ಬಿಗ್ ಬಾಸ್ ಮನೆಯಲ್ಲಿ ನನ್ನ ಗಂಡನನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದ ತುಕಾಲಿ ಸಂತು ಪತ್ನಿ ಮಾನಸ..

ಬಿಗ್ ಬಾಸ್ ಸೀಸನ್ 10 ಶುರುವಾಗಿದ್ದೆ ಆಗಿದ್ದು ವೀಕ್ಷಕರಿಗೆ ಮನರಂಜನೆಯ ರಸದೌತಣ ಶುರುವಾಯ್ತು ಅಂತ ಹೇಳಬಹುದು. ಆದ್ರೆ ಮೊದಲ ವಾರವೇ ತುಕಾಲಿ ಸಂತು ಅವ್ರ ತುಕಾಲಿ ಕಾಮಿಡಿ, ಪ್ರತಾಪ್ ಗೆ ಮಾಡಿದ ಅವಮಾನದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತುಕಾಲಿ ವಿರುದ್ಧ ಟೀಕೆಗಳು ಶುರುವಾದ್ವು, ಆದ್ರೂ ತುಕಾಲಿ ಸಂತು 2ನೇ ವಾರ ಮನೆಯಿಂದ ಹೊರ ಹೋಗದೆ ಅತೀ ಹೆಚ್ಚು ಓಟ್ ಪಡೆದು ಸೇಫ್ ಆದ್ರು. ಅವರನ್ನ ಇಷ್ಟ ಪಡದವರ ಮಧ್ಯೆ ಅವ್ರನ್ನ ಮತ್ತಷ್ಟು ಇಷ್ಟ ಪಡುವ ಜನ ಹೆಚ್ಚು ಇದ್ದಾರೆ ಅನ್ನೋದು ಇದರಿಂದ ಗೊತ್ತಾಗುತ್ತಿದೆ. ಆದ್ರೂ ಕೂಡ ಕಿಚ್ಚನ ಪಂಚಾಯಿತಿಯಲ್ಲಿ ಮನೆಯ ಸದಸ್ಯರೆಲ್ಲರೂ ತುಕಾಲಿ ಕಾಮಿಡಿ ಇಷ್ಟ ವಾಗುತ್ತಿಲ್ಲ ಅಂದ್ರು ಕಿಚ್ಚ ಕೂಡ ಇನ್ ಡೈರೆಕ್ಟ ಆಗಿ ವಾರ್ನ್ ಮಾಡುದ್ರು. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ತನ್ನ ಗಂಡನನ್ನ ಟಾರ್ಗೆಟ್ ಮಾಡಲಾಗ್ತಿದೆ ಅಂತ ತುಕಾಲಿ ಸಂತು ಪತ್ನಿ ಚಿನ್ನು ಆರೋಪ ಮಾಡ್ತಿದ್ದಾರೆ.

ಹೌದು ಮನೆಯಲ್ಲಿ ಮೊದಲ ವಾರದ ಕೊನೆಯಲ್ಲಿ ಹಲವು ಸದಸ್ಯರು ತುಕಾಲಿ ಸಂತು ವಿರುದ್ಧ ತಿರುಗಿ ಬಿದ್ದಿದ್ದರು. ಸಂತು ಅವರು ಮಾಡುವ ಹಾಸ್ಯ ಸರಿಬರುತ್ತಿಲ್ಲ, ಅವರು ವ್ಯಂಗ್ಯ ಮಾಡುತ್ತಾರೆ, ಬೇಸರವಾಗುವಂತೆ ಹಾಸ್ಯ ಮಾಡುತ್ತಾರೆ ಎಂದೆಲ್ಲ ಹೇಳಿದ್ದರು. ನಟ ಸುದೀಪ್ ಸಹ ತುಕಾಲಿ ಸಂತು ಅವರ ಹಾಸ್ಯದ ಬಗ್ಗೆ ಪರೋಕ್ಷವಾಗಿ ಟೀಕೆ ಮಾಡಿದ್ದರು.

