವ್ಯಾಮೋಹ ವನ್ನು ತೊರೆದು ಶಿವನನ್ನು ಕುರಿತು ತಪಸ್ಸನ್ನು ಮಾಡುತ್ತಾನೆ.

ಶನಿ ಮಾಡಿದಂತಹ ತಪಸ್ಸಿಗೆ ಶಿವನು ಮೆಚ್ಚಿ ಶನಿಗೆ ನಿನಗೆ ಏನು ವರ ಬೇಕು ಎಂದು ಕೇಳಿಕೋ ಎಂದು ಕೇಳುತ್ತಾಳೆ ಆಗ ಶನೇಶ್ವರ ನಾನು ಯಾವುದೇ ವರ ಬೇಕು ಎಂದು ನಿನ್ನನ್ನು ಪ್ರಾರ್ಥನೆ ಮಾಡಲಿಲ್ಲ ಬದಲಾಗಿ ನಾನು ನಿನ್ನನ್ನು ನೋಡಲೇಬೇಕು ಎಂಬ ಉದ್ದೇಶದಿಂದಾಗಿ ನಾನು ಈ ಒಂದು ತಪಸ್ಸನ್ನು ಮಾಡಿದ್ದೇನೆ ಎಂದು ಶನಿ ಪರಮಾತ್ಮ ಹೇಳುತ್ತಾನೆ.

ಆಗ ಶಿವನು ಶನೇಶ್ವರನ ತಪಸ್ಸನ್ನು ಮೆಚ್ಚಿ ನೀನೇನು ನನ್ನನ್ನು ಕೇಳದೆ ಇದ್ದರೂ ನಾನೇ ನಿನಗೆ ಒಂದು ಅದ್ಭುತವಾದಂತಹ ವರವನ್ನು ಕೊಡುತ್ತೇನೆ ಎಂದು ಶಿವ ಹೇಳುತ್ತಾನೆ ಗ್ರಹಗಳಲ್ಲಿ ಒಂದಾಗಿ ಜನರು ಮಾಡುವ ತಪ್ಪುಗಳಿಗೆ ಶಿಕ್ಷೆಯನ್ನು ಕೊಟ್ಟು ಅವರ ಒಳ್ಳೆಯ ಕೆಲಸ ಕಾರ್ಯಗಳಿಗೆ ಒಳ್ಳೆಯ ಫಲವನ್ನು ಕೊಟ್ಟು ಆ ಮನುಷ್ಯ ಶಿಸ್ತನ್ನು ಕಲಿಯುವಂತೆ ನೀನು ಇನ್ನು ಕರ್ಮಫಲನಾಗಿ ನಿನ್ನ ಕೆಲಸವನ್ನು ಪ್ರಾರಂಭಿಸು ಎಂದು ಶಿವ ಶನಿಗೆ ವರವನ್ನು ಕೊಡುತ್ತಾನೆ.

ಆದರೆ ಈ ವರವನ್ನು ಪಡೆದಂತಹ ಶನೇಶ್ವರ ಏನು ಮಾಡುತ್ತಾನೆ ಎಂದರೆ ಈ ಒಂದು ವರ ಕೇವಲ ಮನುಷ್ಯನಿಗೆ ಮಾತ್ರ ಅನ್ವಯವಾಗುತ್ತದೆಯೋ ಅಥವಾ ಇಲ್ಲವೋ ಎಂದು ಶಿವನನ್ನು ಕೇಳುತ್ತಾನೆ ಆಗ ಶಿವ ಹೇಳುತ್ತಾನೆ ನಿನ್ನ ಕೆಲಸ ಕೇವಲ ಮನುಷ್ಯರ ಮೇಲೆ ಅಲ್ಲ ದೇವಾನುದೇವತೆಗಳ ಮೇಲು ನಿನ್ನ ಕೆಲಸ ನಡೆಯಬೇಕು ಎಂದು ಹೇಳುತ್ತಾರೆ.

ಅದೇ ರೀತಿ 2023 ರಲ್ಲಿ ಧನಸ್ಸು ರಾಶಿಯವರಿಗೆ ಶನಿಯ ಪ್ರಭಾವ ಏನು ಎಂದು ನೋಡುವುದಾದರೆ ಧನಸ್ಸು ರಾಶಿಯವರು ಇಲ್ಲಿಯ ತನಕ ಅನುಭವಿಸಿದಂತಹ ಎಲ್ಲಾ ಕಷ್ಟಗಳು ಇನ್ನು ಮುಂದಿನ ದಿನಗಳಲ್ಲಿ ನಿಮಗೆ ಮುಕ್ತಾಯವಾಗಲಿದೆ ಮುಂದಿನ ದಿನದಲ್ಲಿ ಶನಿಯ ಪ್ರಭಾವ ದಿಂದಾಗಿ ಉನ್ನತ ಸ್ಥಾನಕ್ಕೆ ಹೋಗುತ್ತೀರಿ ಹಣಕಾಸು ಹರಿದು ಬರುತ್ತೆ ಸುಖ ನೆಮ್ಮದಿ ಸಿಗುತ್ತೆ ಸಾಲು ಸಾಲು ಸುಖದ ಸರಮಾಲೆ ನಿಮ್ಮ ಜೀವನದಲ್ಲೀ ಮೂಡಲಿದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...