Sania Mirza Divorce News: ಸಾನಿಯಾ ಮಿರ್ಜಾ (Sania Mirza) ದೇಶದ ಹೆಮ್ಮೆಯ ಟೆನಿಸ್ (Tennis) ಆಟಗಾರ್ತಿ ಎಂದು ಹೇಳಬಹುದು. ಅನೇಕ ಪ್ರಶಸ್ತಿಗಳನ್ನ ವಿನ್ ಆಗುವುದರ ಮೂಲಕ ಭಾರತಕ್ಕೆ ಅನೇಕ ಮೆಡಲ್ ತಂದುಕೊಟ್ಟ ಸಾನಿಯಾ ಮಿರ್ಜಾ ಅವರು ದೇಶದಲ್ಲಿ ಬೇರೆಬೇರೆ ದೇಶದಲ್ಲಿ ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ದಾರೆ.
ಆಟದ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿ ಇರುವ ಸಾನಿಯಾ ಮಿರ್ಜಾ ಅವರು ಆಗಾಗ ತಮ್ಮ ಶೋಯೆಬ್ ಮಲಿಕ್ (Shoaib Malik) ಮತ್ತು ಮಗನ ಫೋಟೋಗಳನ್ನ ಶೇರ್ ಮಾಡುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿ ಇರುತ್ತಿದ್ದರು.
ಸದ್ಯ ಸಾನಿಯಾ ಮಿರ್ಜಾ ಅವರು ಸಾಮಾಜಿಕ ಜಾಲತಾಣದಲ್ಲಿ (Social Media) ಬೇರೆ ವಿಷಯವಾಗಿ ಸಕತ್ ಸುದ್ದಿಯಲ್ಲಿ ಇದ್ದಾರೆ. ಹೌದು ಸಾನಿಯಾ ಮಿರ್ಜಾ ಅವರು ವಿಚ್ಛೇಧನದ ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗುತ್ತಿದೆ.
ಗಂಡನಿಂದ ದೂರವಾಗುತ್ತಿರುವ ಸಾನಿಯಾ ಮಿರ್ಜಾ
ಹೌದು ಸಾನಿಯಾ ಮಿರ್ಜಾ ಅವರು ಗಂಡ ಶೋಯೆಬ್ ಮಲಿಕ್ ಅವರಿಂದ ವಿಚ್ಛೇಧನವನ್ನ ಪಡೆದುಕೊಳ್ಳಲಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯಂತೆ ಹಬ್ಬಿದೆ. ಹೌದು ಸಾನಿಯಾ ಮಿರ್ಜಾ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಒಂದೇ ಒಂದು ಪೋಸ್ಟ್ ಈ ಸುದ್ದಿಗೆ ಕಾರಣವಾಗಿದೆ.
ಶೋಯೆಬ್ ಮಲಿಕ್ ಅವರು ಮಾಡೆಲ್ ಜೊತೆ ಇನ್ನೊಂದು ಸಂಬಂಧದವನ್ನ ಇಟ್ಟುಕೊಂಡ ಕಾರಣ ಸಾನಿಯಾ ಮಿರ್ಜಾ ಅವರು ಈಗ ವಿಚ್ಛೇಧನವನ್ನ ಪಡೆದುಕೊಳ್ಳಲು ನಿರ್ಧಾರವನ್ನ ಮಾಡಿದ್ದಾರೆ ಎಂದು ಪಾಕಿಸ್ತಾನದ ವರದಿಗಳು ಹೇಳುತ್ತಿದೆ.
ಸಾನಿಯಾ ಮತ್ತು ಮಲಿಕ್ ವಿಷಯವಾಗಿ ಮಾತನಾಡಿದ ಸಾನಿಯಾ ಗೆಳತೀ
ಹೌದು ಸಾನಿಯಾ ಮಿರ್ಜಾ ಮತ್ತು ಮಲಿಕ್ ಅವರು ವಿಚ್ಛೇಧನವನ್ನ ಪಡೆದುಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿ ಹಬ್ಬುತ್ತಿದ್ದಂತೆ ಇದರ ಬಗ್ಗೆ ಸಾನಿಯಾ ಅವರ ಗೆಳತೀ ಈಗ ಮಾತನಾಡಿದ್ದಾರೆ.
