
ಹರಿಯಾಣದ ಡ್ಯಾನ್ಸರ್ ಗಳ ವಿಚಾರ ಬಂದಾಗಲೆಲ್ಲಾ ಅಲ್ಲಿ ಮೊದಲು ಸದ್ದು ಮಾಡುವುದು ಸಪ್ನಾ ಚೌಧರಿ ಹೆಸರು. ಹರಿಯಾಣದ ಖ್ಯಾತ ನೃತ್ಯಗಾರ್ತಿ ಮತ್ತು ಗಾಯಕಿ ಸಪ್ನಾ ಚೌಧರಿ ಅವರಿಗೆ ನೃತ್ಯದಲ್ಲಿ ಚಾಲೆಂಜ್ ಮಾಡುವವರಿಲ್ಲ. ಸಪ್ನಾ ಚೌಧರಿ ತಮ್ಮ ಡ್ಯಾನ್ಸ್ ಗಳಿಂದಾಗಿಯೇ ಇಡೀ ದೇಶದಲ್ಲಿ ಜನಪ್ರಿಯತೆ ಪಡೆದಿದ್ದು, ಜನ ಆಕೆಯ ಡ್ಯಾನ್ಸ್ ಗೆ ಫಿದಾ ಆಗುತ್ತಾರೆ. ತನ್ನ ಡ್ಯಾನ್ಸ್ ಗಳಿಂದಾಗಿಯೇ ಒಬ್ಬ ಸೆಲೆಬ್ರಿಟಿ ಸ್ಥಾನವನ್ನು ಪಡೆದಿರುವ ಸಪ್ನಾ ಹಿಂದಿಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ ಒಂದು ಸೀಸನ್ ನಲ್ಲಿ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶ ಮಾಡಿದ್ದರು.
ಇದು ಆಕೆಯ ಜನಪ್ರಿಯತೆ ಹೇಗಿದೆ ಎಂದು ಹೇಳಲು ಒಂದು ಸಣ್ಣ ಉದಾಹರಣೆಯಷ್ಟೇ ಎನ್ನಬಹುದು. ಸಪ್ನಾ ಚೌಧರಿ ಅವರು ಡ್ಯಾನ್ಸ್ ಕಾರ್ಯಕ್ರಮಗಳನ್ನು ನೀಡಲು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುತ್ತಾರೆ, ಅಲ್ಲಿ ಅವರು ತಮ್ಮ ಹಾಟ್ ಹಾಟ್ ಡ್ಯಾನ್ ಗಳಿಂದ ಡ್ಯಾನ್ಸ್ ಪ್ರಿಯರ ಎದೆಯಲ್ಲಿ ಕಿಚ್ಚು ಹೊತ್ತಿಸುತ್ತಾರೆ. ಸಪ್ನಾ ನೃತ್ಯ ಪ್ರದರ್ಶನ ನೀಡಲು ಹೋಗುವ ಕಡೆಗಳಲೆಲ್ಲಾ ಆಕೆಯ ನೃತ್ಯವನ್ನು ನೋಡಲ ಜನರ ದೊಡ್ಡ ದಂಡೇ ಅಲ್ಲಿ ಸೇರುತ್ತದೆ.
ಸಪ್ನಾ ಅವರ ಪ್ರತಿಯೊಂದು ಡ್ಯಾನ್ಸ್ ಸ್ಟೆಪ್ ಗೂ ಜನರು ಹುಚ್ಚೆದ್ದು ಕುಣಿಯುತ್ತಾರೆ. ಇಂತಹ ಡ್ಯಾನ್ಸರ್ ವೇದಿಕೆಯಲ್ಲಿ ಕುಣಿಯುವಾಗ ಆಕೆಗೆ ಸ್ಪರ್ಧೆ ನೀಡಲು ಯಾರಾದರೂ ವೇದಿಕೆಯನ್ನು ಏರಿದರೆ, ಆ ದೃಶ್ಯ ಹೇಗಿರುತ್ತದೆ ಎಂದು ಊಹಿಸಿಕೊಳ್ಳುವುದು ಸಹಾ ಕಷ್ಟ. ಆದರೆ ಈ ಅಂತಹ ವೀಡಿಯೋ ವೈರಲ್ ಆಗುತ್ತಿದ್ದು ಜನರ ಗಮನ ಸೆಳೆದಿದೆ. ಈ ವೈರಲ್ ವೀಡಿಯೊದಲ್ಲಿ ಸಪ್ನಾ ಚೌಧರಿ ತಮ್ಮ ನೃತ್ಯ ಪ್ರದರ್ಶನದ ಮೂಲಕ ಜನರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿದ್ದಾರೆ.
