
Sanya And Roopesh Marriage: ಬಿಗ್ ಬಾಸ್ ಸೀಸನ್ 9 (Bigg Boss Season 9) ಇದೀಗ ಗ್ರಾಂಡ್ ಫಿನಾಲೆ ಮುಗಿಸಿ ಸೀಸನ್ 10ರ ಅತ್ತ ಮುಖ ಮಾಡಿದೆ. ಬಿಗ್ ಬಾಸ್ ಶೋ ಅತಿ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿದೆ. ಬಿಗ್ ಬಾಸ್ ಅನ್ನು ನಟ ಕಿಚ್ಚ ಸುದೀಪ್ (Kiccha Sudeep) ನಿರೂಪಣೆ ಮಾಡುತ್ತಾರೆ.
ಬಿಗ್ ಬಾಸ್ ಶೋ ವೀಕ್ಷಕರನ್ನು ರಂಜಿಸುತ್ತಿದ್ದ ಶೋ ಆಗಿತ್ತು. ಆದರೆ ಈಗ ಬಿಗ್ ಬಾಸ್ ಮುಗಿದಿರುವುದು ವೀಕ್ಷಕರಿಗೆ ಮನೋರಂಜನೆ ಇಲ್ಲದಂತೆ ಆಗಿದೆ. ಬಿಗ್ ಬಾಸ್ ಗೆದ್ದಿರುವ ರೂಪೇಶ್ ಶೆಟ್ಟಿ ಬಹಳ ಖುಷಿಯಲ್ಲಿದ್ದಾರೆ.

ಮಾಧ್ಯಮಗಳಲ್ಲಿ ಮದುವೆ ಬಗ್ಗೆ ಮಾತನಾಡಿದ ರೂಪೇಶ್ ಶೆಟ್ಟಿ
ಬಿಗ್ ಬಾಸ್ ಮನೆಯಿಂದ ಹೊರ ಬಂದ ರೂಪೇಶ್ ಶೆಟ್ಟಿ ಮಾಧ್ಯಮಗಳಲ್ಲಿ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅದರಲ್ಲಿ ರೂಪೇಶ್ ಶೆಟ್ಟಿ ಗೆ ಸಾನ್ಯ ಅವರ ಮನೆಯಿಂದ ಮದುವೆ ಪ್ರಪೋಸಲ್ ಬಂದರೆ ನೀವು ಒಪ್ಪಿಕೊಳ್ಳುತ್ತೀರಾ ಅಂದು ಕೇಳುತ್ತಾರೆ. ಅದಕ್ಕೆ ರೂಪೇಶ್ ನನಗೆ ಮದುವೆ ಬಗ್ಗೆ ಯಾವುದೇ ರೀತಿಯಾದ ಯೋಚನೆ ಇಲ್ಲ ಎಂದು ಹೇಳಿದ್ದಾರೆ.
ಸಾನ್ಯ ಮತ್ತು ನಾನು ಇಬ್ಬರು ಕೂಡ ಒಳ್ಳೆಯ ಫ್ರೆಂಡ್ಸ್ ಅಂತ ಹೇಳಿದ್ದಾರೆ. ಸಾನ್ಯ ಅವಳಿಗೆ ಅವಳ ಕೆರಿಯರ್ ಮುಖ್ಯ, ಸಿನಿಮಾ ಪ್ರಾಜೆಕ್ಟ್ ಗಾಗಿ ಕಾಯುತ್ತಿದ್ದಾಳೆ ಎಂದು ಹೇಳಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದ ರೂಪೇಶ್ ಸಾನ್ಯ (Roopesh Sanya) ಅವರ ಗೆಳೆತನದ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆ ಒಳಗೆ ಬೇರೆ, ಹೊರ ಬಂದಾಗ ಬೇರೆ, ಸಾನ್ಯ ಅವರಿಗೆ ನನ್ನ ಮೇಲೆ ಒಳ್ಳೆಯ ಅಭಿಪ್ರಾಯ ಇದೆ ಎಂದಿದ್ದಾರೆ. ಮದುವೆ ವಿಚಾರ ತಲೆಯಲ್ಲಿ ಇಲ್ಲ ಎಂದಿದ್ದಾರೆ.
ರೂಪೇಶ್ ಜೊತೆಗಿನ ಗೆಳೆತನದ ಬಗ್ಗೆ ಮಾತನಾಡಿದ ರೂಪೇಶ್
ಸಾನ್ಯ ಅಯ್ಯರ್ (Sanya Iyer) ಕೂಡ ಮನೆಯಿಂದ ಹೊರಬಂದು ರೂಪೇಶ್ ಶೆಟ್ಟಿ (Roopesh Shetty) ಜೊತೆಗಿಂದ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸಾನ್ಯ ಕೂಡ ರೂಪೇಶ್ ಜೊತೆ ಇರುವುದು ಒಳ್ಳೆಯ ಗೆಳೆತನ ಎಂದಿದ್ದಾರೆ. ಮದುವೆ ವಿಚಾರ ನಮ್ಮಿಬ್ಬರ ಮಧ್ಯೆ ಇಲ್ಲ ಎಂದಿದ್ದಾರೆ.

ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ
ಬಿಗ್ ಬಾಸ್ ಸೀಸನ್ 9 ರ ಗೆದ್ದಿರುವ ರೂಪೇಶ್ ಶೆಟ್ಟಿ ವಾಹಿನಿಯಿಂದ ಬಂದ ಬಹುಮಾನ ಮೊತ್ತ ಬರೋಬ್ಬರಿ 60 ಲಕ್ಷ. ಇಷ್ಟೊಂದು ಮೊತ್ತದ ಹಣವು ರೂಪೇಶ್ ಪಾಲಾಗಿದ್ದಕ್ಕೆ ಹಲವಾರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರಮಾಣದ ಹಣವನ್ನು ಅವರು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಬಿಗ್ ಬಾಸ್ ವೇಧಿಕೆಯ ಮೇಲೆ ಕಿಚ್ಚ ಸುದೀಪ್ 60 ಲಕ್ಷ ಬಹುಮಾನವನ್ನು ಘೋಷಿಸಿದ್ದಾರೆ. ಆದರೆ ಅಸಲಿಯಾಗಿ ರೂಪೇಶ್ ಕೈಗೆ ಅಷ್ಟೊಂದು ಮೊತ್ತ ಬರುವುದಿಲ್ಲ. ಅವರ ಕೈಗೆ ಸಿಕ್ಕಿದ್ದು ಒಟ್ಟು 42 ಲಕ್ಷ ರೂಪಾಯಿ.
Comments are closed.