ಸಾಮಾಜಿಕ ಜಾಲತಾಣದಲ್ಲಿಯು ಆಕ್ಟಿವ್ ಆಗಿರುವ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಅಭಿಮಾನಿಗಳೊಂದಿಗೆ ಗುಡ್ ನ್ಯೂಸ್ ಒಂದನ್ನು ಹಂಚಿಕೊಂಡಿದ್ದಾರೆ. ವಿಶೇಷವಾದ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿರುವ ಧ್ರುವ ಸರ್ಜಾ ತಮ್ಮ ಸಂತೋಷದ ವಿಷಯಕ್ಕೆ ಕಾರಣವನ್ನು ತಿಳಿಸಿದ್ದಾರೆ. ಹೌದು, ಸ್ಯಾಂಡಲ್ ಗುಡ್ ನೈಟ್ ತಮ್ಮ ಮನೆಗೆ ಆಹ್ವಾನಿಸಲು ಕಾಯುತ್ತಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗಳ ಮಡಿಲು ತುಂಬಲು ಪುಟ್ಟ ಕಂದಮ್ಮ ಇದೇ ತಿಂಗಳು ಆಗಮಿಸಲಿದೆ.
ಹೌದು ಧ್ರುವ ಸರ್ಜಾ ಹಾಗೂ ಪ್ರೇರಣ ಅವರ ಬೇಬಿ ಬಂಪ್ ಫೋಟೋ ಶೂಟ್ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ವೈರಲ್ ಆಗುತ್ತಿದೆ. ಸ್ವತಹ ಧ್ರುವ ಸರ್ಜಾ ಫೋಟೋ ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೇವೆ ಅಂತ ಪುಟ್ಟ ಕಂದಮ್ಮನ ಆಗಮನ ಇದೇ ಸಪ್ಟಂಬರ್ ತಿಂಗಳಿನಲ್ಲಿ ಆಗಲಿದೆ ಎಂದು ರಿವೀಲ್ ಮಾಡಿದ್ದಾರೆ. ಸರ್ಜಾ ಕುಟುಂಬದಲ್ಲಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಮೇಲೆ ಯಾವುದೇ ಸಂತಸವು ಇರಲಿಲ್ಲ.
ಚಿರಂಜೀವಿ ಸರ್ಜಾ ಅವರ ಮಗ ರಾಯನ್ ರಾಜ್ ಸರ್ಜಾ ಹುಟ್ಟಿದ ಮೇಲೆ ಆ ಮನೆಯಲ್ಲಿ ತುಸು ನೆಮ್ಮದಿ ಕಾಣಿಸಿತು. ಇದೀಗ ದ್ರುವ ಸರ್ಜಾ ಅವರು ತಂದೆಯಾಗಲಿದ್ದು ಸರ್ಜಾ ಕುಟುಂಬದಲ್ಲಿ ಮತ್ತಷ್ಟು ನಗು ಸಂತೋಷ ತುಂಬಲಿದೆ. ಇನ್ನು ಬೇರೆ ಬೇರೆ ರೀತಿಯ ಕಾನ್ಸೆಪ್ಟ್ ನಲ್ಲಿ ಫೋಟೋಶೂಟ್ ಮಾಡಿಸಿರುವ ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರ ಬೇಬಿ ಬಂಪ್ ಬಹಳ ಅದ್ಭುತವಾಗಿದೆ.
ಇನ್ನು ಈ ವಿಡಿಯೋದಲ್ಲಿ ಅಂಬಾರಿ ಸಿನಿಮಾದ ಪೆದ್ದು ಮುದ್ದು ಜೋಡಿ ಎನ್ನುವ ಹಾಡು ಸಕ್ಕತ್ ಸೂಟ್ ಆಗುತ್ತಿದೆ. ಇನ್ನು ಪ್ರೇರಣಾ ತೊಟ್ಟ ಕಾಫಿ ಬಣ್ಣದ ಗೌನ್ ಹಾಗೂ ನೀಲಿ ಬಣ್ಣದ ಗೌನ್ ಅವರಿಗೆ ಬಹಳ ಚೆನ್ನಾಗಿ ಒಪ್ಪುತ್ತೆ. ಅದೇ ರೀತಿ ಧ್ರುವ ಸರ್ಜಾ ಅವರು ಕೂಡ ಸೂಟ್ ನಲ್ಲಿ ಮಿಂಚಿದ್ದಾರೆ. ಇನ್ನು ಈ ಫೋಟೋಶೂಟ್ ನ್ನು ಸಾಕೇತ್ ಮಾಡಿದ್ದಾರೆ.
