Sanjana-Burli

ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸ್ನೇಹಾ ಅವರು ನಿಜಜೀವನದಲ್ಲಿ ಎಂತ ಹಾಟ್ ಲುಕ್ ಗೊತ್ತಾ

Entertainment/ಮನರಂಜನೆ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಘಾಟಿ ನಾಯಕಿ ಸ್ನೇಹಾ ನಿಮಗೆಲ್ಲರಿಗೂ ಗೊತ್ತೇ ಇದೆ. ಸ್ನೇಹಾ ನಿಜವಾದ ಹೆಸರು ಸಂಜನಾ ಬುರ್ಲಿ. ನಿಜ ಜೀವನದಲ್ಲಿ ಎಂಜಿನಿಯರಿಂಗ್ ಓದುತ್ತಿರುವ ಸಂಜನಾಗೆ ಪುಟ್ಟಕ್ಕನ ಮಕ್ಕಳು ಸೀರಿಯಲ್’ ಮೊದಲ ಧಾರಾವಾಹಿಯಲ್ಲ. ಈ ಹಿಂದೆಯೂ ಲಗ್ನ ಪತ್ರಿಕೆ ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದರು. ಸಂಜನಾ ಬುರ್ಲಿ ಹಲವು ವರ್ಷಗಳಿಂದ ರಂಗಭೂಮಿಯಲ್ಲಿದ್ದಾರೆ.

ರಂಗಭೂಮಿ ಕಲಾವಿದೆಯಾಗಿರುವ ಸಂಜನಾ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕೇವಲ ಕನ್ನಡ ಅಷ್ಟೇ ಅಲ್ಲದೇ ತಮಿಳಿನಲ್ಲಿಯೂ ನಟಿಸಿದ್ದಾರೆ. ಇನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು, ಕೆಎಎಸ್ ಆಗುವ ಕನಸಿನ ಹಾದಿಯಲ್ಲಿದ್ದಾಳೆ. ಊರಿನಲ್ಲೆಲ್ಲಾ ನ್ಯಾಯ ಮಾತಾಡುತ್ತಾಳೆ. ಎಲ್ಲರಿಗೂ ಇವಳನ್ನು ಕಂಡರೆ ಸ್ವಲ್ಪ ಭಯವೇ. ತನ್ನ ಜೋರು ಬಾಯಿಂದಲೇ ಪ್ರೇಕ್ಷಕರ ಮನಗೆದ್ದಿದ್ದಾಳೆ.

Twitter 上的 NammaHeroines:"Gorgeous #SanjanaBurli @_.sanjana.burli #Heroine #KannadaSerialActress #smallscreencelebrity #smallscreenheroine #KannadaHeroine #KannadaCinema #TakeOneCinemazz #NammaHeroines https://t.co/c23d7PuG67" / Twitter

ಸಂಜನಾ ಬುರ್ಲಿ ಬೆಂಗಳೂರಿನಲ್ಲೇ ಓದಿ ಬೆಳೆದ ಚೆಲುವೆ. ಇವರ ತಂದೆ ಅಜಿತ್ ಬುರ್ಲಿ ಮತ್ತು ತಾಯಿ ಭಾರತಿ. ಎಂಜಿನಿಯರ್ ಆಗಿರುವ ಸಂಜನಾ ಬುರ್ಲಿ ಎಂಜಿನಿಯರ್ ಓದುವಾಗ ಶೂಟಿಂಗ್ ಹಾಗೂ ಕಾಲೇಜು ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದರು. ರ್ಯಾಂಕ್ ಸ್ಟುಡೆಂಟ್ ಆಗಿರುವ ಸಂಜನಾಗೆ ಓದುವುದು ದೊಡ್ಡ ಕನಸಾದರೆ, ನಟನೆ ಪ್ಯಾಷನ್ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಎಂಜಿನಿಯರ್ ಓದಿ ಈಗ ನಟನೆಯನ್ನೇ ತಮ್ಮ ವೃತ್ತಿ ಬದುಕನ್ನಾಗಿ ಆರಿಸಿಕೊಂಡಿದ್ದಾರೆ.

ಸಂಜನಾ ಅವರು ಪತ್ತೆದಾರಿ ಪ್ರತಿಭಾ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಬಳಿಕ ಲಗ್ನಪತ್ರಿಕೆ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಆದರೆ ಇದು ಅರ್ಧಕ್ಕೆ ನಿಂತು ಹೋಗಿದ್ದಕ್ಕೆ ಬೇಸರಗೊಂಡಿದ್ದರು. ಇನ್ನು ಸಂಜನಾ ಅವರು ಸಿನಿಮಾಗಳಲ್ಲೂ ನಟಿಸಿದ್ದು, ಸ್ನೇಹರ್ಷಿ ಸಿನಿಮಾ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ರಾಧ ಸರ್ಚಿಂಗ್ ರಮಣ ಮಿಸ್ಸಿಂಗ್ ಎಂಬ ಚಿತ್ರದಲ್ಲೂ ನಟಿಸಿದರು. ಬಳಿಕ ಎವರ್ ಗ್ರೀನ್ ಸ್ಟಾರ್ ಅನಂತ್ ನಾಗ್ ಅವರ ಜೊತೆಗೆ ವೀಕೆಂಡ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ನಾನ್ ವೆಜ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.