ಪುಟ್ಟ ಗೌರಿ ಮದುವೆ ಸೀರಿಯಲ್ ನಲ್ಲಿ ಬಾಲ ನಟಿಯಾಗಿ ನಟಿಸಿ ಜನ ಮನ ಗೆದ್ದಿದ್ದ ನಟಿ ಸಾನ್ಯಾ ಅಯ್ಯರ್(Sanya Iyer) ಈಗ ದೊಡ್ಡ ಹುಡುಗಿಯಾಗಿದ್ದಾರೆ. ಬಿಗ್ ಬಾಸ್(Big Boss) ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸಾನ್ಯಾ ಅಲ್ಲೂ ಸಖತ್ ಸದ್ದನ್ನು ಮಾಡಿದ್ದರು. ಬಿಗ್ ಬಾಸ್ ಕನ್ನಡ ಓಟಿಟಿ ಮತ್ತು ಟಿವಿ ಬಿಗ್ ಬಾಸ್ ಎರಡೂ ಕಡೆ ಮಿಂಚಿದ ಸಾನ್ಯಾ ಬಿಗ್ ಬಾಸ್ ಮನೆಯಲ್ಲಿ ಇರುವಾಗ ಹತ್ತು ಹಲವು ವಿಚಾರಗಳಿಂದಾಗಿ ಸುದ್ದಿಯಾದರು. ಅವರ ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಂಡ ವಿಷಯಗಳು ಸಹಾ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಈಗ ಬಿಗ್ ಬಾಸ್ ಮುಗಿದ ಹಲವು ದಿನಗಳ ನಂತರ ಸಾನ್ಯಾ ಇದೀಗ ತಮ್ಮ ತಾಯಿಯ ವಿಚಾರವಾಗಿ ಸುದ್ದಿಯಾಗಿದ್ದಾರೆ. ಹೌದು, ಸಾನ್ಯಾ ಈಗ ಅವರ ತಾಯಿ(Sanya Iyer mother) ಧರಿಸಿದ್ದ ಬಟ್ಟೆಯ ವಿಚಾರವಾಗಿ ಸದ್ದನ್ನು ಮಾಡಿದ್ದು, ಸಾನ್ಯಾ ಅವರ ತಾಯಿ ತಮ್ಮ ಜನ್ಮದಿನದ ಪಾರ್ಟಿಯಲ್ಲಿ ತೊಟ್ಟ ಡ್ರೆಸ್ ನ ಕುರಿತಾಗಿ ಇಷ್ಟೆಲ್ಲಾ ನಡೆದಿದೆ. ನಟಿ ಸಾನ್ಯಾ ಅಯ್ಯರ್ ಅವರ ತಾಯಿ ದೀಪಾ ಅಯ್ಯರ್ ಅವರು ಸಹಾ ಡಬ್ಬಿಂಗ್ ಕಲಾವಿದೆಯಾಗಿ, ಸೀರಿಯಲ್ ಗಳಲ್ಲಿ ನಟಿಯಾಗಿ ಹೆಸರನ್ನು ಮಾಡಿದ್ದಾರೆ.
ಎರಡು ದಿನಗಳ ಹಿಂದೆ ದೀಪಾ ಅಯ್ಯರ್(Deepa Iyer) ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಸಾನ್ಯಾ ತಮ್ಮ ಅಮ್ಮನ ಜೊತೆಗೆ ಎಂಜಾಯ್ ಮಾಡಿದ್ದಾರೆ. ತಾಯಿಯನ್ನು ದೊಡ್ಡ ಹೊಟೇಲ್ ಗೆ ಕರೆದುಕೊಂಡು ಹೋಗಿ, ಕೇಕ್ ಕಟ್ ಮಾಡಿಸಿ ಅಮ್ಮನಿಗೆ ಸರ್ಪ್ರೈಸ್ ನೀಡಿದ್ದಾರೆ ಸಾನ್ಯಾ. ಅನಂತರ ಈ ಸಂಭ್ರಮದ ಕ್ಷಣಗಳನ್ನು ಸೋಶಿಯಲ್ ಮೀಡಿಯಾ ಅಲ್ಲಿ ಶೇರ್ ಮಾಡಿದ್ದಾರೆ. ಆದರೆ ಸಾನ್ಯಾ ಮಾಡಿದ ಪೋಸ್ಟ್ ನೋಡಿ, ಅದರಲ್ಲಿ ಅವರ ತಾಯಿ ಧರಿಸಿದ್ದ ಒಂದು ಮಾಡ್ರನ್ ಗೌನ್ ನೋಡಿ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಾ, ಕೆಟ್ಟದಾಗಿ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಸಾನ್ಯಾ ಹಂಚಿಕೊಂಡ ವೀಡಿಯೋ ನೋಡಿದ ನಂತರ ಕಾಮೆಂಟ್ ಮಾಡಿದವರು ತಾಯಿನೇ ಹೀಗೆ, ಇನ್ನು ಮಗಳು ಹಾಗೆ ಇರೋದ್ರಲ್ಲಿ ಆಶ್ಚರ್ಯ ಏನಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ಸಹಾ ನೆಗೆಟಿವ್ ಆಗಿ ಮಾತನಾಡಿದ್ದಾರೆ. ಅನಂತರ ಇಂತಹ ಕಾಮೆಂಟ್ ಗಳನ್ನು ನೋಡಿದ ನಂತರ ಸಾನ್ಯಾ ಇದಕ್ಕೆ ಪ್ರತಿಕ್ರಿಯೆ ನೀಡಿ, ತಿರುಗೇಟು ನೀಡಿದ್ದಾರೆ. ಸಾನ್ಯಾ ತಮ್ಮ ಕಾಮೆಂಟ್ ನಲ್ಲಿ ತಮ್ಮ ಸಿಟ್ಟನ್ನು ಹೊರಹಾಕಿದ್ದು, ನೆಟ್ಟಿಗರಿಗೆ ತಮ್ಮ ಮಾತಿನಿಂದಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಾನ್ಯಾ ತಮ್ಮ ಪ್ರತಿಕ್ರಿಯೆಯಲ್ಲಿ, ನಾವ್ಯಾವ ಕಾಲದಲ್ಲಿದ್ದೀವಿ. ನಮಗೆ ಬೇಕಾದ ಬಟ್ಟೆಯನ್ನು ಹಾಕಿಕೊಳ್ಳುವ ಸ್ವಾತಂತ್ರ್ಯ ಕೂಡಾ (Freedom) ನಮಗೆ ಇಲ್ವಾ. ಯಾರು ಯಾವ ಥರದ ಬಟ್ಟೆ ಹಾಕ್ಕೊಬೇಕು ಅಂತ ಉಪದೇಶ ಕೊಡೋದಕ್ಕೆ ನೀವ್ಯಾರು, ನಿಮಗೆ ಬೇಕಾದ ಬಟ್ಟೆ ನೀವು ಹಾಕಿ, ಅದು ಬಿಟ್ಟು ಉಳಿದೋರ ಬಟ್ಟೆ ಬಗ್ಗೆ ಹೀಗೆಲ್ಲ ಕಮೆಂಟ್ ಮಾಡೋದು ತಪ್ಪು ಅಂತ ಹೇಳಿದ್ದಾರೆ. ಸಾನ್ಯಾ ಅವರ ಬೆಂಬಲಿಗರು ಅವರಿಗೆ ಸಪೋರ್ಟ್ ಮಾಡಿದ್ದು, ಕೆಲವರು ಇದನ್ನೂ ಟೀಕೆ ಮಾಡಿದ್ದಾರೆ.