SAPNA-CHAUDHARY-HOT-DANCE

ಹೊಸ ಡ್ಯಾನ್ಸ್ ಮೂಲಕ ಸಂಚಲನ ಸೃಷ್ಟಿಸಿದ ಹರಿಯಾಣ್ವಿ ಡ್ಯಾನ್ಸರ್ ಸಪ್ನಾ ಚೌಧರಿ -ನಿದ್ದೆಗೆಟ್ಟ ನೆಟ್ಟಿಗರು!

Entertainment/ಮನರಂಜನೆ

ಸೋಶಿಯಲ್ ಮೀಡಿಯಾಗಳಲ್ಲಿ ಡ್ಯಾನ್ಸ್ ವೀಡಿಯೋಗಳ ವಿಚಾರ ಬಂದಾಗ ಅಲ್ಲಿ ತಪ್ಪದೇ ಹರಿಯಾಣ್ವಿ ಡ್ಯಾನ್ಸರ್ ಗಳ ಹೆಸರುಗಳು ಹಾಗೂ ಅವರ ನೃತ್ಯಗಳ ಬಗ್ಗೆ ಗಮನ ಹೋಗುತ್ತದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಹರಿಯಾಣ್ವಿ ಡ್ಯಾನ್ಸರ್ ಗಳ ಡ್ಯಾನ್ಸ್ ಗಳ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಿದೆ. ಇವರ ಡ್ಯಾನ್ಸ್ ಗಳನ್ನು ನೋಡುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಆದ್ದರಿಂದಲೇ ಹರಿಯಾಣ್ವಿ ಡ್ಯಾನ್ಸರ್ ಗಳ ವೀಡಿಯೋ ಗಳು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಆದ ಮೇಲೆ ಸ್ವಲ್ಪ ಸಮಯದಲ್ಲೇ ಹೆಚ್ಚು ಸದ್ದು ಮಾಡುತ್ತವೆ.

ವೀಡಿಯೋಗಳು ವೈರಲ್ ಆಗುವ ಮೂಲಕ ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆಯನ್ನು ಪಡೆದುಕೊಳ್ಳುತ್ತವೆ. ಇಂದು ಹರಿಯಾಣ್ವಿ ಡ್ಯಾನ್ಸರ್ ಗಳಲ್ಲಿ ಬಹಳಷ್ಟು ಯುವತಿಯರು ಸದ್ದು ಸುದ್ದಿಯಾಗುತ್ತಲೇ ಇರುತ್ತಾರೆ. ಆದರೆ ಇವರೆಲ್ಲರಿಗಿಂತ ಹೆಚ್ಚು ಜನಪ್ರಿಯತೆ ಪಡೆದು, ಒಬ್ಬ ಸಿನಿಮಾ ನಟಿಯಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡಿರುವ ಹರಿಯಾಣ್ವಿ ಡ್ಯಾನ್ಸರ್ ಎಂದರೆ ಅವರು ಸಪ್ನಾ ಚೌಧರಿ.

ಹೌದು ಊರು ಊರು ಸುತ್ತುತ್ತಾ ಡ್ಯಾನ್ಸ್ ಸ್ಟೇಜ್ ಗಳಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಸಪ್ನಾ ಚೌಧರಿ ಇಂದು ಹರಿಯಾಣದಲ್ಲಿ ಒಬ್ಬ ಸೆಲೆಬ್ರಿಟಿ ಸ್ಥಾನ ಮಾನವನ್ನು ಪಡೆದಿದ್ದಾರೆ. ಸಪ್ನಾ ಚೌಧರಿ ಡ್ಯಾನ್ಸ್ ಶೋ ಎಂದರೆ ಅಲ್ಲಿ ಜನ ಜಂಗುಳಿ ಸಾಮಾನ್ಯ. ಸಪ್ನಾ ಚೌಧರಿ ಹೆಜ್ಜೆ ಹಾಕಿದರೆ ಡ್ಯಾನ್ಸ್ ಪ್ರಿಯರ ಎದೆಯಲ್ಲಿ ಕಚಗುಳಿ ಇಟ್ಟಂತೆ. ಇದೀಗ ಸಪ್ನಾ ಚೌಧರಿ ಒಂದು ಮ್ಯೂಸಿಕ್ ಆಲ್ಬಂ ನಲ್ಲಿ ಹೆಜ್ಜೆ ಹಾಕಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗಿದೆ.

