ಸೆಲೆಬ್ರಿಟಿಗಳಿಗೆ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಏಕೈಕ ಮಾಧ್ಯಮ ಅಂದರೆ ಅದು ಸಾಮಾಜಿಕ ಜಾಲತಾಣ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಬಳಸುತ್ತಾರೆ. ಕೇವಲ ತಮ್ಮ ಫೋಟೋಗಳನ್ನು, ವಿಡಿಯೋಗಳನ್ನು ಶೇರ್ ಮಾಡಲು ಮಾತ್ರವಲ್ಲದೆ, ತಮ್ಮ ಅಭಿಮಾನಿಗಳ ಜೊತೆ ಮಾತನಾಡಲು ಕೂಡ ಸೋಶಿಯಲ್ ಮೀಡಿಯಾ ಬಳಸುತ್ತಾರೆ. ಅದರಲ್ಲೂ ಇತ್ತೀಚೆಗೆ ಇನ್ಸ್ಟಾಗ್ರಾಂ ನಲ್ಲಿ ಆಸ್ಕ್ ಮಿ ಎನಿಥಿಂಗ್ ಅಥವಾ ಆಸ್ಕ್ ಮಿ ಸಮ್ ಥಿಂಗ್ ಅನ್ನುವ ಸೆಶನ್ ನಡೆಸುತ್ತಾರೆ.
ಇಂತಹ ಸೆಶನ್ಸ್ ಅವರ ಅಭಿಮಾನಿಗಳಿಗೂ ಖುಷಿ ಕೊಡುತ್ತದೆ. ಯಾಕಂದರೆ ಅಭಿಮಾನಿಗಳಿಗೆ ತಮ್ಮ ನಟರ ಬಗ್ಗೆ ನಟಿಯರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಅವುಗಳನ್ನು ಇಂತಹ ಸೆಶನ್ಸ್ ಬಗೆ ಹರಿಸುತ್ತದೆ. ಇನ್ನು ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯರ ಕುರಿತಾಗಿ ಒಳ್ಳೆಯ ಪ್ರಶ್ನೆಗಳನ್ನು ಕೇಳುತ್ತಾರೆ. ಉಡುಗೆ, ತೊಡುಗೆ ಬಗ್ಗೆ, ಊಟ ತಿಂಡಿ ಬಗ್ಗೆ, ಸಿನಿಮಾ ಬಗ್ಗೆ, ಇಷ್ಟದ ವಸ್ತುಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ.
ಆದರೆ ಕೆಲ ಕೀಳು ಮನಸ್ಥಿತಿಯ ನೆಟ್ಟಿಗರು ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಾರೆ. ಇಂತಹ ಪ್ರಶ್ನೆಗಳಿಗೆ ಕೆಲ ನಟಿಯರು ತಲೆಕೆಡಿಸಿಕೊಳ್ಳದೆ ಸುಮ್ಮನೆ ಇರುತ್ತಾರೆ, ಇನ್ನು ಕೆಲವರು ಮುಟ್ಟಿ ನೋಡುಕೊಳ್ಳುವಂತೆ ಉತ್ತರ ನೀಡುತ್ತಾರೆ. ಇದೇ ರೀತಿ ಕನ್ನಡದ ಸಿನಿಮಾ ರಂಗದಲ್ಲಿ ಕ್ಯೂಟ್ ಗೋಸ್ಟ್ ಎಂದೇ ಕರೆಯಲ್ಪಡುವ ನಟಿ ಶಾನ್ವಿ ಶ್ರೀವಾತ್ಸವ್ ಕೂಡ ಇನ್ಸ್ಟಾಗ್ರಾಂ ನಲ್ಲಿ ಆಸ್ಕ್ ಮಿ ಸಮ್ ಥಿಂಗ್ ಸೆಶನ್ ನಡೆಸಿದ್ದರು. ಈ ವೇಳೆ ಅನೇಕರು ಬೇರೆ ಬೇರೆ ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳು ಹೀಗಿವೆ.
