ಸಾನ್ಯ-ಅಯ್ಯರ್

ಸಾನ್ಯ ಅಯ್ಯರ್ ಸೊಂಟಕ್ಕೆ ಮುತ್ತಿಟ್ಟ ಡ್ಯಾನ್ಸರ್..! ಬಿಗ್ಬಾಸ್ ಮನೆಗೆ ಹೋಗುತ್ತಿದ್ದಂತೆ ವಿಡಿಯೋ ವೈರಲ್…

CINEMA/ಸಿನಿಮಾ Today News / ಕನ್ನಡ ಸುದ್ದಿಗಳು

ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಎಂಟು ಸೀಸನ್ ಬಿಗ್ ಬಾಸ್ ಕಾರ್ಯಕ್ರಮ ಮೂಡಿ ಬಂದಿದೆ. ಹಾಗೆ ಬಿಗ್ ಬಾಸ್ ಈಗ ಹೊಸ ಅವತಾರದೊಂದಿಗೆ ಪ್ರಾರಂಭವಾಗಿದ್ದು ಬಿಗ್ ಬಾಸ್ ಒಟಿಟಿ ಸೀಸನ್ ಒಂದರಲ್ಲಿ ಬೇರೆಯದ್ದೆ ರೀತಿ ಪ್ರೇಕ್ಷಕರನ್ನು ರಂಜಿಸಲು ಬಿಗ್ಬಾಸ್ ಷೋ ಸಿದ್ಧತೆ ನಡೆಸಿದೆ ಎಂದು ಹೇಳಬಹುದು. ಬಿಗ್ಬಾಸ್ ವೇದಿಕೆಯಲ್ಲಿ ಈ ಬಾರಿ 16 ಜನರು ಸ್ಪರ್ಧಿಗಳು ಕಾಣಿಸಿಕೊಂಡಿದ್ದು ಒಬ್ಬೊಬ್ಬರಾಗಿ ಈಗಾಗಲೇ ಬಿಗ್ಬಾಸ್ ಮನೆ ಸೇರಿದ್ದಾರೆ. ಕೆಲವರ ಆಯ್ಕೆಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಹೌದು ಪುಟ್ಟ ಗೌರಿ ಖ್ಯಾತಿಯ ನಟಿ ಸಾನ್ಯ ಅಯ್ಯರ್ ಹೆಚ್ಚು ಗಮನ ಸೆಳೆಯುತ್ತಿರುವ ಕಲಾವಿದೆ ಎನ್ನಬಹುದು. ಕೆಲವೊಂದು ಟಾಸ್ಕ್ ಮೂಲಕ ಅವರ ಅವರ ವೈಯಕ್ತಿಕ ವಿಚಾರಗಳು ಒಂದೊಂದೇ ಹೊರ ಬರುತ್ತಿರುವುದು ವಿಶೇಷ.

ಸಾನ್ಯ ಅಯ್ಯರ್ ಕೆಲ ವಿಚಾರಗಳ ಹೇಳಿಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಈ ಬಾರಿಯ ಬಿಗ್ಬಾಸ್ ಒಟಿಟಿ ಪ್ರಸಾರ ಆಗುತ್ತಿರುವುದು ಕೇವಲ ವೂಟ್ ನಲ್ಲಿ, ಚಾನೆಲ್ನಲ್ಲಿ ಎಲ್ಲೂ ಬರುತ್ತಿಲ್ಲ. ಹೌದು ಸಾನ್ಯ ಅಯ್ಯರ್ ಅವರು ಮೂಲತಃ ಬೆಂಗಳೂರಿನವರು. ಇವರು ಹುಟ್ಟಿದ್ದು 1998ರಲ್ಲಿ ಎಂದು ಹೇಳಲಾಗುತ್ತಿದೆ. ಕಲಾವಿದರ ಕುಟುಂಬದ ಹಿನ್ನೆಲೆಯಲ್ಲಿ ಬಂದ ಸಾನ್ಯ ಅವರು ಈಗಾಗಲೇ ಅವರದ್ದೇ ಆದ ಅಪಾರ ಅಭಿಮಾನಿ ಬಳಗ ಗಿಟ್ಟಿಸಿಕೊಂಡಿದ್ದಾರೆ.
Sanya Iyer (@SanyaIyer) / Twitter
ಅವರು ತಮ್ಮ 3 ನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅವರು ತಮ್ಮ ಬಾಲ್ಯದಲ್ಲಿ ಅವರ ತಾಯಿಯೊಂದಿಗೆ ಅನೇಕ ಧಾರಾವಾಹಿಗಳನ್ನು ಮಾಡಿದ್ದಾರೆ. ಅವರು ಬಾಲ್ಯ ವಿವಾಹವನ್ನ ವಿವರಿಸುವ ಮತ್ತು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದ ಪುಟ್ಟಗೌರಿ ಮದುವೆ ಎಂಬ ಧಾರಾವಾಹಿಯಲ್ಲಿಯೂ ಕೂಡ ಕೆಲಸ ಮಾಡಿ ಸೈ ಎನಿಸಿಕೊಂಡಿರುವ ನಟಿ.
ನಟಿ ನಟನೆಯಲ್ಲಿ ಮಾತ್ತ್ರವಲ್ಲದೆ ಡ್ಯಾನ್ಸಿಂಗ್ ಸ್ಟಾರ್ ಕಿರುತೆರೆಯಲ್ಲೂ ಕೂಡ ಮಿಂಚಿದ್ದಾರೆ ಎನ್ನಲಾಗಿದೆ. ಹೌದು, ಈ ಹಿಂದೆಯೇ ಡ್ಯಾನ್ಸಿಂಗ್ ಸ್ಟಾರ್ ಎಂಬ ಒಂದು ಕಾರ್ಯಕ್ರಮದಲ್ಲಿ ತಮ್ಮ ಪಾರ್ಟ್ನರ್ ಜೊತೆ ಸಾನ್ಯ ಸ್ಟೆಪ್ ಹಾಕಿದವರು. ಡಾನ್ಸ್ ಮಾಡಿದ ಪರಿ ನಿಜಕ್ಕೂ ಅದ್ಭುತ. ಬಿಗ್ ಬಾಸ್ ಮನೆ ಒಳಗೆ ಸಾನ್ಯ ಅಯ್ಯರ್ ಅವರು ಹೋಗುತ್ತಿದ್ದಂತೆ ಅವರ ಒಂದು ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಮಾದಕದಂತ ಡಾನ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ ಎನ್ನಬಹುದು. ಅವರ ಪಾರ್ಟ್ನರ್ ಸೊಂಟಕ್ಕೆ ಮುತ್ತಿಟ್ಟ ದೃಶ್ಯ ನಿಜಕ್ಕೂ ನಿಮ್ಮನ್ನು ಕೂಡ ಬೆರಗಾಗಿಸುತ್ತದೆ. ಇಲ್ಲಿದೆ ನೋಡಿ ಆ ವಿಡಿಯೋ. ಈ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ, ಸಾನ್ಯ ಅವರ ಬಿಗ್ ಬಾಸ್ ಮನೆಯ ಆಯ್ಕೆ ವಿಚಾರವಾಗಿ ಕಮೆಂಟ್ ಮಾಡಿ ಧನ್ಯವಾದಗಳು.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.