
ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸಾನಿಯಾ ಅಯ್ಯರ್ ಇತ್ತೀಚೆಗೆ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ. ಫೋಟೋಶೂಟ್, ಸಂದರ್ಶನ ಅಂತ ಬ್ಯುಸಿ ಆಗಿರುವ ಸಾನಿಯಾ ಸೈಕಲ್ ಗ್ಯಾಪ್ ನಲ್ಲಿ ಹೀರೋಯಿನ್ ಆಗುವುದಕ್ಕೂ ಕೂಡ ತಯಾರಿ ನಡೆಸಿದ್ದಾರಂತೆ. ಬಿಗ್ ಬಾಸ್ ಓಟಿಟಿ ಸೀಸನ್ 1ರ ಸ್ಪರ್ಧಿ ಆಗಿದ್ದರು ಸಾನಿಯಾ ಅಯ್ಯರ್. ಬಿಗ್ ಬಾಸ್ ಓ ಟಿ ಟಿ ಟಾಪ್ 4 ಸ್ಪರ್ಧಿಗಳಲ್ಲಿ ಒಬ್ಬ ಸ್ಪರ್ಧಿಯಾಗಿಯೂ ಹೊರಹೊಮ್ಮಿದರು.
ಬಿಗ್ ಬಾಸ್ ಸೀಸನ್ 9ರಲ್ಲಿ ಪ್ರವೀಣರ ಸಾಲಿಗೆ ಸೇರಿದ ಸಾನಿಯಾ ಕೊನೆಗೆ ಬಿಗ್ ಬಾಸ್ ಮನೆಯಿಂದ ಹೊರಬಂದ 6ನೇ ಸ್ಪರ್ಧಿ ಆಗಿದ್ದಾರೆ. ಬಿಗ್ ಬಾಸ್ ಮನೆಯ ಹೊರಗೂ ಒಳಗೂ ಸಾನಿಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಅವರ ಬಗ್ಗೆ ಸಾಕಷ್ಟು ಮಾತುಗಳು ಹರಿದಾಡಿದೆ. ಯಾಕಂದ್ರೆ ಸಾನಿಯಾ ಹಾಗೂ ರೂಪೇಶ್ ಶೆಟ್ಟಿ ತುಂಬಾನೇ ಕ್ಲೋಸ್ ಆಗಿದ್ದವರು. ಕೊನೆಗೆ ಬಿಗ್ ಬಾಸ್ ಸೀಸನ್ 9ರಲ್ಲಿಯೂ ಒಟ್ಟಾಗಿಯೇ ಇದ್ದರು.
ಇವರಿಬ್ಬರನ್ನೂ ಕ್ಯೂಟ್ ಕಪಲ್ ಎಂದೇ ಜನರು ಗುರುತಿಸಿದ್ದಾರೆ. ಇನ್ನು ಸಾನಿಯಾ ರೂಪೇಶ್ ಶೆಟ್ಟಿ ಮೇಲೆ ತನಗೆ ಮನಸ್ಸಿದೆ ಎಂಬಂತಹ ಸಾಕಷ್ಟು ಹಿಂಟ್ ನೀಡಿದ್ದಾರೆ ಆದರೆ ರೂಪೇಶ ಶೆಟ್ಟಿ ಮಾತ್ರ ನಾವಿಬ್ಬರು ಉತ್ತಮ ಫ್ರೆಂಡ್ಸ್ ಎಂದು ಹೇಳಿಕೊಂಡಿದ್ದಾರೆ. ಇವರಿಬ್ಬರ ನಡುವೆ ನಿಜವಾಗಿ ಬರಿ ಸ್ನೇಹ ಇದೆಯಾ ಪ್ರೀತಿನಾ ಅನ್ನೋದು ಬಿಗ್ ಬಾಸ್ ಸೀಸನ್ ಮುಗಿದ ನಂತರ ತಿಳಿಯಬಹುದು.
ಇನ್ನು ಸಾನಿಯಾ ಅಯ್ಯರ್ ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಬಾಲ ನಟಿ ಆಗಿ ಅಭಿನಯಿಸಿದವರು. ಅದಾದ ನಂತರ ಶಿಕ್ಷಣದ ಬಗ್ಗೆ ಗಮನ ಕೊಟ್ಟ ಸಾನಿಯಾ ಮತ್ತೆ ಧಾರಾವಾಹಿಗಳಲ್ಲಿಯೂ ನಟಿಸಿರಲಿಲ್ಲ. ಆದರೆ ಅತ್ಯುತ್ತಮ ಡ್ಯಾನ್ಸರ್ ಆಗಿರುವ ಸಾನಿಯಾ ಅಯ್ಯರ್ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು.