Images Credit: Colors Kannada

ನಿಮ್ಮೆಲ್ಲರಿಗೂ ಗೊತ್ತಿರುವಂತೆ ಬಿಗ್​ಬಾಸ್ ಮನೆಯಲ್ಲಿರುವ ತುಕಾಲಿ ಸಂತು ಆಗಾಗ ತಮ್ಮ ಪತ್ನಿಯನ್ನುದ್ದೇಶಿಸಿ ಚಿನ್ನಿ-ಚಿನ್ನಿ ಎನ್ನುತ್ತಾ ಮಾತನಾಡುತ್ತಿರುತ್ತಾರೆ. ಹಬ್ಬ ಮಾಡು, ಪೂಜೆ ಮಾಡು ಎಂದೆಲ್ಲ ಬಿಗ್​ಬಾಸ್ ಮನೆಯಿಂದಲೇ ನಿರ್ದೇಶನ ನೀಡುತ್ತಿರುತ್ತಾರೆ. ತುಕಾಲಿ ಸಂತು ಹಾಗೂ ಅವರ ಪತ್ನಿಯ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇದೀಗ ಗಂಡನ ಹುಚ್ಚು ಕಾಮಿಡಿ ಸಹಿಸದ ಮನೆಯವರು ಸಂತು ವಿರುದ್ಧ ಕಿಚ್ಚನಿಗೆ ನೇರವಾಗೆ ಆರೋಪವನ್ನ ಮಾಡ್ತಾ ಇದ್ದಾರೆ. ಇದನ್ನ ಸಹಿಸಲಾಗದ ತುಕಾಲಿ ಸಂತು ಪತ್ನಿ ಮಾನಸ ಈ ಬಗ್ಗೆ ಮಾತನಾಡಿದ್ದು, ತುಕಾಲಿ ಸಂತು ಅವರನ್ನು ಟಾರ್ಗೆಟ್ ಮಾಡಿರುವುದು ಕಂಡು ಬಹಳ ಬೇಸರವಾಯ್ತು ಎಂದಿದ್ದಾರೆ. ಮಾತ್ರವಲ್ಲದೆ, ತುಕಾಲಿ ಸಂತು ಅವರು ತಪ್ಪು ಮಾಡಿದ್ದಾರೆ ಎಂದರೆ ಅವರಿಗೆ ತಿದ್ದುಕೊಳ್ಳಲು ಅವಕಾಶವನ್ನೂ ನೀಡಬೇಕು ಎಂದಿದ್ದಾರೆ. ನನ್ನ ಗಂಡ ಮುಗ್ದ ಅವ್ರು ಎಲ್ಲರನ್ನ ನಗಿಸಲು ಕಾಮಿಡಿ ಮಾಡ್ತಾರೆ ಅಷ್ಟೇ ಆದ್ರೆ ಅಲ್ಲಿರುವವರು ಅದನ್ನೇ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿದ್ದಾರೆ. ತಪ್ಪಿದ್ದರೆ ತಿದ್ದುಕೊಳ್ಳಲು ಅವಕಾಶ ಕೊಡಿ ಅದನ್ನ ಬಿಟ್ಟು ಅವ್ರನ್ನ ಟಾರ್ಗೆಟ್ ಮಾಡಬೇಡಿ ಎಂದಿದ್ದಾರೆ.