ಕನ್ನಡ ಹೇಗೆ ಕಲಿತಿರಿ? ಜನರನ್ನು, ಸಿಬ್ಬಂದಿಗಳು, ಸೆಟ್‌ನಲ್ಲಿ ಮಾತನಾಡುತ್ತಾ ಕಲಿತೆ, ಆದರೂ ತಪ್ಪುಗಳನ್ನು ಮಾಡುತ್ತೇನೆ. ಕನ್ನಡ ಕಲಿಯಲು ಖುಷಿಯಾಗುತ್ತದೆ. ಮುಂದಿನ ಸಿನಿಮಾಗಳ ಬಗ್ಗೆ ಹೇಳಿ ಶೀಘ್ರದಲ್ಲಿಯೇ, ಅಡುಗೆ ಮಾಡೋದು ಇಷ್ಟಾನಾ?ಹೌದು. ಆವಾಗಾವಾಗ ಮಾಡಲು ಬಯಸ್ತೀನಿ, ಪ್ರತಿದಿನ ಅಲ್ಲ.ಚರ್ಮದ ಕಾಂತಿಯ ರಹಸ್ಯ ಏನು? ಹೆಚ್ಚು ನೀರು ಕುಡಿಯುತ್ತೇನೆ, ಹಣ್ಣು ತಿನ್ನುತ್ತೇನೆ. 8 ಗಂಟೆ ನಿದ್ದೆ ಮಾಡುತ್ತೇನೆ. ಎಣ್ಣೆ, ಮಸಾಲೆ ಪದಾರ್ಥವಿರುವ ಆಹಾರ ಕಡಿಮೆ ತಿನ್ನುತ್ತೇನೆ.
ಕೂದಲು ಶಾರ್ಟ್ ಆಗಿ ಕಟ್ ಮಾಡಿಕೊಳ್ತೀರಾ?ಇಲ್ಲ, ಮಾಸ್ಟರ್ ಪೀಸ್ 2 ಸಿನಿಮಾ ಯಾವಾಗ?ರಾಕಿಂಗ್ ಸ್ಟಾರ್ ಯಶ್ ಕೇಳಿ, 40 ವರ್ಷ ಆಗುವವರೆಗೂ ಮದುವೆ ಆಗಬೇಡಿ..ನೀವೊಬ್ಬರೇ ನನ್ನ ಅರ್ಥ ಮಾಡಿಕೊಂಡಿರುವುದು ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸಲು ಕನ್ನಡ ಚಿತ್ರರಂಗ ಎಷ್ಟು ಸಹಾಯ ಮಾಡಿದೆ 80%. ಹೀಗೆ ಕಾಮನ್ ಪ್ರಶ್ನೆಗಳನ್ನು ಅನೇಕರು ಕೇಳಿದ್ದಾರೆ.
ಅವುಗಳಿಗೆ ಶಾನ್ವಿ ಶ್ರೀವಾತ್ಸವ್ ಖುಚಿಯಿಂದಲೇ ಉತ್ತರಿಸಿದ್ದಾರೆ. ಆದರೆ ಯಾರೋ ಒಬ್ಬ ಮಾತ್ರ ನೀವು ವರ್ಜಿನ್? ಅನ್ನುವ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಯಾವುದೇ ಉತ್ತರ ಕೊಡದೆ ಶಾನ್ವಿ ಶ್ರೀವಾತ್ಸವ್ ಚಪ್ಪಾಳೆ ತಟ್ಟಿ, ಎಂಥಹ ಪ್ರಶ್ನೆ ಕೇಳ್ತಿದ್ದೀರಾ ಎಂದು ಮುಖಭಾವದಲ್ಲಿಯೇ ಉತ್ತರಿಸಿದ್ದಾರೆ. ಶಾನ್ವಿ ಅವರು ಮೊದಲು ಕನ್ನಡದಲ್ಲಿ ಚಂದ್ರಲೇಖಾ ಸಿನಿಮಾದಲ್ಲಿ ನಟಿಸಿದ್ದರು.
ಅದರಲ್ಲಿ ದೆವ್ಚದ ಪಾತ್ರ ಮಾಡಿದ್ದ ಕಾರಣ ಅವರನ್ನು ಕ್ಯೂಟ್ ಗೋಸ್ಟ್ ಎಂದೇ ಕರೆಯುತ್ತಿದ್ದರು. ಅದಾದ ನಂತರ, `ಭಲೇ ಜೋಡಿ’, `ಸುಂದರಾಂಗ ಜಾಣ’, `ಸಾಹೇಭ’, ತಾರಕ್’, `ಮಫ್ತಿ’, ‘ದಿ ವಿಲನ್’, ‘ ಗೀತಾ’, ‘ಅವನೇ ಶ್ರೀ ಮನ್ನಾರಾಯಣ’, ಚಿತ್ರದಲ್ಲಿ ನಟಿಸಿದ್ದಾರೆ. ಶಾನ್ವಿ ಕುರಿತ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.