ಸ್ನೇಹಿತರೆ, ಬಿಗ್ ಬಾಸ್ ಕನ್ನಡ ಸೀಸನ್ 9ರ ಪ್ರೇಮ ಪಕ್ಷಿಗಳಿಂದೇ ಹೆಸರು ಪಡೆದಂತ ಸಾನಿಯಾ ಮತ್ತು ರೂಪಿ, ಇದೀಗ ಬೇರೆ ಬೇರೆ ಆಗಿದ್ದಾರೆ. ಎಲಿಮಿನೇಷನ್ ಪ್ರಕ್ರಿಯೆಯ ಅನುಸಾರ ಸಾನಿಯಾ ಮನೆಯಿಂದ ಔಟ್ ಆಗಿದ್ದು, ಟ್ವಿಟರ್ ನಲ್ಲಿ ಸಾನಿಯಾ ರವರನ್ನು ಮತ್ತೆ ಬಿಗ್ ಬಾಸ್ ಗೆ ಕರೆತರುವಂತಹ ಯೋಜನೆಯನ್ನು ಅಭಿಮಾನಿಗಳು ಮಾಡುತ್ತಿದ್ದಾರೆ.
ಹೀಗೆ ಬಿಗ್ ಬಾಸ್ ಮನೆ ಹೊರಗೆ ಮಾತ್ರವಲ್ಲದೆ ಒಳಗೂ ಕೂಡ ಸಾನಿಯಾ ರವರನ್ನು ಮತ್ತೆ ಬಿಗ್ ಬಾಸ್ ಮನೆಗೆ ತರುವಂತಹ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಮನೆಯಿಂದ ಹೊರಬಂದ ದಿನದಿಂದ ಹಿಡಿದು ಇಲ್ಲಿಯವರೆಗೂ ರೂಪೇಶ್ ಶೆಟ್ಟಿ ವಿಲವಿಲ ಒದ್ದಾಡುತ್ತಿದ್ದು,
ಮನೆಯಲ್ಲಿ ಅವರೊಟ್ಟಿಗೆ ಕಳೆದಂತಹ ಪ್ರತಿಯೊಂದು ನೆನಪನ್ನು ಹೇಳುತ್ತಾ ಕಣ್ಣೀರು ಹಾಕುತ್ತಿದ್ದಾರೆ. ಇದಕ್ಕೆ ಹೊರ ಇರುವಂತಹ ಸಾನಿಯಾ ಸ್ಪಂದಿಸಿದ್ದು ಹೇಗೆ? ಬಿಗ್ ಬಾಸ್ ಮನೆಗೆ ಮತ್ತೆ ಸಾನಿಯಾ ಎಂಟ್ರಿ ನೀಡುತ್ತಾರಾ? ಎಂಬ ಮಾಹಿತಿಯನ್ನು ನಾವಿವತ್ತು ಈ ಫೋಟೋದ ಮುಖಾಂತರ ತಿಳಿಸಲಿದ್ದೇವೆ.
ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೆ ಬಿಗ್ ಬಾಸ್ ಮನೆಯ ಲವ್ ಬರ್ಡ್ಸ್ ಎಂದ ಕರೆಸಿಕೊಳ್ಳುತ್ತಿದಂತಹ ಸಾನಿಯಾ ಮತ್ತು ರೂಪೇಶ್ ಶೆಟ್ಟಿ ಸದ್ಯ ದೂರ ದೂರ ಆಗಿದ್ದಾರೆ. ಓಟಿಟಿ ಸೀಸನ್ ನಿಂದಲೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿಕೊಳ್ಳುತ್ತಾಹಾಗೂ ಯಾವುದೇ ಆಟದಲ್ಲಿಯೂ ಬಿಟ್ಟು ಕೊಡದೆ ಬಹಳ ಒಗ್ಗಟ್ಟಿನಿಂದ ಇರುತ್ತಿದ್ದರು. ಅಷ್ಟೇ ಅಲ್ಲದೆ ಇವರಿಬ್ಬರ ಹೆಸರಿನಲ್ಲಿ ಸಾಕಷ್ಟು ಪ್ಯಾನ್ ಪೇಜ್ ಗಳು ಕೂಡ ಕ್ರಿಯೇಟ್ ಆಗಿವೆ. ಹೀಗೆ ಅಪಾರ ಅಭಿಮಾನಿ ಬಳಗವನ್ನು ಹೊಂದಿದಂತಹ ಸಾನ್ಯ ಮತ್ತು ರೂಪಿ ಜೋಡಿ ಸದ್ಯದ ದೂರಾಗಿದ್ದು,
ಮನೆಯಿಂದ ಹೊರ ಬಂದಿರುವಂತಹ ಸಾನ್ಯ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಡನೆ ಕನೆಕ್ಟ್ ಆಗಿದ್ದಾರೆ. ಹೌದು ಗೆಳೆಯರೇ “ಬದಲಾಗಲು ಸಾಧ್ಯವೇ ಇಲ್ಲ ರೂಪಿ! ಆ ಮುದ್ದು ನಗುವಾಗಿ ನಿನ್ನಲ್ಲಿ ನಾನು ಇದು ಅಂತರವಲ್ಲ ನಿನ್ನ ಶಕ್ತಿಯಾಗಿರಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ.
ನನ್ನ ರಾಕ್ ಸ್ಟಾರ್ ರೂಪೇಶ್” ಎಂದು ಸಾನಿಯಾ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಹೀಗೆ ರೂಪ ಶೆಟ್ಟಿ ಕೂಡ ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಡುತ್ತಾ ಪದೇ ಪದೇ ಸಾನಿಯಾ ರವರ ಹೆಸರನ್ನು ಹೇಳುತ್ತಾ ಗೋಳಾಡುತ್ತಿರುವುದನ್ನು ನೋಡಿದಂತಹ ಪ್ರೇಕ್ಷಕರು ಕಂಗೆಟ್ಟು ಹೋಗಿದ್ದಾರೆ. ಅಷ್ಟೇ ಅಲ್ಲದೆ ಟ್ವಿಟರ್ ನಲ್ಲಿಯೂ ಬ್ರಿಗ್ ಬ್ಯಾಕ್ ಸಾನಿಯಾ ಟು ಬಿ ಬಿ ಕೆ 9 ಎಂಬ ಟ್ರೆಂಡ್
ಕೂಡ ಚಾಲ್ತಿಯಲ್ಲಿದ್ದು, ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವಂತಹ ಬಿಗ್ ಬಾಸ್ ಟೀಮ್ ಮುಂದೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ನಿಮ್ಮ ಅಭಿಪ್ರಾಯದ ಪ್ರಕಾರ ಸಾನಿಯಾ ಮತ್ತೆ ಬಿಗ್ ಬಾಸ್ ಮನೆಗೆ ಬರಬೇಕಾ / ಬರಬಾರದ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.