ಹೌದು, ಯುಕೆ ಹರಿಯಾಣಿ ಹೆಸರಿನ ಗಾಯಕ ಹಾಡಿರುವ ಒಂದು ಸುಂದರವಾದ ಹಾಡಿಗೆ ಸಪ್ನಾ ಚೌಧರಿ ಹೆಜ್ಜೆ ಹಾಕಿದ್ದಾರೆ. ಸಪ್ನಾ ಚೌಧರಿ ಹಾಕಿದ ಹೆಜ್ಜೆಗಳ ಮೋಡಿಗೆ ನೆಟ್ಟಿಗರು ಮತ್ತು ಸಪ್ನಾ ಚೌಧರಿ ಅಭಿಮಾನಿಗಳು ಫಿದಾ ಆಗಿದ್ದಾರೆ. ವೈರಲ್ ವೀಡಿಯೋಗೆ ಮೆಚ್ಚುಗೆಗಳು ಹರಿದು ಬರುತ್ತಿವೆ. ಸಪ್ನಾ ಚೌಧರಿ ಹೆಜ್ಜೆ ಹಾಕಿರುವ ಈ ಹೊಸ ವೀಡಿಯೋ ಸಾಂಗ್ ಅನ್ನು ಈಗಾಗಲೇ 3.1 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ!

ಇದರ ಮೇಲೆಯೇ ಸಪ್ನಾ ಚೌಧರಿ ಕ್ರೇಜ್ ಹೇಗಿದೆ ಎನ್ನುವುದು ಅರ್ಥವಾಗುತ್ತದೆ. ಈ ಮ್ಯೂಸಿಕ್ ಆಲ್ಬಂ ವೀಡಿಯೋ ಗೆ ಮೂವತ್ತು ಸಾವಿರಕ್ಕೂ ಅಧಿಕ ಜನರು ಲೈಕ್ ಗಳನ್ನು ನೀಡಿದ್ದಾರೆ. ಹತ್ತಿರ ಹತ್ತಿರ ಮೂರು ಸಾವಿರ ಜನರು ಈಗಾಗಲೇ ಕಾಮೆಂಟ್ ಗಳನ್ನು ಮಾಡಿದ್ದಾರೆ. ಕಾಮೆಂಟ್ ಮಾಡಿದವರಲ್ಲಿ ಅನೇಕರು ಸಪ್ನಾ ಚೌಧರಿ ಬಹಳ ಅಂದವಾಗಿ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನೂ ಕೆಲವರು ಹಾಡು ಬಹಳ ಚೆನ್ನಾಗಿದೆ, ಹಾಡಿನ ಸಾಹಿತ್ಯ ಸಹಾ ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದು ಮೆಚ್ಚುಗೆ ನೀಡಿದ್ದಾರೆ. ಹಾಡಿನ ಸಂಗೀತವನ್ನು ಮೆಚ್ಚಿಕೊಂಡವರು ಸಹಾ ಕಾಮೆಂಟ್ ಮಾಡಿ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ‌. ಒಟ್ಟಾರೆ ಸಪ್ನಾ ಚೌಧರಿ ಹೆಜ್ಜೆ ಹಾಕಿರುವ ಈ ವೀಡಿಯೋ ಮಾತ್ರ ಡ್ಯಾನ್ಸ್ ಪ್ರಿಯರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಆ ವಿಡಿಯೊ ಕೆಳಗಿದೆ ನೋಡಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.