ತುಕಾಲಿ ಸಂತು ಅವರನ್ನ ಟಾರ್ಗೆಟ್ ಮಾಡ್ತಿದ್ದಾರೆ

ಇನ್ನು ತುಕಾಲಿ ಸಂತು ಅವರ ಪತ್ನಿ ಖಾಸಗಿ ಚಾನೆಲ್ ಒಂದರಲ್ಲಿ ಮಾತನಾಡಿದ್ದು ತನ್ನ ಪತಿಯನ್ನ ಟಾರ್ಗೆಟ್ ಮಾಡ್ಲಾಗುತ್ತಿದೆ. ನನ್ನ ಪತಿ ತಪ್ಪು ಮಾಡೋದಿಲ್ಲ, ಎಲ್ಲರನ್ನ ನಗಿಸುವ ಪ್ರಯತ್ನವನ್ನು ಮಾಡುತ್ತಾರೆ ಆದ್ದರಿಂದಲೇ ವೀಕ್ಷಕರು ಅವರನ್ನ ಮೆಚ್ಚಿಕೊಂಡಿದ್ದಾರೆ. ಆದ್ರೆ ಅದನ್ನು ಸಹಿಸಿಕೊಳ್ಳದ ಮನೆಯವರು ಅವರನ್ನ ಬಿಗ್ ಬಾಸ್ ಮನೆಯಲ್ಲಿಯೇ ಟಾರ್ಗೆಟ್ ಮಾಡ್ತಾ ಇದ್ದಾರೆ. ಅವರ ಜೊತೆಗೆ ಕೂತು ಕಾಲ ಹರಣ ಮಾಡಿ ಹರಟೆ ಹೊಡೆದು ಕಾಮಿಡಿ ಮಾಡುತ್ತಾರೆ ಆದರೆ ಕಿಚ್ಚ ಸುದೀಪ್ ಅವರ ಮುಂದೆ ನನ್ನ ಗಂಡನದ್ದೇ ತಪ್ಪು ಅನ್ನೋ ರೀತಿ ಮಾತನಾಡುತ್ತಾರೆ. ಹೀಗಾಗಿ ಎಲ್ಲೋ ಒಂದು ಕಡೆ ನನ್ನ ಗಂಡನನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ ಮನೆಯವರೆಲ್ಲರೂ ಒಂದು ಕಡೆ ಆದ್ರೆ ನನ್ನ ಗಂಡನನ್ನ ಒಂದು ಮಾಡ್ತಾ ಇದ್ದಾರೆ.

ನನ್ನ ಗಂಡನದ್ದು ತಪ್ಪಿದ್ರೆ ತಿದ್ದುಕೊಳ್ಳಲು ಅವಕಾಶ ಕೊಡಿ ಅದನ್ನ ಬಿಟ್ಟು ಈ ರೀತಿ ಮಾಡೋದು ಸರಿಯಲ್ಲ. ಈ ರೀತಿ ಟಾರ್ಗೆಟ್ ಮಾಡ್ತಿರೋದ್ನ ಕಂಡು ನನಗೆ ಸಹಿಸಿಕೊಳ್ಳಕ್ಕೆ ಆಗ್ತಾ ಇಲ್ಲ ಅಂತ ಹೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗ್ತಾ ಇದ್ದಂತೆ ಸಾಕಷ್ಟು ಜನರು ಸಾಕಷ್ಟು ರೀತಿಯಲ್ಲಿ ಕಮೆಂಟ್ಸ್ ಮಾಡ್ತಾ ಇದ್ದಾರೆ. ಕೆಲವೊಬ್ಬರಂತು ಅತಿಯಾದ್ರೆ ಅಮೃತನು ವಿಷವಾಗುತ್ತೆ ಹಾಗೇನೆ ನಿಮ್ಮ ಗಂಡ ಮಾಡುವ ಕಾಮಿಡಿ ಅಲ್ಲಿರ್ತಕ್ಕಂತವರಿಗೆ ನೋವುಂಟು ಮಾಡುತ್ತೆ ನೋಡಿ ಮಾಡಿ ಗೆಳೆತನ ಮಾಡು ಅನ್ನೋ ರೀತಿ ನಿಮ್ಮ ಗಂಡನು ಯೋಚನೆ ಮಾಡಿ ಇನ್ನೊಬ್ಬರ ಬಗ್ಗೆ ಮಾತನಾಡಬೇಕು. ಹೀಗೆ ಸಾಕಷ್ಟು ತರೆವರಿ ಕಮೆಂಟ್ಸ್ ಅನ್ನು ಮಾಡ್ತಾ ಇದ್ದಾರೆ.

You might also like

Comments are closed.