ಕನ್ನಡ ಖ್ಯಾತ ಮನರಂಜನಾ ಕಾರ್ಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಧಾರಾವಾಹಿಗಳ ಪೈಕಿ ಪುಟ್ಟಗೌರಿ ಧಾರಾವಾಹಿಯೂ ಆಕಾಲದಲ್ಲಿ ಒಂದು ದೊಡ್ಡ ಹಿಟ್ ಧಾರವಾಹಿ ಅಂತಾನೇ ಹೇಳಬಹುದು. ಹೌದು ಅಷ್ಟೇ ಅಲ್ಲದೆ ಈ ಧಾರಾವಾಹಿ ನೋಡುವುದಕ್ಕೆ ಕರ್ನಾಟಕದ ಸಾಕಷ್ಟು ಅಭಿಮಾನಿಗಳು ಕೂಡ ಕಾತುರದಿಂದ ಕಾದು ಕುಳಿತಿದ್ದರು ಎಂದು ಹೇಳಿದರೆ ಖಂಡಿತಾ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಈ ಧಾರಾವಾಹಿ ಪ್ರಖ್ಯಾತಿ ಗಳಿಸಿತ್ತು ಎನ್ನಬಹುದು.
ಇನ್ನು ಅದರಲ್ಲಿಯೂ ಕೂಡ ಬಾಲ್ಯ ವಿವಾಹದ ಬಗ್ಗೆ ಜಾಗೃತಿ ವಹಿಸುವಂತಹ ಟಾಪಿಕ್ ಒಂದನ್ನು ಇಟ್ಟುಕೊಂಡಿದ್ದಂತಹ ಈ ಧಾರಾವಾಹಿ ಆ ದಿನದಲ್ಲಿ ಎಲ್ಲರ ಜನ ಮನ್ನೆಣೆಯನ್ನು ಗಳಿಸಿಕೊಂಡಿತ್ತು ಎನ್ನಬಹುದು. ಇನ್ನು ವಿಶೇಷವೇನೆಂದರೆ ಈ ಧಾರಾವಾಹಿಯಲ್ಲಿ ನಟನೆ ಮಾಡಿದಂತಹ ಪುಟ್ಟಗೌರಿ ಪಾತ್ರಧಾರಿಯ ಸಾನ್ಯಾ ಅಯ್ಯರ್. ಹೌದು ಈಕೆಯ ಮುಗ್ಧತೆ ತುಂಟು ಮಾತು ಹಾಗೂ ಆಕೆ ಮಾಡುತ್ತಿದ್ದಂತಹ ತರಲೇ ಆಕೆಗೆ ಇದ್ದಂತದ ಪ್ರಬುದ್ಧತೆ ಇವುಗಳನ್ನು ನೋಡಿದಂತಹ ಅಭಿಮಾನಿಗಳು ಸಾನ್ಯಾ ಅವರ ನಟನೆಗೆ ಮಾರು ಹೋಗಿದ್ದರು ಎನ್ನಬಹುದುಆದರೆ ಮಾತ್ರ ಧಾರವಾಹಿ ಮುಂದುವರಿಸಬೇಕಾದ ಕಾರಣದಿಂದಾಗಿ ಪುಟ್ಟಗೌರಿಯ ಪಾತ್ರದಿಂದ ಹೊರಬಂದಂತಹ ಸಾನ್ಯಾ ಅವರು ತಮ್ಮ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ.
