ಸಪ್ನಾ ಚೌಧರಿ

ಸಪ್ನಾ ಚೌಧರಿ ಹಾಡಿಗೆ ಅದ್ಭುತ ಸ್ಟೆಪ್ ಹಾಕಿದ ಯುವತಿ,ಲಕ್ಷಾಂತರ ಮಂದಿಯಿಂದ ವೀಕ್ಷಣೆ

Today News / ಕನ್ನಡ ಸುದ್ದಿಗಳು

ಸಾಮಾಜಿಕ ಮಾಧ್ಯಮದಿಂದ ಪ್ರತಿಯೊಬ್ಬರೂ ತಮ್ಮ ಸಾಧನೆಯನ್ನು ತಿಳಿಸಲು ಬಯಸುತ್ತಾರೆ.  ಏಕೆಂದರೆ ಈ ಮಾಧ್ಯಮದ ಮೂಲಕ, ಜಗತ್ತಿನ ಯುವಕರು ತಮ್ಮ ಪ್ರತಿಭೆಯನ್ನು ದೇಶಕ್ಕೆ ಮಾತ್ರವಲ್ಲದೆ ಇಡೀ ಪ್ರಪಂಚಕ್ಕೆ ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವರಿಗೆ ಪ್ರತಿಭೆಯಿದ್ದರೂ ಅದನ್ನು ಸಾಬೀತು ಪಡಿಸಲು ಒಂದು ಉತ್ತಮ ವೇದಿಕೆಯ ಕೊರತೆಯಿರುತ್ತದೆ. ಅಂತಹವರಿಗೆ ಸಾಮಾಜಿಕ ಮಾಧ್ಯಮ ಒಂದು ಉಡುಗೊರೆ ಎಂದರೆ ತಪ್ಪಾಗಲಾರದು.

ಹರಿಯಾನ್ವಿ ಡ್ಯಾನ್ಸರ್ ಸಪ್ನಾ ಚೌಧರಿ ಈಗಾಗಲೇ ಬಹಳ ಪ್ರಸಿದ್ಧರಾಗಿದ್ದಾರೆ. ಆದರೆ ‘ಬಿಗ್-ಬಾಸ್’ ಪ್ರವೇಶ ಅವರನ್ನು ಸೂಪರ್-ಡೂಪರ್ ಹಿಟ್ ಮಾಡಿದೆ. ಅವರು ಬಿಗ್ ಬಾಸ್ ಶೋಗೆ ಪ್ರವೇಶಿಸಿದ ಬಳಿಕ ಅವರ ಅಭಿಮಾನಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇದೀಗ ಸಪ್ನಾ ಚೌಧರಿಯ ಜನಪ್ರಿಯ ಹಾಡು ‘ದ ಆಂಖ್ ಕಿ ಯೋ ಕಾಜಲ್’ ನೃತ್ಯ ಅನುಸರಿಸಿ ಹೆಜ್ಜೆ ಹಾಕಿರುವ ವಿಡಿಯೋ ಅಪ್ಲೋಡ್ ಮಾಡಲಾಗುತ್ತಿದೆ.17 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾದ ವಿಡಿಯೋ:
ಈ ದಿನಗಳಲ್ಲಿ ಇಂಟರ್ನೆಟ್ ನಲ್ಲಿ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕನಿಷ್ಕಾ ಎಂಬ ಹುಡುಗಿ ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ಈ ನೃತ್ಯ ಸಾಕಷ್ಟು ಮೆಚ್ಚುಗೆಗೂ ಪಾತ್ರವಾಗಿದೆ. Kanishka Talent Hub ಹೆಸರಿನ YouTube ಚಾನಲ್ನಿಂದ ಈ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿದೆ.  ಡಿಸೆಂಬರ್ 3, 2018 ರಲ್ಲಿ ಅಪ್ಲೋಡ್ ಮಾಡಲಾದ ಈ ವೀಡಿಯೊ 17,54,383 ವೀಕ್ಷಣೆ ಕಂಡಿದೆ. ಜೊತೆಗೆ ಹಲವು ಪ್ರತಿಕ್ರಿಯೆಗಳನ್ನೂ ಸ್ವೀಕರಿಸಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.