ಇನ್ನು ಡ್ಯಾನ್ಸಿಂಗ್ ಶೋ ನಲ್ಲಿ ಮಹಿಶಾಸುರ ಮರ್ದಿನಿ ಆಗಿ ವೇಷ ಧರಿಸಿದ್ದ ಸಾನಿಯಾ ಮೈ ಮೇಲೆ ದೇವಿ ಆವಾಹನೆ ಆಗಿದ್ದು, ಆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಬಗ್ಗೆ ಸಾನಿಯಾ ಅವರ ತಾಯಿ ದೀಪ ಅಯ್ಯರ್ ಹಾಗೂ ಸಾನಿಯಾ ಖಾಸಗಿ ವಾಹಿನಿಯಲ್ಲಿ ಸಂದರ್ಶನ ನೀಡುವುದರ ಮೂಲಕ ಮಾತನಾಡಿದ್ದಾರೆ. ತನ್ನ ಮಗಳ ಮೇಲೆ ದೇವಿ ಆವಾಹನೆ ಆಗಿದ್ದು ನಿಜ ಎಂದು ದೀಪ ಹೇಳಿದ್ದಾರೆ.
ಸಾನಿಯಾ ಅಯ್ಯರ್ ಅವರು ದೇವಿ ಮೈಮೇಲೆ ಬಂದ ಹಾಗೆ ಇದ್ದದ್ದನ್ನು ನೋಡಿ ಸೆಟ್ ನಲ್ಲಿ ಇದ್ದವರೆಲ್ಲ ಹೆದರಿದ್ದರಂತೆ. ಇನ್ನು ಸಾನಿಯಾ ಅಯ್ಯರ್ ನಾನು ನಿನ್ನ ವೇಷ ಹಾಕಿತ್ತಿದ್ದೇನೆ. ನೀನು ನನ್ನ ಮೈ ಮೇಲೆ ಬರಬೇಕು ಎಂದು ದೇವಿಯ ಬಳಿ ಪ್ರಾರ್ಥಿಸಿದ್ದೆ ಎಂದಿದ್ದಾರೆ. ಸಾನಿಯಾ ಅಯ್ಯರ್ ಹಾಗೂ ಅವರ ಮನೆಯವರು ಆಧ್ಯಾತ್ಮ ಹಾಗೂ ದೇವರ ಬಗ್ಗೆ ಹೆಚ್ಚು ನಂಬಿಕೆ ಇಟ್ಟುಕೊಂಡವರು.
ಹಾಗಾಗಿ ದೇವಿ ಆವಾಹನೆ ಆಗಿರಬಹುದು ಎಂದು ಜನ ಮಾತನಾಡುತ್ತಿದ್ದಾರೆ. ಇನ್ನು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಅನುಭವವನ್ನೂ ಕೂಡ ಹಂಚಿಕೊಂಡಿದ್ದಾರೆ ಸಾನಿಯಾ. ನಾನೂ ಕೂಡ ಕಾಸ್ಟಿಂಗ್ ಕೌಚ್ ನ ಕಹಿ ಅನುಭವವನ್ನು ಹೊಂದಿದ್ದೇನೆ. ಆದರೆ ಅದೆಲ್ಲವನ್ನೂ ನಾನು ಮೆಟ್ಟಿ ನಿಂತಿದ್ದೇನೆ. ಸಿನಿಮಾದಲ್ಲಿ ನಟಿಸಲು ಇನ್ನಷ್ಟು ತಯಾರಿ ನಡೆಸಿದ್ದೇನೆ ಎಂದಿದ್ದಾರೆ. ಸಾನಿಯಾಗೆ ಸದ್ಯ ಹಿರೋಯಿನ್ ಅಗಿ ನಟಿಸುವ ಹಂಬಲ ಇರುವುದಂತೂ ಸತ್ಯ. ಯಾವ ಸಿನಿಮಾದ ಮೂಲಕ ಬೆಳ್ಳೆತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೋ ಕಾದು ನೋಡಬೇಕು.
Comments are closed.