ಪ್ರೇರಣಾ ಅವರಿಗೆ ಮೇಕಪ್ ಮಾಡಿದ್ದು ಜೀವಿತಾ ಮತ್ತು ಆಧ್ಯಾ ರಾಜ್. ಚೇತನ್ ಡಿಸೈನ್ ನಿಂದ ಉಡುಪುಗಳನ್ನು ತರಿಸಲಾಗಿದೆ. ಈ ವಿಡಿಯೋ ಮತ್ತು ಗ್ರಾಫಿಕ್ಸ್ ನ್ನು ಕಾಂತಿ ಸ್ಟುಡಿಯೋ ಮತ್ತು ಪ್ರವೀಣ್ ಗೌಡ ಮಾಡಿದ್ದಾರೆ. ಸಿನಿಮ್ಯಾಟಿಕ್ ರೀತಿಯಲ್ಲಿಯೇ ಡಿಫರೆಂಟ್ ಆಗಿ ಫೋಟೋ ಶೂಟ್ ಮಾಡಿಸಲಾಗಿದೆ. ಇನ್ನು ಧ್ರುವ ಸರ್ಜಾ ಅವರ ಸಿನಿಮಾ ಜರ್ನಿಯನ್ನು ನೋಡುವುದಾದರೆ ಅವರು ಅಭಿನಯಿಸಿದ್ದು ಚಿತ್ರದಲ್ಲಿ ಮಾತ್ರ ಆದರೆ ಅದರಿಂದ ಕಂಡ ಸಕ್ಸಸ್ ಮಾತ್ರ ಬಹಳ ದೊಡ್ಡದು.
ಇಂದಿಗೂ ಬಹು ಬೇಡಿಕೆಯ ನಟ ಆಗಿರುವ ಧ್ರುವ ಸರ್ಜಾ ತಮಗೆ ಸರಿಹೊಂದುವಂತಹ ಕಥೆಯನ್ನು ಮಾತ್ರ ಆಯ್ದುಕೊಳ್ಳುತ್ತಾರೆ ಹಾಗಾಗಿ ಅವರ ಚಿತ್ರದ ಸಂಖ್ಯೆ ಕಡಿಮೆ. ಆದರೆ ಪ್ರಿನ್ಸ್ ಅಭಿನಯಿಸಿರುವ ಎಲ್ಲಾ ಚಿತ್ರಗಳು ಉತ್ತಮ ಪ್ರದರ್ಶನ ಕಂಡಿವೆ. ಸದ್ಯ ಅಪ್ಪನಾಗುವ ಖುಷಿಯಲ್ಲಿದ್ದಾರೆ ದ್ರುವ ಸರ್ಜಾ. ದ್ರುವ ಸರ್ಜಾ ಅವರ ಅಭಿಮಾನಿಗಳು ಅವರ ಪೋಸ್ಟ್ ನೋಡಿ ಬೆಸ್ಟ್ ವಿಶಸ್ ತಿಳಿಸಿದ್ದಾರೆ. ದ್ರುವ ಪ್ರೇರಣಾ ಜೋಡಿಗೆ ಪ್ರಿನ್ಸ್ ಅಥವಾ ಪ್ರಿನ್ಸೆಸ್ ಬರುತ್ತಾರೋ ಅಂತ ಜನ ಈಗಲೇ ಊಹೆ ಆರಂಭಿಸಿದ್ದಾರೆ
View this post on Instagram