ಸಾನಿಯಾ ಮಿರ್ಜಾ ಅವರ ಗೆಳತೀ ನೀಡಿರುವ ಮಾಹತಿಯ ಪ್ರಕಾರ, ಇಬ್ಬರು ಈಗ ದೃಢ ನಿರ್ಧಾರವನ್ನ ಮಾಡಿದ್ದು ಇಬ್ಬರು ವಿಚ್ಛೇಧನವನ್ನ ಪಡೆದುಕೊಳ್ಳು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ. ಈಗ ವಿಚ್ಛೇಧನದ ಪ್ರಕ್ರಿಯೆ ಮುಗಿದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ವಿಷಯ ಬಹಿರಂಗವಾಗಿ ಹೊರಗೆ ಬೀಳಲಿದೆ ಎಂದು ಸಾನಿಯಾ ಮಿರ್ಜಾ ಗೆಳತೀ ಹೇಳಿದ್ದಾರೆ.
ಮಾಹಿತಿ ಖಚಿತ ಪಡಿಸಿದ ಪಾಕಿಸ್ತಾನ ಕ್ರಿಕೆಟ್ ಸದಸ್ಯರು
ಹೌದು ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಅವರು ದೂರವಾಗುತ್ತಿರುವುದು ನಿಜ ಎಂದು ಪಾಕಿಸ್ತಾನದ ಕೆಲವು ಕ್ರಿಕೆಟ್ ಆಟಗಾರರು ಮಾಹಿತಿಯ ಈಗಾಗಲೇ ಖಚಿತಪಡಿಸಿದ್ದಾರೆ. ಸದ್ಯ ವವರು ದುಬೈ ನಲ್ಲಿ ಇದ್ದು ಮಲಿಕ್ ಅವರು ಪಾಕಿಸ್ತಾನದಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.
ಇಬ್ಬರ ನಡುವೆ ಏನು ನಡೆದಿದೆ ಎಂದು ಯಾರಿಗೂ ತಿಳಿದಿಲ್ಲ, ಆದರೆ ಪಾಕಿಸ್ತಾನದ ಕೆಲವು ಮಾಧ್ಯಮಗಳು ಮಾಲೀಕ ಅವರಿಗೆ ಇನ್ನೊಂದು ಸಂಬಂಧ ಎಂದು ಹೇಳುತ್ತಿದೆ ಎಂದು ಕೆಲವು ಕ್ರಿಕೆಟ್ ಆಟಗಾರರು ಹೇಳಿದ್ದಾರೆ.
ಬೇರೆಬೇರೆ ಜೀವನ ಮಾಡುತ್ತಿದ್ದಾರೆ ಸಾನಿಯಾ ಮತ್ತು ಮಲಿಕ್
ಇಬ್ಬರು ಈಗಾಗಲೇ ದೂರವಾಗಿ ಜೀವನವನ್ನ ಮಾಡುತ್ತಿದ್ದು ಈಗಾಗಲೇ ವಿಚ್ಛೇಧನದ ಹಲವು ಪ್ರಕ್ರಿಯೆ ಮುಕ್ತಾಯವಾಗಿದೆ ಎಂದು ತಿಳಿದುಬಂದಿದೆ. 2010 ರಲ್ಲಿ ಇಬ್ಬರು ಮದುವೆಯನ್ನ ಮಾಡಿಕೊಂಡಿದ್ದು 2023 ರ ಆರಂಭದಲ್ಲೇ ಇಬ್ಬರು ಬೇರೆ ಬೇರೆಯಾಗಲಿದ್ದಾರೆ ಎಂದು ಪಾಕಿಸ್ತಾನದ ಕೆಲವು ವರದಿ ಹೇಳುತ್ತಿದೆ.
ಸದ್ಯ ಈ ವಿಷಯದ ಕುರಿತಂತೆ ಕುಟುಂಬದವರು ಇನ್ನೂ ಕೂಡ ಯಾವುದೇ ಮಾಹಿತಿಯನ್ನ ಬಹಿರಂಗಪಡಿಸಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಇಬ್ಬರ ಕುಟುಂಬದವರಿಂದ ಕೂಡ ಅಧಿಕೃತ ಮಾಹಿತಿ ಬಹಿರಂಗ ಆಗಲಿದೆ ಎಂದು ಹೇಳಲಾಗುತ್ತಿದೆ.