ಹೌದು ಆ ಪಾತ್ರಕ್ಕೆ ರಂಗ ಕಲಾವಿದೆ ಆದಂತಹ ರಂಜನಿ ರಾಘವನ್ ಅವರು ಬರಬೇಕಾಗುತ್ತದೆ ಇಲ್ಲಿಂದ ಧಾರವಾಹಿ ಮತ್ತೊಂದು ತಿರುವನ್ನು ಪಡೆದುಕೊಂಡಿದ್ದು ಇದು ಒಂದು ಕಡೆ ಯಾದರೆ ಮತ್ತೊಂದು ಕಡೆ ಸಾನ್ಯಾ ಅಯ್ಯರ್ ರವರು ಈ ಧಾರಾವಾಹಿಯಲ್ಲಿ ನಟಿಸಿದ ಬಳಿಕ ಯಾವ ಧಾರಾವಾಹಿಯಲ್ಲೂ ಕೂಡ ಕಾಣಿಸಿಕೊಳ್ಳಲಿಲ್ಲಆದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಒಂದು ಡ್ಯಾನ್ಸಿಂಗ್ ಕಾರ್ಯಕ್ರಮ ಏರ್ಪಡುತ್ತದೆ. ಹೌದು ಅಲ್ಲಿ ಕಂಟೆಸ್ಟೆಂಟ್ ಆಗಿ ಕಾಣಿಸಿಕೊಳ್ಳುವುದರ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಆಗಿದ್ದು ಪುಟ್ಟಗೌರಿಯ ರೂಪದಲ್ಲಿ ನೋಡಿದಂತಹ ಅಭಿಮಾನಿಗಳಿಗೆ ಸಾನ್ಯಾ ಇಷ್ಟು ದೊಡ್ಡ ಹುಡುಗಿಯಾಗಿದ್ದಾಳೆ ಎಂಬುದನ್ನು ಯಾರಿಂದಲೂ ಸಹ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೂ ಕೂಡ ಪುಟ್ಟ ಪುಟ್ಟ ಮಾತುಗಳನ್ನು ಆಡುತ್ತಲೇ ಬೆಳೆದಂತಹ ಸಾನ್ಯಾ ಅಯ್ಯರ್ ಅವರಿಗೆ ಅಭಿಮಾನಿಗಳ ಆಶೀರ್ವಾದ ಸದಾ ಕಾಲ ಇದ್ದೇ ಇರುತ್ತದೆ ಎನ್ನಬಹುದು.ಸದ್ಯ ಇದೀಗ ವೂಟ್ ನಲ್ಲಿ ಪ್ರಾರಂಭವಾಗಿರುವ ಮಿನಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಮನೆ ಸೇರಿದ್ದು ಯಾರಿಗೂ ಕೂಡ ಸಾನಿಯಾ ರವರು ಬಿಗ್ ಬಾಸ್ ಮನೆಗೆ ಬರುತ್ತಾರೆ ಅಂತ ಊಹೆ ಕೂಡ ಮಾಡಿರಲಿಲ್ಲ ನಿಜಕ್ಕೂ ಕೂಡ ಇದೊಂದು ದೊಡ್ಡ ಸರ್ಪ್ರೈಸ್ ಅಂತಾನೆ ಹೇಳಬಹುದು. ಬಿಗ್ ಬಾಸ್ ಮನೆಗೆ ಬಂದ ಎರಡನೇ ದಿನಕ್ಕೆ ಸಾನ್ಯಾ ಅಯ್ಯರ್ ರವರು ತಮ್ಮ ಜೀವನದಲ್ಲಿ ನಡೆದಂತಹ ಕಹಿ ಘಟನೆ ಒಂದನ್ನು ತಮ್ಮ ಕಂಟೆಸ್ಟೆಂಟ್ಗಳ ಮೂಲಕ ಹೇಳಿಕೊಳ್ಳುವುದರ ಮೂಲಕ ತಮ್ಮ ಮನಸ್ಸಿನಲ್ಲಿ ಇದ್ದಂತಹ ದೀರ್ಘಕಾಲದ ನೋವನ್ನು ಹೊರ ಹಾಕಿದ್ದು ಇವೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಸಾನ್ಯಾ ಅಯ್ಯರ್ ಅವರಿಗೆ ಬಹಳ ಪ್ರತಿಭೆ ಇದೆ ಅಂತಾನೆ ಹೇಳಬಹುದು.
ಹೌದು ಯಾವುದೇ ಕಿರುತರೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದೆ ಇದ್ದರೂ ಸಹ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವುದರ ಮೂಲಕವೇ ಹೆಚ್ಚು ಫ್ಯಾನ್ಸ್ ಅನ್ನು ಗಿಟ್ಟಿಸಿಕೊಂಡಿದ್ದು ಡಬ್ಸ್ಮ್ಯಾಶ್ ಟಿಕ್ ಟಾಕ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣದ ಫ್ಲಾಟ್ ಫಾರಂ ಗಳಲ್ಲಿ ವೀಡಿಯೋಸ್ ಗಳನ್ನು ಮಾಡಿ ಬಿಟ್ಟಿರುವ ಸಾನ್ಯಾ ಐಯರ್ ಅವರಿಗೆ ಲಕ್ಷ ಖಾನ್ ಫಾಲೋವರ್ಸ್ ಇದ್ದಾರೆ. ಅದರಲ್ಲಿಯೂ ಸಹ ಇವರ ಕ್ಯೂಟ್ ವಿಡಿಯೋಗಳನ್ನು ನೋಡಿದರೆ ಯಾರು ಕೂಡ ಲೈಕ್ ಮಾಡದೇ ಮುಂದೆ ಹೋಗುವುದಕ್ಕೆ ಸಾಧ್ಯವೇ ಇಲ್ಲ ಎನ್ನಬಹುದು. ಸದ್ಯಕ್ಕೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಸಾನ್ಯಾ ಅಯ್ಯರ್ ರವರು ಈ ಒಂದು ಕಾರ್ಯಕ್ರಮದಲ್ಲಿ ವಿಜೇತರಾಗುತ್ತಾರೆ ಇಲ್ಲವೋ ಕಾದು ನೋಡಬೇಕಿದೆ.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.