ಸಾನಿಯಾ ಮಿರ್ಜಾ

ಮಹತ್ವದ ನಿರ್ಧಾರ ಕೈಗೊಂಡ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ! ಇವರ ನಿರ್ಧಾರಕ್ಕೆ ಕೇಳಿ ತಬ್ಬಿಬ್ಬಾದ ಜನತೆ.!!

Today News / ಕನ್ನಡ ಸುದ್ದಿಗಳು

ಭಾರತದ ಮಹಿಳಾ ಟೆನಿಸ್’ನ ಧ್ರುವತಾರೆ ಸಾನಿಯಾ ಮಿರ್ಜಾ ಅವರಿಗೆ ಅವರದ್ದೇ ಆದ ಅಭಿಮಾನ ಬಳಗ ಇದೆ. 1986 ರ ನವೆಂಬರ್ 15 ರಂದು ಮುಂಬೈನಲ್ಲಿ ಜನಿಸಿದ ಸಾನಿಯಾ ಮಿರ್ಜಾ, ತನ್ನ ಆರನೇ ವರ್ಷದಲ್ಲಿಯೇ ಟೆನ್ನಿಸ್ ತರಬೇತಿ ಪಡೆದಿದ್ದರು. ಮೊದಲ ಬಾರಿಗೆ 2003 ರಲ್ಲಿ ಜೂನಿಯರ್ ವಿಂಬಲ್ಡನ್ ಡಬಲ್ಸ್ ಪಂದ್ಯಾವಳಿ ಗೆದ್ದ ಸಾನಿಯಾ ಅತ್ಯಂತ ಕಿರಿಯ ಭಾರತೀಯ ಕ್ರೀಡಾಪಟು ಮತ್ತು ಪ್ರಥಮ ಮಹಿಳಾ ಪಟುವಾದರು. ಆ ವರ್ಷದಲ್ಲಿಯೇ ಅವರು ವೃತ್ತಿಪರ ಟೆನ್ನಿಸ್ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

2005 ನೆ ಆಸ್ಟ್ರೇಲಿಯಾ ಮುಕ್ತ ಟೆನ್ನಿಸ್ ಪಂದ್ಯಾವಳಿಯ ಮೂರನೆ ಸುತ್ತು ಮತ್ತು ಅಮೇರಿಕಾ ಮುಕ್ತ ಟೆನ್ನಿಸ್ ಪಂದ್ಯಾವಳಿಯ ಗ್ರ್ಯಾಂಡ್ಸ್ಲ್ಯಾಮ್ ಪಂದ್ಯದಲ್ಲಿ ನಾಲ್ಕನೆ ಸುತ್ತಿಗೆ ತಲುಪಿದ ಸಾನಿಯ ಅವರು ಮೊದಲ ಹಾಗು ಎಕೈಕ ಭಾರತೀಯ ಮಹಿಳೆಯಾದರು. 5 ಅಡಿ 7 ಇಂಚು ಎತ್ತರದ ಬಲಗೈ ಆಟಗಾರ್ತಿಯಾದ ಸಾನಿಯಾ ತಮ್ಮ ಉನ್ನತ ಸಾಧನೆಗಳಿಂದಾಗಿ ಭಾರತದೆಲ್ಲಡೆ ಅಭಿಮಾನಿಗಳನ್ನು ಹೊಂದಿದ್ದಾರೆ. 2010 ರಲ್ಲಿ ಸಾನಿಯಾ ಪಾಕಿಸ್ತಾನದ ಕ್ರಿಕೆಟಿಗ ಶೋಯೇಬ್ ಮಲಿಕ್ ಅವರನ್ನು ಮದುವೆಯಾಗಿದ್ದರು.

ಮೂಗುತಿ ಸುಂದರಿಯೆಂದೇ ಕರೆಯಲ್ಪಡುವ ಸಾನಿಯಾ ಮಿರ್ಜಾ ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಗ್ರಾಂಡ್ ಸ್ಲಾಮ್ ನಲ್ಲಿ ಪಾಲ್ಗೊಂಡಿದ್ದು, ಅವರು ಉಕ್ರೆನ್ ನ ನಾಡಿಯಾ ಕಿಚೋನಾಕ್ ಜೊತೆಯಾಗಿ ಕಣಕ್ಕಿಳಿದಿದ್ದರು. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ನಲ್ಲಿ ಮೊದಲ ಸುತ್ತಿನಲ್ಲಿಯೇ ನಾಡಿಯಾ ವಿರುದ್ಧ ಸೋಲು ಕಂಡ ಸಾನಿಯಾ ಮಿರ್ಜಾ, ಜನವರಿ 20 ರಂದು ಮಿಶ್ರ ಡಬಲ್ಸ್ ನಲ್ಲಿ ಯುಎಸ್ಎ ಆಟಗಾರ ರಾಜೀವ್ ರಾಮ್ ಜೊತೆಗೂಡಿ ಕಣಕ್ಕಿಳಿದಿದ್ದರು.

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ನಲ್ಲಿ ಸೋಲು ಕಂಡ ಬೆನ್ನಲ್ಲೇ ಸಾನಿಯಾ ಮಿರ್ಜಾ ಅವರು ಇದೀಗ ತಮ್ಮ ಟೆನ್ನಿಸ್ ವೃತ್ತಿ ಜೀವನದಿದ ನಿವೃತ್ತಿಯಾಗುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ತನ್ನ ದೇಹವು ಮೊದಲಿನಂತೆ ಆಟಕ್ಕೆ ಒಗ್ಗುತ್ತಿಲ್ಲ, ಮೊದಲಿನಂತೆ ಶಕ್ತಿ ಇಲ್ಲ ಎಂದು ಹೇಳಿ ತನ್ನ ಟೆನ್ನಿಸ್ ಲೋಕಕ್ಕೆ ವಿದಾಯ ಹೇಳುತ್ತಿರುವ ಸಾನಿಯಾ ಅವರ ಮಿರ್ಜಾ ಅವರ ಪಾಲಿನ ಕಟ್ಟಕಡೆಯ ಟೆನಿಸ್ ವರ್ಷವಾಗಲಿದೆ. ಇದೀಗ 35 ವರ್ಷ ತುಂಬಿರುವ ಸಾನಿಯಾ ಮಿರ್ಜಾ ಮೊದಲ ಮಗುವಿಗೆ ಜನ್ಮ ನೀಡಿದ ನಂತರ ಸುದೀರ್ಘ ಕಾಲ ಅಂಗಣದಿಂದ ಹೊರ ಉಳಿದಿದ್ದರು.

ಆ ನಂತರ 2019 ರ ಮಾರ್ಚ್ ನಲ್ಲಿ ಮತ್ತೆ ಆಡಲು ಇಳಿದಿದ್ದರು. ಆದರೆ ಇನ್ನು ಮುಂದೆ ತಾನು ಆಡುವುದಿಲ್ಲ, ದೈಹಿಕವಾದ ಶಕ್ತಿ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಇನ್ನು ಮುಂದೆ ಇವರ ಅಪಾರ ಅಭಿಮಾನಿಗಳು ಟೆನ್ನಿಸ್ ಮೈದಾನದಲ್ಲಿ ಸಾನಿಯಾರನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಇದನ್ನೂ ಓದಿ >>>  ಬಾರ್ ಓಪನ್ ಮಾಡಲು ಬಂಡವಾಳ ಎಷ್ಟಿರಬೇಕು? ಲೈಸೆನ್ಸ್ ಪಡೆಯೋದು ಹೇಗೆ,ಇಲ್ಲಿದೆ ಸಂಪೂರ್ಣ ಮಾಹಿತಿ
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...