ಡ್ಯಾನ್ಸ್ ಪ್ರಿಯರು ಅಚ್ಚರಿಯಿಂದ ಆ ಡ್ಯಾನ್ಸ್ ನೋಡುವಾಗಲೇ, ವೇದಿಕೆಗೆ ಒಂದು ಸಣ್ಣ ಹುಡುಗಿ ಬಂದು, ಸಪ್ನಾ ಚೌಧರಿ ಜೊತೆಗೆ ಸ್ಪರ್ಧೆಗೆ ಇಳಿದಂತೆ ತಾನೂ ಡ್ಯಾನ್ಸ್ ಮಾಡಲು ಆರಂಭಿಸುತ್ತಾಳೆ. ಇವರಿಬ್ಬರ ನಡುವೆ ವೇದಿಕೆಯ ಮೇಲೆ ಕಂಡಿದ್ದು ಒಂದು ಸೂಪರ್ ಪೈಪೋಟಿ. ಕೆಲವೊಮ್ಮೆ ಸಪ್ನಾ ಅದ್ಭುತವಾದ ಹೆಜ್ಜೆಗಳನ್ನು ಹಾಕಿದರೆ , ಮತ್ತೆ ಕೆಲವೊಮ್ಮೆ ಆ ಚಿಕ್ಕ ಹುಡುಗಿ ಸಪ್ನಾ ಅವರಿಗೆ ಚಾಲೆಂಜ್ ಮಾಡುವ ಹಾಗೆ ಸ್ಟೆಪ್ಪುಗಳನ್ನು ಹಾಕುತ್ತಾಳೆ.
ಹುಡುಗಿಯ ಈ ಡ್ಯಾನ್ಸ್ ನೋಡಿ ಸ್ವತಃ ಸಪ್ನಾ ಚೌಧರಿ ಕೂಡ ಒಂದು ಕ್ಷಣ ಅಚ್ಚರಿ ಪಟ್ಟಿದ್ದಾರ. ಈ ವಿಡಿಯೋ ಹೊಸತಲ್ಲವಾದರೂ ಈಗ ಅದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಸಪ್ನಾ ಚೌಧರಿ ಮತ್ತು ಪುಟ್ಟ ಹುಡುಗಿಯ ಈ ಡ್ಯಾನ್ಸ್ ವೀಡಿಯೋ ಸಾಮಾಜಿಕ ಜಾಲತಾಣಗಳ ವಿವಿಧ ಪ್ಲಾಟ್ ಫಾರ್ಮ್ ಗಳಲ್ಲಿ ಜನರ ಗಮನವನ್ನು ಸೆಳೆಯುವ ಮೂಲಕ ಭರ್ನರಿಯಾಗಿ ವೈರಲ್ ಆಗಿದ್ದು ,ಒಂದು ಹೊಸ ಸಂಚಲನವನ್ನು ಸೃಷ್ಟಿಸಿದೆ.
ಸಪ್ನಾ ಅವರ ಈ ಡ್ಯಾನ್ಸ್ ವೀಡಿಯೊವನ್ನು ತ್ರಿಮೂರ್ತಿ ಕ್ಯಾಸೆಟ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಶೇರ್ ಮಾಡಿದ್ದು, ಈಗಾಗಲೇ ವೀಡಿಯೋಗೆ 16 ಮಿಲಿಯನ್ ದಾಟಿದ ವೀಕ್ಷಣೆಗಳು ಹರಿದು ಬಂದಿವೆ. ಲಕ್ಷಗಟ್ಟಲೆ ಲೈಕ್ ಗಳನ್ನು ವೀಡಿಯೋ ಪಡೆದಿದೆ. ಅನೇಕ ಮಂದಿ ಕಾಮೆಂಟ್ ಗಳನ್ನು ಮಾಡುವ ಮೂಲಕ ಡ್ಯಾನ್ಸ್ ಅನ್ನು ಹಾಡಿ ಹೊಗಳಿದ್ದಾರೆ.
ಆ ವಿಡಿಯೊ ಕೆಳಗಿದೆ ನೋಡಿ…
Comments are closed.